Hyundai IONIQ 5:  ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಿರ್ಮಿಸಿದ ಹ್ಯುಂಡೈ ಐಯಾನಿಕ್ 5

Hyundai IONIQ 5: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಿರ್ಮಿಸಿದ ಹ್ಯುಂಡೈ ಐಯಾನಿಕ್ 5

Praveen Sannamani
|

Updated on:Mar 25, 2023 | 8:01 PM

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ಐಯಾನಿಕ್ 5 ಕಾರು ಮಾದರಿಯ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, ಇವಿ ಡ್ರೈವ್ ಅಭಿಯಾನದಲ್ಲಿ ಹೊಸ ಕಾರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮಾಡಿದೆ. ದೇಶದ ಅದ್ಭುತ ಸ್ಥಳಗಳಾದ ಗೋಲ್ಡನ್ ಟೆಂಪಲ್, ತಾಜ್ ಮಹಲ್, ಖಜುರಾಹೋ ದೇವಾಲಯಗಳು, ನಳಂದದ ಪ್ರಾಚೀನ ಅವಶೇಷಗಳು, ಕೋನಾರ್ಕ್ ಸೂರ್ಯ ದೇವಾಲಯ, ಗೊಮಟೇಶ್ವರ ಮತ್ತು ಹಂಪಿಗೆ ಅತಿ ಕಡಿಮೆ ಅವಧಿಯಲ್ಲಿ ತಲುಪಿದೆ.

ಹೊಸ ಇವಿ ಕಾರು ಮಾದರಿಯು 72.6 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ 631 ಕಿ.ಮೀ ಮೈಲೇಜ್ ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ. ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 44.95 ಲಕ್ಷ ಬೆಲೆ ಹೊಂದಿದ್ದು, ಇದು ಐಷಾರಾಮಿ ಕಾರು ವಿಭಾಗದಲ್ಲಿ ಗುರುತಿಸಿಕೊಂಡಿದೆ.

Published on: Mar 25, 2023 08:01 PM