GST 2.0: ಜಿಎಸ್‌ಟಿ ಕಡಿತ ಎಫೆಕ್ಟ್: ಶೋ ರೂಂಗಳಿಗೆ ಮುಗಿಬಿದ್ದ ಗ್ರಾಹಕರು, ಹೊಸ ದಾಖಲೆ ಸೃಷ್ಟಿಸಿದ ಮಾರುತಿ-ಹುಂಡೈ

ನವರಾತ್ರಿಯ ಮೊದಲ ದಿನದಂದು ಮಧ್ಯಾಹ್ನದವರೆಗೆ ಕಾರು ವಿತರಣೆಯಲ್ಲಿ ದಾಖಲೆಯ ಶೇಕಡಾ 400 ರಷ್ಟು ಹೆಚ್ಚಳವಾಗಿದೆ ಎಂದು ಕಾರ್ಸ್24 ಹೇಳಿದೆ. ಸೋಮವಾರ ಸಂಜೆಯ ವೇಳೆಗೆ ತನ್ನ ಚಿಲ್ಲರೆ ಮಾರಾಟ 25,000 ಯುನಿಟ್‌ಗಳನ್ನು ದಾಟಿದೆ ಮತ್ತು ದಿನದ ಅಂತ್ಯದ ವೇಳೆಗೆ ಅದರ ಮಾರಾಟ 30,000 ದಾಟಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.

GST 2.0: ಜಿಎಸ್‌ಟಿ ಕಡಿತ ಎಫೆಕ್ಟ್: ಶೋ ರೂಂಗಳಿಗೆ ಮುಗಿಬಿದ್ದ ಗ್ರಾಹಕರು, ಹೊಸ ದಾಖಲೆ ಸೃಷ್ಟಿಸಿದ ಮಾರುತಿ-ಹುಂಡೈ
Car
Edited By:

Updated on: Sep 23, 2025 | 4:13 PM

ಬೆಂಗಳೂರು (ಸೆ. 23): ಸೋಮವಾರದಿಂದ (ಸೆಪ್ಟೆಂಬರ್ 22) ಹೊಸ ಜಿಎಸ್‌ಟಿ ದರಗಳು ಜಾರಿಗೆ ಬಂದ ನಂತರ, ಕಾರುಗಳನ್ನು ಖರೀದಿಸಲು ಗ್ರಾಹಕರು ಅಪಾರ ಸಂಖ್ಯೆಯಲ್ಲಿ ವಿವಿಧ ಕಾರು ಕಂಪನಿಗಳ ಶೋ ರೂಂಗಳಿಗೆ ಧಾವಿಸಿದ್ದಾರೆ. ಸರ್ಕಾರವು ಸಣ್ಣ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಿದೆ. ಹೊಸ ಜಿಎಸ್‌ಟಿ ದರಗಳ ಅನುಷ್ಠಾನದೊಂದಿಗೆ, ನವರಾತ್ರಿಯ ಮೊದಲ ದಿನದಂದು ಬಹಳಷ್ಟು ಕಾರು ಖರೀದಿ ನಡೆದಿದೆ. ಕಳೆದ ಹಲವಾರು ವರ್ಷಗಳಲ್ಲಿ ಮಾರುತಿ ಸುಜುಕಿ (Maruti Suzuki) ಮತ್ತು ಹುಂಡೈ ಒಂದೇ ದಿನದ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿವೆ. ಸೋಮವಾರ ಸಂಜೆಯ ವೇಳೆಗೆ ತನ್ನ ಚಿಲ್ಲರೆ ಮಾರಾಟ 25,000 ಯುನಿಟ್‌ಗಳನ್ನು ದಾಟಿದೆ ಮತ್ತು ದಿನದ ಅಂತ್ಯದ ವೇಳೆಗೆ ಅದರ ಮಾರಾಟ 30,000 ದಾಟಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.

ಮಾರುತಿ ಸುಜುಕಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) ಪಾರ್ಥೋ ಬ್ಯಾನರ್ಜಿ ಮಾತನಾಡಿ, ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಸುಮಾರು 80,000 ಗ್ರಾಹಕರು ವಿಚಾರಣೆ ನಡೆಸಿದ್ದಾರೆ. ಸಣ್ಣ ಕಾರು ಮಾದರಿಗಳ ಬುಕಿಂಗ್ ಶೇ. 50 ರಷ್ಟು ಹೆಚ್ಚಳ ಕಂಡಿದ್ದು, ಕೆಲವು ಮಾದರಿಗಳ ಸ್ಟಾಕ್‌ಗಳು ಖಾಲಿಯಾಗುವ ಸಾಧ್ಯತೆಯಿದೆ.

ಮಾರುತಿ ಹೊರತುಪಡಿಸಿ, ಹುಂಡೈ ಮೋಟಾರ್ ಇಂಡಿಯಾದ ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗರ್ಗ್ ಅವರು ಹುಂಡೈ ಸೋಮವಾರ 11,000 ಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ, ಇದು ಕಳೆದ 5 ವರ್ಷಗಳಲ್ಲಿ ಕಂಪನಿಯ ಅತ್ಯುತ್ತಮ ಮಾರಾಟ ಅಂಕಿ ಅಂಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ
ಹೊಸ ಜಿಎಸ್‌ಟಿ ದರದಿಂದ ಸೆಕೆಂಡ್ ಹ್ಯಾಂಡ್ ಕಾರು ಅಗ್ಗವಾಗುತ್ತವೆಯೇ?
ಫ್ಲಿಪ್‌ಕಾರ್ಟ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್-ಕ್ಲಾಸಿಕ್ 350 ಖರೀದಿಸಿ
ಆಗಸ್ಟ್‌ನಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು ಯಾವ ಕಂಪನಿ?
ನೀವು ಮಾಡುವ ಈ ಸಣ್ಣ ತಪ್ಪುಗಳು ಬೈಕ್‌ನ ಎಂಜಿನ್‌ಗೆ ಹಾನಿ ಮಾಡಬಹುದು

GST 2.0: ಹೊಸ ಜಿಎಸ್‌ಟಿ ದರದಿಂದ ಸೆಕೆಂಡ್ ಹ್ಯಾಂಡ್ ಕಾರು ಅಗ್ಗವಾಗುತ್ತವೆಯೇ?, ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸಣ್ಣ ಕಾರುಗಳ ಬೆಲೆ ₹1.2 ಲಕ್ಷದವರೆಗೆ ಅಗ್ಗ

ಸಣ್ಣ ಕಾರುಗಳ ಮೇಲಿನ ಜಿಎಸ್‌ಟಿ ದರ ಕಡಿತದಿಂದಾಗಿ ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಸಿಎನ್‌ಜಿ ಮತ್ತು ಎಲ್‌ಪಿಜಿ ಎಂಜಿನ್‌ಗಳನ್ನು ಹೊಂದಿರುವ 1200 ಸಿಸಿ ವರೆಗಿನ ಕಾರುಗಳ ಬೆಲೆಗಳು 40,000 ರೂ.ಗಳಿಂದ 1.2 ಲಕ್ಷ ರೂ.ಗಳಿಗೆ ಇಳಿದಿವೆ. ಕಳೆದ ಮೂರು-ನಾಲ್ಕು ವಾರಗಳಿಂದ ಗ್ರಾಹಕರ ವಿಚಾರಣೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ ಮತ್ತು ನವರಾತ್ರಿಯ ಮೊದಲ ದಿನದಂದು ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ರಾಷ್ಟ್ರೀಯ ಆಟೋಮೊಬೈಲ್ ವಿತರಕರ ಸಂಸ್ಥೆಯಾದ ಎಫ್‌ಎಡಿಎ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ್ ಹೇಳಿದ್ದಾರೆ.

cars24 ವಿತರಣೆಗಳು ದಾಖಲೆಯ 400% ರಷ್ಟು ಏರಿಕೆ

ಜಿಎಸ್‌ಟಿ ಕಡಿತದ ಕುರಿತು ವಿಗ್ವೇಶ್ವರ್ ಮಾತನಾಡಿ, ಈ ಸುಧಾರಣೆಯು ಈ ಹಬ್ಬದ ಋತುವಿನಲ್ಲಿ ಮಾತ್ರವಲ್ಲದೆ ಮುಂಬರುವ ಹಲವು ವರ್ಷಗಳವರೆಗೆ ಆಟೋಮೊಬೈಲ್ ಉದ್ಯಮಕ್ಕೆ ಪ್ರಯೋಜನಕಾರಿ ಆಗಿದೆ ಎಂದು ಹೇಳಿದರು. ಬಳಸಿದ ಕಾರು ವ್ಯವಹಾರಕ್ಕೆ ಸಂಬಂಧಿಸಿದ ಆನ್‌ಲೈನ್ ಪ್ಲಾಟ್‌ಫಾರ್ಮ್ ಕಾರ್ಸ್ 24, ನವರಾತ್ರಿಯ ಮೊದಲ ದಿನದ ಮಧ್ಯಾಹ್ನದವರೆಗೆ, ಕಾರು ವಿತರಣೆಯಲ್ಲಿ ಶೇ. 400 ರಷ್ಟು ದಾಖಲೆಯ ಹೆಚ್ಚಳವನ್ನು ದಾಖಲಿಸಿದೆ ಎಂದು ಹೇಳಿದರು. ದೆಹಲಿ-ಎನ್‌ಸಿಆರ್ ಪ್ರದೇಶವು ಬಳಸಿದ ಕಾರುಗಳ ಅತಿ ಹೆಚ್ಚು ಮಾರಾಟವನ್ನು ಕಂಡಿದ್ದು, ನಂತರ ಅಹಮದಾಬಾದ್, ಬೆಂಗಳೂರು, ಪುಣೆ ಮತ್ತು ಮುಂಬೈ ಪ್ರದೇಶಗಳು ಸೇರಿವೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ