Mercedes Maybach SL 680: ಭಾರತದಲ್ಲಿ ಬಿಡುಗಡೆ ಆಯಿತು ಮರ್ಸಿಡಿಸ್ನ ಹೊಸ ದುಬಾರಿ ಕಾರು: ಬೆಲೆ ಎಷ್ಟು ನೋಡಿ
ಮರ್ಸಿಡಿಸ್-ಬೆನ್ಜ್ ಮೇಬ್ಯಾಕ್ SL 680 ಮಾನೋಗ್ರಾಮ್ ಸರಣಿಯ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಎಕ್ಸ್ ಶೋ ರೂಂ ಬೆಲೆ 4.2 ಕೋಟಿ ರೂ. ಇದು ಐಷಾರಾಮಿ ವೈಶಿಷ್ಟ್ಯಗಳು ಮತ್ತು ಸ್ಪೋರ್ಟ್ಸ್ ಕಾರಿನ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ನೀವು ಎರಡು ಬಣ್ಣದಲ್ಲಿ ಕಾರುಗಳನ್ನು ಖರೀದಿಸಬಹುದು. ಈ ಕಾರು ರೆಡ್ ಆಂಬಿಯನ್ಸ್ ಮತ್ತು ವೈಟ್ ಆಂಬಿಯನ್ಸ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

(ಬೆಂಗಳೂರು, ಮಾ: 20): ಮರ್ಸಿಡಿಸ್-ಬೆನ್ಜ್‌ನ (Mercedes Benz) ಮೇಬ್ಯಾಕ್ ಸರಣಿಯ ಕಾರುಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಇದೀಗ ಮರ್ಸಿಡಿಸ್ ಬೆಂಜ್ ಇಂಡಿಯಾ ದೇಶದಲ್ಲಿ ಮರ್ಸಿಡಿಸ್-ಮೇಬ್ಯಾಕ್ SL 680 ಮಾನೋಗ್ರಾಮ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಓಪನ್-ಟಾಪ್ 2 ಸೀಟುಗಳ ಕಾರಾಗಿದೆ. ಇದರಲ್ಲಿ ಸ್ಪೋರ್ಟ್ಸ್ ಕಾರ್ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ. ಇದರಲ್ಲಿ ಕೇವಲ 3 ಯುನಿಟ್‌ಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಾಗುವುದು. ಆದರೆ ಇದರ ವಿತರಣೆಗಾಗಿ ನೀವು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ. ಕಂಪನಿಯು ಮುಂದಿನ ವರ್ಷ 2026 ರ ಮೊದಲ ತ್ರೈಮಾಸಿಕದಲ್ಲಿ ತನ್ನ ವಿತರಣೆಯನ್ನು ಪ್ರಾರಂಭಿಸಲಿದೆ.
ಮರ್ಸಿಡಿಸ್-ಬೆನ್ಜ್ ಮೇಬ್ಯಾಕ್ SL 680 ಮಾನೋಗ್ರಾಮ್ ಸರಣಿಯ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಎಕ್ಸ್ ಶೋ ರೂಂ ಬೆಲೆ 4.2 ಕೋಟಿ ರೂ. ಇದು ಐಷಾರಾಮಿ ವೈಶಿಷ್ಟ್ಯಗಳು ಮತ್ತು ಸ್ಪೋರ್ಟ್ಸ್ ಕಾರಿನ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ನೀವು ಎರಡು ಬಣ್ಣದಲ್ಲಿ ಕಾರುಗಳನ್ನು ಖರೀದಿಸಬಹುದು. ಈ ಕಾರು ರೆಡ್ ಆಂಬಿಯನ್ಸ್ ಮತ್ತು ವೈಟ್ ಆಂಬಿಯನ್ಸ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಮರ್ಸಿಡಿಸ್-ಮೇಬ್ಯಾಕ್ SL 680 ನ ನೋಟ ಮತ್ತು ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಮೇಬ್ಯಾಕ್ ಮಾದರಿಯ ಬಾನೆಟ್, ಸಿಗ್ನೇಚರ್ ಕ್ರೋಮ್ ಗ್ರಿಲ್ ಮತ್ತು ಮರ್ಸಿಡಿಸ್ ಸ್ಟಾರ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ, ಮೇಬ್ಯಾಕ್- ಟೈಲ್‌ಪೈಪ್ ಟ್ರಿಮ್‌ಗಳು ಮತ್ತು ಮೇಬ್ಯಾಕ್ ಸಿಗ್ನೇಚರ್‌ನೊಂದಿಗೆ ಲೈಟ್ಗಳಿವೆ. ಸೀಟುಗಳ ಹಿಂದೆ ಡಬಲ್ ಸ್ಕೂಪ್‌ಗಳು SL ನ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತವೆ. ಮೇಬ್ಯಾಕ್ SL 680 ರ ಬಾನೆಟ್, ಸೈಡ್ ಕ್ಲಾಡಿಂಗ್ ಮತ್ತು ವಿಂಡ್‌ಸ್ಕ್ರೀನ್ ಫ್ರೇಮ್‌ನಲ್ಲಿರುವ ಕ್ರೋಮ್ ಅಸೆಂಟ್‌ಗಳು ಕಾರಿಗೆ ಐಷಾರಾಮಿ ನೋಟವನ್ನು ನೀಡುತ್ತವೆ. ಆಕರ್ಷಕವಾದ 21-ಇಂಚಿನ ಅಲಾಯ್ ಚಕ್ರಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
Summer Car Tips: ರಣಬಿಸಿಲಿಗೆ ಕಾರಿನ ಒಳಗೆ ಕುಳಿತುಕೊಳ್ಳಲೂ ಆಗುತ್ತಿಲ್ಲವೇ?: ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಮರ್ಸಿಡಿಸ್-ಮೇಬ್ಯಾಕ್ SL 680 ರ ಒಳಭಾಗ ಕೂಡ ತುಂಬಾ ಐಷಾರಾಮಿಯಾಗಿದೆ. ಇದರಲ್ಲಿ ಕ್ರಿಸ್ಟಲ್ ವೈಟ್ ನಾಪಾ ಲೆದರ್ ಬಳಸಲಾಗಿದೆ. ಸ್ಟೀರಿಂಗ್ ವೀಲ್, ಸ್ಟೇನ್‌ಲೆಸ್-ಸ್ಟೀಲ್ ಪೆಡಲ್‌ಗಳು ಮತ್ತು ಡೋರ್ ಸಿಲ್ ಟ್ರಿಮ್‌ಗಳು ಮೇಬ್ಯಾಕ್ ವಿನ್ಯಾಸವನ್ನು ಹೊಂದಿವೆ. ಇದು ಆರಾಮದಾಯಕ ಚಾಲನೆಗಾಗಿ ಧ್ವನಿ-ಆಪ್ಟಿಮೈಸ್ಡ್ ಎಕ್ಸಾಸ್ಟ್ ಸಿಸ್ಟಮ್ ಹೊಂದಿದೆ. ಕಾರಿನ ಸಸ್ಪೆನ್ಷನ್, ಮೃದುವಾದ ಎಂಜಿನ್ ಮೌಂಟ್‌ಗಳು ಮತ್ತು ಹಿಂಭಾಗದ ಆಕ್ಸಲ್ ಸ್ಟೀರಿಂಗ್ ಡ್ರೈವ್ ಮಾಡುವಾಗ ಬೇರೆಯದೆ ಅನುಭವ ನೀಡುತ್ತದೆ.
ಮೊನೊಕ್ರೋಮ್ ಸರಣಿಯು 4.0-ಲೀಟರ್ ಬಿಟರ್ಬೊ V8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 585 ಅಶ್ವಶಕ್ತಿ ಮತ್ತು 800 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 9G ಸ್ವಯಂಚಾಲಿತ ಪ್ರಸರಣವನ್ನು ಹೊಂದಿರುವ ಈ ಐಷಾರಾಮಿ ಕಾರು ಗಂಟೆಗೆ 260 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ ಮತ್ತು 0-100 ಕಿ.ಮೀ ವೇಗವನ್ನು ತಲುಪಲು ಕೇವಲ 4.1 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಈ ಕಾರು 4MATIC ಮತ್ತು ಸಂಪೂರ್ಣವಾಗಿ ವೇರಿಯಬಲ್ ಆಲ್-ವೀಲ್ ಡ್ರೈವ್‌ನೊಂದಿಗೆ ಸಜ್ಜುಗೊಂಡಿದೆ.
ಮರ್ಸಿಡಿಸ್-ಮೇಬ್ಯಾಕ್ ಬ್ರ್ಯಾಂಡ್‌ಗೆ ಭಾರತವು ಒಂದು ಪ್ರಮುಖ ಮಾರುಕಟ್ಟೆಯಾಗಿದೆ ಎಂದು ಡೇನಿಯಲ್ ಲೆಸ್ಕೊ ಹೇಳಿದ್ದಾರೆ. ಇಲ್ಲಿನ ಜನರಲ್ಲಿ ಐಷಾರಾಮಿ ಜೀವನಶೈಲಿ ಬೆಳೆಯುತ್ತಿದೆ. ಜಾಗತಿಕವಾಗಿ ಮೇಬ್ಯಾಕ್‌ಗೆ ಭಾರತವು ಈಗಾಗಲೇ ಟಾಪ್ -10 ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಂಪನಿ ಭಾವಿಸುತ್ತದೆ ಎಂದರು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ