Toyota Glanza CNG: ಗ್ಲಾಂಝಾ ಸಿಎನ್ಜಿ ವರ್ಷನ್ ಬಿಡುಗಡೆ ಮಾಡಿದ ಟೊಯೊಟಾ
ಟೊಯೊಟಾ ಕಂಪನಿಯು ಗ್ಲಾಂಝಾ ರೀಬ್ಯಾಡ್ಜ್ ಕಾರು ಮಾದರಿಯಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.
ಪ್ರೀಮಿಯಂ ಕಾರು ಉತ್ಪಾದನಾ ಕಂಪನಿಯಾಗಿರುವ ಟೊಯೊಟೊ(Toyota) ಇಂಡಿಯಾ ಕಂಪನಿಯು ತನ್ನ ಜನಪ್ರಿಯ ರೀಬ್ಯಾಡ್ಜ್ ಕಾರು ಮಾದರಿಯಾದ ಗ್ಲಾಂಝಾ(Glanza) ಹ್ಯಾಚ್ ಬ್ಯಾಕ್ ಕಾರಿನಲ್ಲಿ ಸಿಎನ್ ಜಿ(CNG) ವರ್ಷನ್ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.43 ಲಕ್ಷ ಬೆಲೆ ಹೊಂದಿದ್ದು, ಜಿ ಮತ್ತು ಎಸ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಗ್ಲಾಂಝಾ ಸಿಎನ್ ಜಿ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 8.43 ಲಕ್ಷ ಬೆಲೆ ಹೊಂದಿದ್ದರೆ ಎಸ್ ವೆರಿಯೆಂಟ್ ರೂ. 9.46 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಯ ಜೊತೆಗಿನ ಸಹಭಾಗಿತ್ವ ಯೋಜನೆಯಡಿ ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದು, ಎಸ್ ಸಿಎನ್ ಜಿ ತಂತ್ರಜ್ಞಾನವು ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.
ಎಂಜಿನ್ ಮತ್ತು ಮೈಲೇಜ್
ಹೊಸ ಗ್ಲಾಂಝಾ ಸಿಎನ್ ಜಿ ವರ್ಷನ್ ನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಬಲೆನೊದಲ್ಲಿರುವ 1.2 ಲೀಟರ್, 4 ಸಿಲಿಂಡರ್, ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಹೊಂದಿದೆ. ಹೊಸ ಮಾದರಿಯಲ್ಲಿ ಕಂಪನಿಯು ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ಪರಿಚಯಿಸಿದ್ದು, ಇದು 76 ಹಾರ್ಸ್ ಪವರ್ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿ ಸಿಎನ್ ಜಿ ಗೆ ಗರಿಷ್ಠ 30.61 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಹೊಸ ಡಬ್ಲ್ಯುಆರ್-ವಿ ಅನಾವರಣಗೊಳಿಸಿದ ಹೋಂಡಾ ಕಾರ್ಸ್!
ಸಾಮಾನ್ಯ ಪೆಟ್ರೋಲ್ ಮಾದರಿಯು ಸದ್ಯ ಇ, ಎಸ್, ಜಿ ಮತ್ತು ವಿ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಆದರೆ ಟೊಯೊಟಾ ಕಂಪನಿಯು ಸಿಎನ್ ಜಿ ಮಾದರಿಯಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ನೀಡಿದ್ದು, ಹೊಸ ಮಾದರಿಯು ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ದುಬಾರಿಯಾಗಿದೆ.
ಹೊಸ ಸಿಎನ್ ಜಿ ಮಾದರಿಯಲ್ಲಿ ಟೊಯೊಟಾ ಕಂಪನಿಯು ಎಸ್-ಸಿಎನ್ ಜಿ ಕಿಟ್ ಹೊರತಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಫೀಚರ್ಸ್ ಮುಂದುವರಿಸಲಾಗಿದ್ದು, ಸಿಎನ್ ಜಿ ಕಿಟ್ ಜೋಡಣೆಯಿಂದಾಗಿ ಕಾರಿನ ಬೂಟ್ ಸ್ಪೆಸ್ ಸಾಮರ್ಥ್ಯವು ತುಸು ಇಳಿಕೆಯಾಗಲಿದೆ.
Published On - 12:48 pm, Thu, 10 November 22