AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಂಪನಿಯ ಕಾರು ಮೊಬೈಲ್ ಗಿಂತ ವೇಗವಾಗಿ ಚಾರ್ಜ್ ಆಗುತ್ತೆ: 5 ನಿಮಿಷ ಚಾರ್ಜ್ ಮಾಡಿದ್ರೆ 470 ಕಿಮೀ ಹೋಗಬಹುದು

BYD ಕಂಪನಿಯ ಈ ಹೊಸ ತಂತ್ರಜ್ಞಾನವನ್ನು ಹಾನ್ ಎಲ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಮಾದರಿಗಳಲ್ಲಿ ಕಾಣಬಹುದು. ಈ ಕಾರುಗಳ ಬೆಲೆ 31 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಹೊಸ EV ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಈ ಕಾರುಗಳು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ. ಮೀ ವೇಗವನ್ನು ಹೆಚ್ಚಿಸಿಕೊಳ್ಳಬಹುದು.

ಈ ಕಂಪನಿಯ ಕಾರು ಮೊಬೈಲ್ ಗಿಂತ ವೇಗವಾಗಿ ಚಾರ್ಜ್ ಆಗುತ್ತೆ: 5 ನಿಮಿಷ ಚಾರ್ಜ್ ಮಾಡಿದ್ರೆ 470 ಕಿಮೀ ಹೋಗಬಹುದು
Ev
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 18, 2025 | 3:27 PM

Share

EV Charging Technology: ಚೀನಾದ EV ಆಟೋಮೊಬೈಲ್ ಕಂಪನಿ BYD ಹೊಸ EV ಚಾರ್ಜಿಂಗ್ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞಾನದಿಂದ, ಎಲೆಕ್ಟ್ರಿಕ್ ಕಾರುಗಳು (Electric Car) ಪ್ರಸ್ತುತ ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಲು ತೆಗೆದುಕೊಳ್ಳುವಷ್ಟೇ ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ಬ್ಯಾಟರಿ ತಂತ್ರಜ್ಞಾನದಲ್ಲಿ ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 470 ಕಿ.ಮೀ. ವರೆಗೆ ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ತಂತ್ರಜ್ಞಾನ ಹೊಂದಿರುವ ಕಾರುಗಳು ಏಪ್ರಿಲ್ 2025 ರಿಂದ ಮಾರುಕಟ್ಟೆಗೆ ಬರಲಿವೆ.

ಬೆಲೆ 31 ಲಕ್ಷ ರೂ.:

ಕಂಪನಿಯ ಈ ಹೊಸ ತಂತ್ರಜ್ಞಾನವನ್ನು ಹಾನ್ ಎಲ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಮಾದರಿಗಳಲ್ಲಿ ಕಾಣಬಹುದು. ಈ ಕಾರುಗಳ ಬೆಲೆ 31 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಹೊಸ EV ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಈ ಕಾರುಗಳು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ. ಮೀ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲು ಮತ್ತು ಬಳಕೆದಾರರ ಅನುಕೂಲಕ್ಕಾಗಿ, BYD ದೇಶಾದ್ಯಂತ 4,000 ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುತ್ತದೆ.

BYD ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ:

ಈ ತಂತ್ರಜ್ಞಾನದ ಘೋಷಣೆಯೊಂದಿಗೆ, BYD EV ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮೇಲುಗೈ ಸಾಧಿಸಿದೆ. BYD ಯ ಚಾರ್ಜಿಂಗ್ ವೇಗವು ಟೆಸ್ಲಾ ಸೂಪರ್‌ ಚಾರ್ಜರ್‌ ಗಿಂತ (275 ಕಿಮೀ/15 ನಿಮಿಷಗಳು) ವೇಗವಾಗಿರುತ್ತದೆ, ಹಾಗೆಯೆ ಇದು ಮರ್ಸಿಡಿಸ್-ಬೆನ್ಜ್‌ನ ಹೊಸ EV (325 ಕಿಮೀ/10 ನಿಮಿಷಗಳು) ಗಿಂತ ಮುಂದಿದೆ. ಆದಾಗ್ಯೂ, ಟೆಸ್ಲಾ 65,000 ಕ್ಕೂ ಹೆಚ್ಚು ಸೂಪರ್‌ ಚಾರ್ಜರ್‌ಗಳನ್ನು ಹೊಂದಿದೆ, ಸದ್ಯ BYD ತನ್ನ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುವತ್ತ ಕೆಲಸ ಮಾಡುತ್ತಿದೆ.

ಇದನ್ನೂ ಓದಿ
Image
ಬಿಸಿಲಿಗೆ ಕಾರ್ ಒಳಗೆ ಕುಳಿತುಕೊಳ್ಳಲೂ ಆಗುತ್ತಿಲ್ಲವೇ?: ಈ ಟಿಪ್ಸ್ ಅನುಸರಿಸಿ
Image
ಟೆಸ್ಲಾ ಪ್ರಿಯರಿಗೆ ಬಂಪರ್: ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು
Image
7 ಆಸನಗಳ ಕಾರಿಗೆ ಭರ್ಜರಿ ಬೇಡಿಕೆ: ಮೊದಲ ಸ್ಥಾನದಲ್ಲಿರುವ ಕಾರು ಯಾವುದು?
Image
ಇದು ಭಾರತದ ಅತ್ಯಂತ ಅಗ್ಗದ ಹಾಗೂ ಅತಿ ಹೆಚ್ಚು ಮೈಲೇಜ್ ನೀಡುವ ಕಾರು

Summer Car Tips: ರಣಬಿಸಿಲಿಗೆ ಕಾರಿನ ಒಳಗೆ ಕುಳಿತುಕೊಳ್ಳಲೂ ಆಗುತ್ತಿಲ್ಲವೇ?: ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಕಂಪನಿಯ ಕಾರ್ಯಕ್ಷಮತೆ ಹೇಗಿದೆ?:

ಜನವರಿ 2025 ರಲ್ಲಿ, BYD 318,000 ವಾಹನಗಳನ್ನು ಮಾರಾಟ ಮಾಡಿತು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 161 ರಷ್ಟು ಹೆಚ್ಚಾಗಿದೆ. ಚೀನಾದಲ್ಲಿ ಅದರ ಮಾರುಕಟ್ಟೆ ಪಾಲು ಶೇಕಡಾ 15 ರಷ್ಟು ತಲುಪಿದ್ದು, ದೇಶದ ಅತಿದೊಡ್ಡ ಕಾರು ತಯಾರಕ ರಾಷ್ಟ್ರವಾಗಿದೆ. ಇದಲ್ಲದೆ, BYD ಷೇರಿನ ಬೆಲೆ ಶೇಕಡಾ 45 ರಷ್ಟು ಹೆಚ್ಚಾಗಿದೆ. ಕಂಪನಿಯ ಹೊಸ EV ತಂತ್ರಜ್ಞಾನ ಮತ್ತು ಅಟೋ ಪೈಲಟ್ ವೈಶಿಷ್ಟ್ಯಗಳು ಭವಿಷ್ಯದಲ್ಲಿ ಅದರ ಮಾರಾಟವನ್ನು ಮತ್ತಷ್ಟು ಹೆಚ್ಚಿಸಬಹುದು. ಅದೇ ಸಮಯದಲ್ಲಿ, BYD ಯ ಹೊಸ ಸೂಪರ್ ಇ- ಪ್ಲಾಟ್‌ಫಾರ್ಮ್ ತಂತ್ರಜ್ಞಾನವು CATL ನಂತಹ ಬ್ಯಾಟರಿ ಕಂಪನಿಗಳಿಗೆ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!