Alto K10: ಮಾರುತಿ ಆಲ್ಟೊದ ಮೈಲೇಜ್ ಈಗ ಮೊದಲಿಗಿಂತ ಹೆಚ್ಚಾಗಲಿದೆ: ಕಂಪನಿಯಿಂದ ದೊಡ್ಡ ನಿರ್ಧಾರ
Maruti Alto k10: ಮಾರುತಿ ಸುಜುಕಿ ಇಂಡಿಯಾ 10 ನೇ ತಲೆಮಾರಿನ ಆಲ್ಟೊ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಆಲ್ಟೊ ಕಾರಿನ ತೂಕವನ್ನು 100 ಕೆಜಿಯಷ್ಟು ಕಡಿಮೆ ಮಾಡಲು ಯೋಜಿಸಿದೆ. ಕಂಪನಿಯು ಅದಕ್ಕಾಗಿ ಸಂಪೂರ್ಣ ಯೋಜನೆಯನ್ನು ಮಾಡಿದೆ. ಮಾರುತಿ ಸುಜುಕಿ ಹೊಸ ಆಲ್ಟೊ 2026 ರ ವೇಳೆಗೆ ಬಿಡುಗಡೆಯಾಗಲಿದೆ.

(ಬೆಂಗಳೂರು, ಮಾ: 23): ದೇಶದ ಅತಿದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ (Maruti Suzuki) ಇಂಡಿಯಾ ಕಳೆದ ಕೆಲವು ವಾರಗಳಿಂದ ಹೆಚ್ಚು ಸುದ್ದಿಯಲ್ಲಿದೆ. ಮೊನ್ನೆಯಷ್ಟೆ ಏಪ್ರಿಲ್ನಿಂದ ಕಾರುಗಳ ಬೆಲೆಯಲ್ಲಿ ಹೆಚ್ಚಳ ಆಗಲಿದೆ ಎಂದು ಹೇಳಿತ್ತು. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಇದರ ಬೆನ್ನಲ್ಲೇ ಕಂಪನಿ ಕಡೆಯಿಂದ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಕಂಪನಿಯ ಜನಪ್ರಿಯ ಕಾರು ಮಾರುತಿ ಆಲ್ಟೊದ ಮೈಲೇಜ್ ಶೀಘ್ರದಲ್ಲೇ ಮೊದಲಿಗಿಂತ ಹೆಚ್ಚಾಗಲಿದೆಯಂತೆ. ಮಾರುತಿ ಸುಜುಕಿ ಇಂಡಿಯಾ 10 ನೇ ತಲೆಮಾರಿನ ಆಲ್ಟೊ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದಕ್ಕಾಗಿ ಕಂಪನಿಯು ಕಾರಿನಲ್ಲಿ ಉತ್ತಮ ವ್ಯವಸ್ಥೆಯನ್ನು ಮಾಡಲಿದೆ.
ಮಾರುತಿ ಸುಜುಕಿ ಕಂಪನಿಯು ಮಾರುತಿ ಆಲ್ಟೊ ಕಾರಿನ ತೂಕವನ್ನು 100 ಕೆಜಿಯಷ್ಟು ಕಡಿಮೆ ಮಾಡಲು ಯೋಜಿಸಿದೆ. ಆದರೆ, ಈ ಕೆಲಸ ಮಾಡುವುದು ದೊಡ್ಡ ಸವಾಲು ಎನ್ನಬಹುದು. ಇದರ ಹೊರತಾಗಿಯೂ, ಕಂಪನಿಯು ಅದಕ್ಕಾಗಿ ಸಂಪೂರ್ಣ ಯೋಜನೆಯನ್ನು ಮಾಡಿದೆ. ರಶ್ಲೇನ್ ಸುದ್ದಿಗಳ ಪ್ರಕಾರ, ಮಾರುತಿ ಸುಜುಕಿ ಹೊಸ ಆಲ್ಟೊ 2026 ರ ವೇಳೆಗೆ ಬಿಡುಗಡೆಯಾಗಲಿದೆ. ಈ ಬಾರಿ ಕಾರಿನ ತೂಕವನ್ನು 100 ಕೆಜಿಯಷ್ಟು ಕಡಿಮೆ ಮಾಡಲಿದ್ದು, 580 ಕೆಜಿಗೆ ಇಳಿಸಲು ಕಂಪನಿ ಕೆಲಸ ಮಾಡುತ್ತಿದೆ. ಪ್ರಸ್ತುತ ಮಾರುತಿ ಆಲ್ಟೊದ ಕನಿಷ್ಠ ತೂಕ 680 ಕೆಜಿ. ಇದಕ್ಕಾಗಿ ಕಂಪನಿಯು ಕಾರಿನಲ್ಲಿ ಹಗುರವಾದ ಹಾಗೆಯೆ ಬಲದಲ್ಲಿ ವಸ್ತುಗಳನ್ನು ಬಳಸಲು ಯೋಜಿಸಿದೆ. ಇದಕ್ಕಾಗಿ ಕಂಪನಿಯು ಅತಿ ಹೆಚ್ಚು ಸಾಮರ್ಥ್ಯದ ಉಕ್ಕನ್ನು ಬಳಸಬಹುದು. ಅಲ್ಲದೆ, ಈ ಕಾರನ್ನು ಹೊಸ ಸುಧಾರಿತ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಬಹುದು.
Hyundai: ಕಾರು ಖರೀದಿದಾರರಿಗೆ ಬಿಗ್ ಶಾಕ್: ಮಾರುತಿ-ಟಾಟಾ ಬಳಿಕ ಹುಂಡೈ ಕಾರುಗಳ ಬೆಲೆಗಳ ಬೆಲೆ ಏರಿಕೆ
ಮಾರುತಿ ಸುಜುಕಿಯ ವಿವಿಧ ರೂಪಾಂತರಗಳನ್ನು ಅವಲಂಬಿಸಿ, ಅದರ ತೂಕವು ಪ್ರಸ್ತುತ 680 ಕೆಜಿಯಿಂದ 760 ಕೆಜಿ ವರೆಗೆ ಇರುತ್ತದೆ. 2024 ರಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ, ಮಾರುತಿ ಸುಜುಕಿಯ ಪೋಷಕ ಕಂಪನಿ ಸುಜುಕಿ ಹೊಸ ಪೀಳಿಗೆಯ ಆಲ್ಟೊ ತೂಕ ಕಡಿತವನ್ನು ಹೊಂದಿರುತ್ತದೆ ಎಂದು ಹೇಳಿತ್ತು. ಅಂತಹ ಪರಿಸ್ಥಿತಿಯಲ್ಲಿ, ಹೊಸ ಶ್ರೇಣಿಯ ಆಲ್ಟೊದ ತೂಕ 580 ಕೆಜಿಯಿಂದ 660 ಕೆಜಿ ವರೆಗೆ ಇರುತ್ತದೆ. ಇದಕ್ಕೂ ಮೊದಲು, 6ನೇ ತಲೆಮಾರಿನ ಮಾರುತಿ ಆಲ್ಟೊದ ತೂಕ 720 ಕೆಜಿಯಿಂದ 810 ಕೆಜಿ ವರೆಗೆ ಇತ್ತು.
ಮೈಲೇಜ್ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ:
ಕಾರಿನ ತೂಕ ಕಡಿಮೆಯಾದ ಕಾರಣ, ಮಾರುತಿ ಆಲ್ಟೊ ಗ್ರಾಹಕರಿಗೆ ದೊರೆಯುವ ಅತಿದೊಡ್ಡ ಪ್ರಯೋಜನವೆಂದರೆ ಮೈಲೇಜ್ ಹೆಚ್ಚಳ. ಇಷ್ಟೇ ಅಲ್ಲ, ಕಾರಿನ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ. ಇದು ವಾಹನಗಳ ಹೊಗೆಯನ್ನು ಸಹ ಕಡಿಮೆ ಮಾಡುತ್ತದೆ. ಹೊಸ ಮಾರುತಿ ಆಲ್ಟೊದಲ್ಲಿ ಕಂಪನಿಯು 657 ಸಿಸಿ 3-ಸಿಲಿಂಡರ್ ಎಂಜಿನ್ ಅನ್ನು ಒದಗಿಸಬಹುದು. ಇದು 49ps ಪವರ್ ಮತ್ತು 58 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಈ ಕಾರಿನಲ್ಲಿ 1.9 ಕಿಲೋವ್ಯಾಟ್ ಇಂಟಿಗ್ರೇಟೆಡ್ ಹೈಬ್ರಿಡ್ ಕಿಟ್ ಅನ್ನು ಒದಗಿಸಬಹುದು. ಇದು ಕಾರಿನ ಮೈಲೇಜ್ ಅನ್ನು ಸಹ ಸುಧಾರಿಸುತ್ತದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Sun, 23 March 25