ಸ್ಮಾರ್ಟ್ ಫೀಚರ್ಸ್ ಗಳೊಂದಿಗೆ ಹೋಂಡಾ ಆಕ್ಟೀವಾ 125 ಹೆಚ್-ಸ್ಮಾರ್ಟ್ ಬಿಡುಗಡೆ
ಹೋಂಡಾ ಟು ವ್ಹೀಲರ್ ಕಂಪನಿಯು ಭಾರತದಲ್ಲಿ ಹೊಸ ಆಕ್ಟೀವಾ 125 ಹೆಚ್-ಸ್ಮಾರ್ಟ್ ಆವೃತ್ತಿಯನ್ನ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಈ ಬಾರಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಹೋಂಡಾ ಆಕ್ಟೀವಾ 125 ಹೆಚ್-ಸ್ಮಾರ್ಟ್ ಬಿಡುಗಡೆ
ಹೊಸ ಸ್ಕೂಟರ್ ಮಾದರಿಯು ಸ್ಟ್ಯಾಂಡರ್ಡ್, ಡಿಸ್ಕ್ ಮತ್ತು ಹೆಚ್-ಸ್ಮಾರ್ಟ್ ರೂಪಾಂತರದಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 78,920 ಆರಂಭಿಕ ಬೆಲೆ ಹೊಂದಿದ್ದು, ಹೆಚ್-ಸ್ಮಾರ್ಟ್ ರೂಪಾಂತರವು ರೂ. 88,093 ಬೆಲೆ ಹೊಂದಿದೆ.