ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?: ಇಲ್ಲಿದೆ ನೋಡಿ ಪಟ್ಟಿ

|

Updated on: Mar 24, 2025 | 3:04 PM

ಫೆಬ್ರವರಿ 2025 ರಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿತು. ಅದರ ಮಾರಾಟದಲ್ಲಿ ಹೆಚ್ಚಳ ದಾಖಲಾಗಿದೆ. ಫೆಬ್ರವರಿ 2025 ರಲ್ಲಿ, 19,879 ಯುನಿಟ್‌ಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ 2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಫೆಬ್ರವರಿ 2024 ರಲ್ಲಿ, 19,412 ವ್ಯಾಗನ್‌ಆರ್ ಯುನಿಟ್‌ಗಳು ಮಾರಾಟವಾಗಿದ್ದವು.

ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?: ಇಲ್ಲಿದೆ ನೋಡಿ ಪಟ್ಟಿ
Best Selling Cars
Follow us on

(ಬೆಂಗಳೂರು, ಮಾ: 24): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು (Hatchback Cars) ದೊಡ್ಡ ಪಾತ್ರವನ್ನು ವಹಿಸುತ್ತವೆ. ಎಸ್​ಯುವಿ ಗಳಿಗೆ ಹೋಲಿಸಿದರೆ ಅವುಗಳ ಮಾರುಕಟ್ಟೆ ಪಾಲು ಸ್ವಲ್ಪ ಕುಸಿದಿದ್ದರೂ, ಬಜೆಟ್ ಫ್ಯಾಮಿಲಿ ಕಾರುಗಳ ಖರೀದಿದಾರರು ಇನ್ನೂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಯಸುತ್ತಾರೆ. ಹ್ಯಾಚ್‌ಬ್ಯಾಕ್ ಕಾರುಗಳು ಅವುಗಳ ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ. ಫೆಬ್ರವರಿ 2025 ರಲ್ಲಿಯೂ ಸಹ, ಹ್ಯಾಚ್‌ಬ್ಯಾಕ್ ಕಾರು ಮಾರಾಟವು ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗಿದೆ. ಫೆಬ್ರವರಿ 2025 ರಲ್ಲಿ ಸೇಲ್ ಆದ ಟಾಪ್ ಟಾಚ್‌ಬ್ಯಾಕ್ ಕಾರುಗಳು ಯಾವುವು ಎಂಬುದನ್ನು ನೋಡೋಣ.

ಫೆಬ್ರವರಿ 2025 ರಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿತು. ಅದರ ಮಾರಾಟದಲ್ಲಿ ಹೆಚ್ಚಳ ದಾಖಲಾಗಿದೆ. ಫೆಬ್ರವರಿ 2025 ರಲ್ಲಿ, 19,879 ಯುನಿಟ್‌ಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ 2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಫೆಬ್ರವರಿ 2024 ರಲ್ಲಿ, 19,412 ವ್ಯಾಗನ್‌ಆರ್ ಯುನಿಟ್‌ಗಳು ಮಾರಾಟವಾಗಿದ್ದವು.

ಮಾರುತಿ ಸುಜುಕಿ ಸ್ವಿಫ್ಟ್ ಕಳೆದ ತಿಂಗಳು 16,269 ಯುನಿಟ್‌ಗಳನ್ನು ಮಾರಾಟ ಮಾಡಿ ಟಾಪ್ 10 ರಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಸ್ವಿಫ್ಟ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 24 ರಷ್ಟು ಹೆಚ್ಚಾಗಿದೆ. ಫೆಬ್ರವರಿ 2024 ರಲ್ಲಿ, 13,165 ಯುನಿಟ್‌ಗಳು ಮಾರಾಟವಾದವು.

ಇದನ್ನೂ ಓದಿ
ಮಾರುತಿ ಆಲ್ಟೊದ ಮೈಲೇಜ್ ಈಗ ಮೊದಲಿಗಿಂತ ಹೆಚ್ಚಾಗಲಿದೆ
ಕಾರು ಖರೀದಿದಾರರಿಗೆ ಬಿಗ್ ಶಾಕ್: ಹುಂಡೈ ಕಾರುಗಳ ಬೆಲೆಗಳ ಬೆಲೆ ಏರಿಕೆ
ಭಾರತದಲ್ಲಿ ಬಿಡುಗಡೆ ಆಯಿತು ಮರ್ಸಿಡಿಸ್​ನ ಹೊಸ ದುಬಾರಿ ಕಾರು: ಬೆಲೆ ಎಷ್ಟು?
ಈ ಕಂಪನಿಯ ಕಾರು ಮೊಬೈಲ್ ಗಿಂತ ವೇಗವಾಗಿ ಚಾರ್ಜ್ ಆಗುತ್ತೆ

ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಮಾರಾಟವು ಫೆಬ್ರವರಿ 2024 ರಲ್ಲಿ ಮಾರಾಟವಾದ 17,517 ಯುನಿಟ್‌ಗಳಿಗೆ ಹೋಲಿಸಿದರೆ ಫೆಬ್ರವರಿ 2025 ರಲ್ಲಿ 15,480 ಯುನಿಟ್‌ಗಳಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 12 ರಷ್ಟು ಕುಸಿದಿದೆ.

ಮಾರುತಿ ಸುಜುಕಿಯ ಆರಂಭಿಕ ಹಂತದ ಕಾರು ಆಲ್ಟೊ ಮಾರಾಟ ಇತ್ತೀಚಿನ ತಿಂಗಳುಗಳಲ್ಲಿ ಕುಸಿದಿದೆ. ಫೆಬ್ರವರಿ 2025 ರಲ್ಲಿ, ಆಲ್ಟೊ ಕೆ10 ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 23 ರಷ್ಟು ಭಾರಿ ಕುಸಿತ ಕಂಡಿದ್ದು, 8,541 ಯುನಿಟ್‌ಗಳು ಮಾರಾಟವಾಗಿವೆ. ಆದರೆ ಫೆಬ್ರವರಿ 2024 ರಲ್ಲಿ, ಈ ಕೈಗೆಟುಕುವ ಹ್ಯಾಚ್‌ಬ್ಯಾಕ್‌ನ 11,723 ಯುನಿಟ್‌ಗಳು ಮಾರಾಟವಾಗಿತ್ತು.

Alto K10: ಮಾರುತಿ ಆಲ್ಟೊದ ಮೈಲೇಜ್ ಈಗ ಮೊದಲಿಗಿಂತ ಹೆಚ್ಚಾಗಲಿದೆ: ಕಂಪನಿಯಿಂದ ದೊಡ್ಡ ನಿರ್ಧಾರ

ಟಾಟಾ ಮೋಟಾರ್ಸ್‌ನ ಆರಂಭಿಕ ಹಂತದ ಕಾರು ಟಿಯಾಗೊ ಮಾರಾಟವು ಫೆಬ್ರವರಿ 2025 ರಲ್ಲಿ ಬಹುತೇಕ ಸ್ಥಿರವಾಗಿತ್ತು. ಇದರ 6,954 ಯುನಿಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿ 2024 ರಲ್ಲಿ 6,947 ಯುನಿಟ್‌ಗಳು ಮಾರಾಟವಾಗಿವೆ.

ಹುಂಡೈ ಮೋಟಾರ್ ಇಂಡಿಯಾದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಗ್ರ್ಯಾಂಡ್ ಐ10 ನಿಯೋಸ್ ಮಾರಾಟವು ಫೆಬ್ರವರಿ 2025 ರಲ್ಲಿ ಬಹುತೇಕ ಸ್ಥಿರವಾಗಿತ್ತು. ಇದು 4,940 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಫೆಬ್ರವರಿ 2024 ರಲ್ಲಿ 4,947 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಗ್ಲಾಂಜಾ ಫೆಬ್ರವರಿ 2025 ರಲ್ಲಿ 4,596 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಫೆಬ್ರವರಿ 2024 ರಲ್ಲಿ, ಟೊಯೋಟಾ ಗ್ಲಾಂಜಾದ 4,581 ಯುನಿಟ್‌ಗಳು ಮಾರಾಟವಾದವು.

ಫೆಬ್ರವರಿ 2025 ರಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಮಾರಾಟವು ಶೇ. 18 ರಷ್ಟು ಬೆಳವಣಿಗೆ ದಾಖಲಿಸಿದೆ. ಇದರ 4,226 ಯುನಿಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿ 2024 ರಲ್ಲಿ 3,586 ಯುನಿಟ್‌ಗಳು ಮಾರಾಟವಾಗಿವೆ. ಹಾಗೆಯೆ ಫೆಬ್ರವರಿ 2025 ರಲ್ಲಿ ಹುಂಡೈನ ಪ್ರೀಮಿಯಂ ಹ್ಯಾಚ್‌ಬ್ಯಾಕ್ i20 ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 29 ರಷ್ಟು ಭಾರಿ ಕುಸಿತವನ್ನು ದಾಖಲಿಸಿದೆ. ಕಳೆದ ತಿಂಗಳು ಇದರ 3,627 ಯುನಿಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿ 2024 ರಲ್ಲಿ 5,131 ಯುನಿಟ್‌ಗಳು ಮಾರಾಟವಾಗಿವೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ