AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toyota Hyryder CNG: ಸಿಎನ್​ಜಿ ವರ್ಷನ್ ಹೈರೈಡರ್ ಬುಕಿಂಗ್ ಆರಂಭಿಸಿದ ಟೊಯೊಟಾ

ಟೊಯೊಟಾ ಕಂಪನಿಯು ತನ್ನ ಹೊಸ ಹೈರಡರ್ ಎಸ್ ಯುವಿಯಲ್ಲಿ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡುವ ಯೋಜನೆ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಬುಕಿಂಗ್ ಸಹ ಆರಂಭಿಸಿದೆ.

Toyota Hyryder CNG: ಸಿಎನ್​ಜಿ ವರ್ಷನ್ ಹೈರೈಡರ್ ಬುಕಿಂಗ್ ಆರಂಭಿಸಿದ ಟೊಯೊಟಾ
ಸಿಎನ್​ಜಿ ವರ್ಷನ್ ಹೈರೈಡರ್ ಬುಕಿಂಗ್ ಆರಂಭಿಸಿದ ಟೊಯೊಟಾ
Praveen Sannamani
|

Updated on:Nov 10, 2022 | 7:44 PM

Share

ಟೊಯೊಟಾ ಇಂಡಿಯಾ(Toyota) ಕಂಪನಿಯು ಅರ್ಬನ್ ಕ್ರೂಸರ್(Urban Cruiser Hyryder) ಎಸ್ ಯುವಿಯಲ್ಲಿ ಹೊಸದಾಗಿ ಸಿಎನ್ ಜಿ(CNG) ವರ್ಷನ್ ಬಿಡುಗಡೆ ಮಾಡುತ್ತಿದೆ. ಹೊಸ ಮಾದರಿಯ ಕುರಿತಾಗಿ ಇನ್ನು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ರೂ. 25 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭವಾಗಿದ್ದು, ಹೊಸ ಕಾರು ಮುಂದಿನ ತಿಂಗಳು ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೊಟಾ ಹೈರಡರ್ ಎಸ್ ಯುವಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ವರ್ಷನ್ ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದೀಗ ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ಸಿಎನ್ ಜಿ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದೆ. ಹೊಸ ಕಾರು ಅತ್ಯುತ್ತಮ ಇಂಧನ ದಕ್ಷತೆ ಹೊಂದಿರಲಿದ್ದು, ಸ್ಟ್ಯಾಂಡರ್ಡ್ ಮಾದರಿಯ ಎಸ್ ಮತ್ತು ಜಿ ವೆರಿಯೆಂಟ್ ಗಳನ್ನು ಆಧರಿಸಿ ಬಿಡುಗಡೆಯಾಗಬಹುದಾಗಿದೆ.

ಭಾರತದಲ್ಲಿ ಸದ್ಯ ಸಿಎನ್ ಜಿ ಕಾರುಗಳ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಸಿಎನ್​ಜಿ ವರ್ಷನ್ ನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. 2023ರಿಂದ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ರಿಯಲ್ ಎಮಿಷನ್ ಪರಿಣಾಮ ಕಾರು ಉತ್ಪಾದನಾ ಕಂಪನಿಗಳು ಪರಿಸರ ಸ್ನೇಹಿ ಕಾರು ಮಾದರಿಗಳತ್ತ ಮುಖ ಮಾಡುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಗೆ ಪರ್ಯಾಯವಾಗಿ ಹೈಬ್ರಿಡ್ ಮತ್ತು ಸಿಎನ್ ಜಿ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಇದನ್ನೂ ಓದಿ: ಗ್ಲಾಂಝಾ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡಿದ ಟೊಯೊಟಾ

ಇದರಲ್ಲಿ ಹೈಬ್ರಿಡ್ ಕಾರುಗಳು ದುಬಾರಿಯಾಗಿರುವುದರಿಂದ ಗ್ರಾಹಕರು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಸಿಎನ್ ಜಿ ಮಾದರಿಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಜನಪ್ರಿಯ ಕಾರುಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆಗೆ ಸಿದ್ದವಾಗುತ್ತಿವೆ. ಟೊಯೊಟಾ ಕಂಪನಿಯು ಸಹ ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಗ್ಲಾಂಝಾ ಕಾರು ಮಾದರಿಗಾಗಿ ಈಗಾಗಲೇ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಇದೀಗ ಹೈರಡರ್ ಎಸ್ ಯುವಿಯಲ್ಲಿ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೈರೈಡರ್ ಕಾರು ಒಟ್ಟು 11 ವೆರಿಯೆಂಟ್ ಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.48 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 18.99 ಲಕ್ಷ ಬೆಲೆ ಹೊಂದಿದೆ. ಹೊಸ ಹೈರೈಡರ್ ಮಾದರಿಯಲ್ಲಿ ಟೊಯೊಟಾ ಕಂಪನಿಯು ಸ್ಮಾರ್ಟ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಎಂಜಿನ್ ಆಯ್ಕೆ ನೀಡಿದ್ದು, ಇದರಲ್ಲಿ ಸ್ಮಾರ್ಟ್ ಹೈಬ್ರಿಡ್ ಮಾದರಿಯು ಆರಂಭಿಕವಾಗಿ ರೂ. 10.48 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 17.19 ಲಕ್ಷ ಬೆಲೆ ಹೊಂದಿದ್ದರೆ ಸ್ಟ್ಕಾಂಗ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯ ರೂ. 15.11 ಲಕ್ಷದಿಂದ ರೂ. ರೂ. 18.99 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಹೀಗಿರಲಿದೆ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಎಂಪಿವಿ!

ಹೊಸ ಹೈರೈಡರ್ ಕಾರಿನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆ ಅಭಿವೃದ್ದಿಪಡಿಸಲಾದ ಆಟ್ಕಿನ್ ಸನ್ ಸೈಕಲ್ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಮತ್ತು 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪ್ರೇರಿತ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ. ಆಟ್ಕಿನ್ ಸನ್ ಸೈಕಲ್ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಮಾದರಿಯು ಇ-ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 114 ಬಿಎಚ್ ಪಿ ಮತ್ತು 141ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ನೀಡುತ್ತದೆ.

ಹಾಗೆಯೇ ಕೆ15ಸಿ ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಇದು 103 ಬಿಎಚ್ ಪಿ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 19 ಕಿ.ಮೀ ಮೈಲೇಜ್ ನೀಡುತ್ತದೆ.

Published On - 7:44 pm, Thu, 10 November 22