Viral Video: ಇವಿ ಸ್ಕೂಟರ್ ಅಗ್ನಿಅವಘಡದಲ್ಲಿ ಪಾರಾದ ಫುಡ್ ಡೆಲಿವರಿ ಬಾಯ್!

|

Updated on: Oct 27, 2022 | 8:36 PM

ಎಲೆಕ್ಟ್ರಿಕ್ ವಾಹನಗಳಲ್ಲಿ ಅಗ್ನಿ ಅವಘಡ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಚಲಿಸುತ್ತಿದ್ದ ಇವಿ ಸ್ಕೂಟರ್ ಒಂದು ಅಗ್ನಿಅವಘಡದಲ್ಲಿ ಸುಟ್ಟು ಕರಕಲಾದ ಪ್ರಕರಣ ದಾಖಲಾಗಿದೆ.

Viral Video: ಇವಿ ಸ್ಕೂಟರ್ ಅಗ್ನಿಅವಘಡದಲ್ಲಿ ಪಾರಾದ ಫುಡ್ ಡೆಲಿವರಿ ಬಾಯ್!
Ev scooter catches fire
Follow us on

ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮ ಮತ್ತು ನಿರ್ವಹಣಾ ವೆಚ್ಚ ತಗ್ಗಿಸುವ ಉದ್ದೇಶದಿಂದ ಇ-ಕಾರ್ಮಸ್ ಕಂಪನಿಯು ಇವಿ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಆದರೆ ಇವಿ ವಾಹನಗಳಲ್ಲಿ ಸುರಕ್ಷಾ ತಂತ್ರಜ್ಞಾನಗಳ ಕೊರತೆಯ ಪರಿಣಾಮ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಆಹಾರ ಪೂರೈಕೆ ಕಂಪನಿಯಾಗಿರುವ ಬಿಗ್ ಬಾಸ್ಕೆಟ್ ಗೆ ಸೇರಿದ ಇವಿ ಸ್ಕೂಟರ್ ಒಂದು ರಸ್ತೆ ಮಧ್ಯದಲ್ಲಿಯೇ ಹೊತ್ತು ಉರಿದ ಘಟನೆ ನಡೆದಿದೆ.

ನೋಯ್ಡಾದ ಸೆಕ್ಟರ್ 78ರ ಬಳಿ ಈ ಘಟನೆ ನಡೆದಿದ್ದು, ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಇ-ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಡೆಲಿವರಿ ಬಾಯ್ ಇ ಸ್ಕೂಟರ್ ಅನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಬೆಂಕಿ ಅವಘಡದಿಂದ ಪಾರಾಗಿದ್ದಾನೆ.

ಇ-ಸ್ಕೂಟರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಆಗಮಿಸಿದ ಫೈರ್ ಬ್ರಿಗೆಡ್ ಸಿಬ್ಬಂದಿಯು ಬೆಂಕಿ ನಂದಿಸಿದ್ದಾರೆ. ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಭಯದ ವಾತಾವರಣ ಉಂಟಾಗಿತ್ತು.

ಬೆಂಕಿ ಅವಘಡಗಳಿಗೆ ಬ್ಯಾಟರಿ ತಂತ್ರಜ್ಞಾನ ಕೊರತೆ

ದೇಶಾದ್ಯಂತ ಸದ್ಯ ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದರೂ ಸುರಕ್ಷಾ ತಂತ್ರಜ್ಞಾನ ಕೊರತೆಯಿಂದ ಬೆಂಕಿ ಅವಘಡಗಳು ಹೆಚ್ಚುತ್ತಿವೆ. ಮುಖ್ಯವಾಗಿ ಇವಿ ವಾಹನಗಳ ಬ್ಯಾಟರಿಯಲ್ಲಿ ಸುಧಾರಿತ ಕೂಲಿಂಗ್ ತಂತ್ರಜ್ಞಾನ ಇಲ್ಲದಿರುವುದು ಬೆಂಕಿ ಅವಘಡಗಳಿಗೆ ಮುಖ್ಯ ಕಾರಣವಾಗುತ್ತಿದೆ.

ಸುಧಾರಿತ ಕೂಲಿಂಗ್ ತಂತ್ರಜ್ಞಾನದ ಕೊರತೆಯು ಬಜೆಟ್ ಬೆಲೆಯ ಇವಿ ವಾಹನಗಳಲ್ಲಿಯೇ ಹೆಚ್ಚಿನ ಮಟ್ಟದ ಬೆಂಕಿ ಅವಘಡಗಳಿಗೆ ಕಾರಣವಾಗುತ್ತಿದ್ದು, ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯು ಇತ್ತೀಚೆಗೆ ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯಗೊಳಿಸಿದೆ. ಇವಿ ವಾಹನಗಳಿಂದ ಸಂಭವಿಸುವ ಅವಘಡಗಳಿಗೆ ಆಯಾ ವಾಹನ ತಯಾರಕ ಕಂಪನಿಗಳನ್ನೇ ಹೊಣೆ ಮಾಡುವುದಾಗಿ ಘೋಷಣೆ ಮಾಡಲಾಗಿದ್ದು, ಭಾರೀ ಪ್ರಮಾಣದ ದಂಡವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

Published On - 8:33 pm, Thu, 27 October 22