Hero Karizma XMR: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೀರೋ ಕರಿಜ್ಮಾ!

|

Updated on: Apr 01, 2023 | 2:31 PM

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಕರಿಜ್ಮಾ ಬೈಕ್ ಮಾದರಿಯನ್ನ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯಂತೆ ಮರಳಿ ಪರಿಚಯಿಸುತ್ತಿದ್ದು, ಹೊಸ ಬೈಕ್ ಮಾದರಿಯು ಹಲವಾರು ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೊಕಾರ್ಪ್(Hero MotoCorp) ಕಂಪನಿಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಕರಿಜ್ಮಾ(karizma) ಆವೃತ್ತಿಯನ್ನ ಮರಳಿಪರಿಚಯಿಸಲು ಸಿದ್ದತೆ ನಡೆಸಿದ್ದು, ಹೊಸ ಬೈಕ್ ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

2003ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಕರಿಜ್ಮಾ ಬೈಕ್ ಮಾದರಿಯು ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿತ್ತು. ಆದರೆ ವಾಹನ ಉತ್ಪಾದನೆ ತರಲಾದ ಹಲವು ಬದಲಾವಣೆಗಳ ಪರಿಣಾಮ ಕರಿಜ್ಮಾ ಬೈಕ್ ಮಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಮರಳಿ ಪರಿಚಯಿಸುತ್ತಿದ್ದು, ಹೊಸ ಬೈಕ್ ಮಾದರಿಗಾಗಿ ಕಂಪನಿಯು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್ ಮಾರ್ಕ್ ಸಲ್ಲಿಸಿದೆ.

ಇದನ್ನೂ ಓದಿ: ಸ್ಮಾರ್ಟ್ ಫೀಚರ್ಸ್ ಗಳೊಂದಿಗೆ ಹೋಂಡಾ ಆಕ್ಟೀವಾ 125 ಹೆಚ್-ಸ್ಮಾರ್ಟ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಕರಿಜ್ಮಾ ವಿನೂತನ ಆವೃತ್ತಿಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರತ್ಯೇಕ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ತೆರೆಯುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು 210ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಜೊತೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಣೆ ಮಾಡುವ ಸಾಧ್ಯತೆಗಳಿವೆ. ಇದು 25 ಹಾರ್ಸ್ ಉತ್ಪಾದನೆಯೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಜೋಡಣೆ ಪಡೆದುಕೊಳ್ಳಲಿದೆ.

ಹೊಸ ಫೀಚರ್ಸ್ ಗಳು

ಹೊಸ ಬೈಕ್ ಮಾದರಿಯನ್ನ ಪ್ರೀಮಿಯಂ ಆವೃತ್ತಿಯಾಗಿ ಮಾರಾಟ ಮಾಡಲು ನಿರ್ಧರಿಸಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್ ನೀಡುತ್ತಿದ್ದು, ಹೊಸ ಬೈಕಿನಲ್ಲಿ ಎಲ್‌ಇಡಿ ಲೈಟಿಂಗ್, ಬ್ಲೂಟೂತ್ ಸಂಪರ್ಕಿತ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಎಂಜಿನ್ ಕಟ್ ಆಫ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಸೆನ್ಸಾರ್‌ ಸೇರಿದಂತೆ ಹಲವು ಸೌಲಭ್ಯಗಳನ್ನ ನೀಡಲಾಗುತ್ತಿದೆ.

ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ಪ್ರೇರಿತ ಹೋಂಡಾ ಎಸ್ ಪಿ125 ಬಿಡುಗಡೆ

ನಿರೀಕ್ಷಿತ ಬೆಲೆ(ಎಕ್ಸ್ ಶೋರೂಂ ದರ)

ಈ ಮೂಲಕ ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು 160 ಸಿಸಿ ಯಿಂದ 200 ಸಿಸಿ ಬೈಕ್ ಮಾದರಿಗಳ ವಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Published On - 2:30 pm, Sat, 1 April 23