ಪ್ರೀಮಿಯಂ ಬೈಕ್ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ ಸೈಕಲ್(Honda Motorcycle) ಕಂಪನಿಯು ಇಟಾಲಿಯ ಮಿಲಾನಾದಲ್ಲಿ ನಡೆಯುತ್ತಿರುವ 2022ರ EICMA(ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಆಕ್ಸೆಸರಿಸ್ ಎಕ್ಸಿಬಿಷನ್) ನಲ್ಲಿ ಅನಾವರಣಗೊಳಿಸಿದೆ. ಹೊಸ ಬೈಕ್ ಮಾದರಿಯು ಹೋಂಡಾ ಕಂಪನಿಯ 500 ಸಿಸಿ ಸರಣಿಯಲ್ಲಿ ಐದನೇ ಬೈಕ್ ಮಾದರಿಯಾಗಿದ್ದು, ಇದು ರೆಟ್ರೋ ಲುಕ್ ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ. 500ಸಿಸಿ ಸರಣಿ ಬೈಕ್ ವಿಭಾಗದಲ್ಲಿ ಈಗಾಗಲೇ ಸಿಬಿ500ಎಫ್, ಸಿಬಿ500ಆರ್, ರೆಬೆಲ್ 500 ಮತ್ತು ಸಿಬಿ500ಎಕ್ಸ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಇದೀಗ 70ರ ದಶಕದಲ್ಲಿನ ಸಿಎಲ್ ಮೋಟಾರ್ ಸೈಕಲ್ ಪ್ರೇರಣೆಯೊಂದಿಗೆ ಹೊಸ ಸಿಎಲ್500 ಸ್ಕ್ರಾಂಬ್ಲರ್ ಬೈಕ್ ಅನಾವರಣಗೊಳಿಸಿದೆ.
ಆಫ್ ರೋಡ್ ಪ್ರಿಯರಿಗಾಗಿ ನಿರ್ಮಾಣ
ಪರ್ಫಾಮೆನ್ಸ್ ಪ್ರಿಯರಿಗಾಗಿ ಹಲವಾರು ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಹೋಂಡಾ ಕಂಪನಿಯು ಹೊಸ ಸಿಎಲ್500 ಸ್ಕ್ರಾಂಬ್ಲರ್ ಬೈಕ್ ಮಾದರಿಯನ್ನು ಆಫ್ ರೋಡ್ ಪ್ರಿಯರಿಗಾಗಿಯೇ ಸಾಕಷ್ಟು ಹಗುರವಾದ ವೈಶಿಷ್ಟ್ಯತೆಯೊಂದಿಗೆ ನಿರ್ಮಾಣ ಮಾಡಿದೆ.
ಇದನ್ನೂ ಓದಿ: ಸೂಪರ್ ಮಿಟಿಯೋರ್ 650 ಅನಾವರಣಗೊಳಿಸಿದ ರಾಯಲ್ ಎನ್‌ಫೀಲ್ಡ್
ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆ
ಹೊಸ ಸಿಎಲ್500 ಸ್ಕ್ರಾಂಬ್ಲರ್ ಬೈಕ್ ಆವೃತ್ತಿಯು ಹೋಂಡಾ ಕಂಪನಿಯ ಟ್ಯೂಬಲ್ಲರ್ ಸ್ಟೀಲ್ ಟೆಲ್ಲಿಸ್-ಸ್ಟೈಲ್ ಫ್ರೆಮ್ ನೊಂದಿಗೆ ನಿರ್ಮಾಣಗೊಂಡಿದ್ದು, ಹೆಚ್ಚಿನ ಉದ್ದಳತೆಯ ಟ್ರಾವೆಲ್ ಸಸ್ಷೆಂಷನ್ ನೊಂದಿಗೆ 41 ಎಂಎಂ ಫ್ರಂಟ್ ಟೆಲಿಸ್ಕೊಫಿಕ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಹೋಂದಾಣಿಕೆ ಮಾಡಬಹುದಾದ ರಿಯರ್ ಶಾಕ್ಸ್ ನೀಡಲಾಗಿದೆ. ಹಾಗೆಯೇ ಮುಂಭಾಗದ ಚಕ್ರದಲ್ಲಿ 19 ಇಂಚಿನ ವ್ಹೀಲ್ ಮತ್ತು ಹಿಂಬದಿಯಲ್ಲಿ 17 ಇಂಚಿನ ವ್ಹೀಲ್ ಪಡೆದುಕೊಂಡಿದ್ದು, ಬ್ಲ್ಯಾಕ್ ಪ್ಯಾಟರ್ನ್ ಟೈರ್ ಬಳಕೆ ಮಾಡಲಾಗಿದೆ.
ಜೊತೆಗೆ ಹೊಸ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದ್ದು, ಆಫ್ ರೋಡ್ ಪ್ರಯಾಣದ ಸಂದರ್ಭದಲ್ಲಿ ಸ್ವಿಚ್ ಎಬಿಎಸ್ ಇರುವುದರಿಂದ ಉತ್ತಮ ಹಿಡಿತ ಸಾಧಿಸಬಹುದಾಗಿದೆ. ಆಫ್ ರೋಡ್ ಸಂದರ್ಭದಲ್ಲಿ ಎಬಿಎಸ್ ಸೌಲಭ್ಯವು ಕೆಲವೊಮ್ಮೆ ಹಾನಿ ಉಂಟುಮಾಡಬಹುದಾದ ಸಾಧ್ಯತೆಗಳಿರುವುದರಿಂದ ರೈಡರ್ ಅಂತಹ ಸಂದರ್ಭದಲ್ಲಿ ಎಬಿಎಸ್ ಸೌಲಭ್ಯವನ್ನು ಸ್ವಿಚ್ ಆಫ್ ಮಾಡುವ ಮೂಲಕ ಉತ್ತಮ ಹಿಡಿತದೊಂದಿಗೆ ಆಫ್ ರೋಡ್ ಯಶಸ್ವಿಗೊಳಿಸಿಗೊಳ್ಳಬಹುದಾಗಿದೆ.
ಇದನ್ನೂ ಓದಿ: ಬಿಡುಗಡೆಯಾಗಲಿದೆ ಬಲಶಾಲಿ ಹೀರೋ ಎಕ್ಸ್ ಪಲ್ಸ್ 200ಟಿ 4ವಿ ವರ್ಷನ್
ಇದರೊಂದಿಗೆ ಹೊಸ ಬೈಕಿನಲ್ಲಿ ಕಂಪನಿಯು ಆಲ್ ಎಲ್ಇಡಿ ಲೈಟಿಂಗ್ಸ್, ಡಿಜಿಟಲ್ ಇನ್ ಸ್ಟುಮೆಂಟ್ ಕ್ಲಸ್ಟರ್, ಎರ್ಮೆಜೆನ್ಸಿ ಸ್ಟಾಪ್ ಸಿಗ್ನಲ್ಸ್, ಹಜಾರ್ಡ್ ಲೈಟ್ಸ್, ಹಾರ್ಡ್ ಬ್ರೇಕಿಂಗ್ ಸೇರಿದಂತೆ ಹಲವಾರು ಹೊಸ ಸೇಫ್ಟಿ ಫೀಚರ್ಸ್ ಹೊಂದಿದ್ದು, 12 ಲೀಟರ್ ಸಾಮರ್ಥ್ಯ ಫ್ಯೂಲ್ ಟ್ಯಾಂಕ್ ಸೌಲಭ್ಯದೊಂದಿಗೆ ಸುಮಾರು ತನಕ 300 ಕಿ.ಮೀ ತನಕ ಪ್ರಯಾಣ ಮಾಡಬಹುದಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೋಂಡಾ ಕಂಪನಿಯು ಸಿಎಲ್500 ಸ್ಕ್ರಾಂಬ್ಲರ್ ಬೈಕ್ ಮಾದರಿಯಲ್ಲಿ 471 ಸಿಸಿ ಪ್ಯಾರಾಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, ಇದು 46 ಹಾರ್ಸ್ ಪವರ್ ಮತ್ತು 43.4 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದಕ್ಕಾಗಿ ಹೊಸ ಬೈಕಿನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಉತ್ತಮ ಆಕ್ಸೆಲೆಷನ್ ಗಾಗಿ ಅಸಿಸ್ಟ್/ಸಿಪ್ಲರ್ ಕ್ಲಚ್ ಸೌಲಭ್ಯಗಳಿವೆ.
Published On - 12:53 pm, Wed, 9 November 22