ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಬಿಡುಗಡೆ

|

Updated on: Sep 16, 2024 | 7:32 PM

Hyundai Venue Adventure Edition: ಹ್ಯುಂಡೈ ಕಂಪನಿ ತನ್ನ ಜನಪ್ರಿಯ ಸಬ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯಾದ ವೆನ್ಯೂ ಮಾದರಿಯಲ್ಲಿ ಹೊಸದಾಗಿ ಅಡ್ವೆಂಚರ್ ಎಡಿಷನ್ ಬಿಡುಗಡೆ ಮಾಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಬಿಡುಗಡೆ
ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್
Follow us on

ಭಾರತದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ (Hyundai) ತನ್ನ ಜನಪ್ರಿಯ ವೆನ್ಯೂ ಕಾರಿನಲ್ಲಿ ಹೊಸದಾಗಿ ಅಡ್ವೆಂಚರ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.15 ಲಕ್ಷದಿಂದ ರೂ. 13.38 ಲಕ್ಷ ಬೆಲೆ ಹೊಂದಿದೆ.

ವೆನ್ಯೂ ಅಡ್ವೆಂಚರ್ ಎಡಿಷನ್ ಫೀಚರ್ಸ್ ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ ಎಸ್ ಆಪ್ಷನ್ ಪ್ಲಸ್, ಎಸ್ಎಕ್ಸ್ ಮತ್ತು ಡಿಸಿಟಿ ಎಸ್ ಆಪ್ಷನ್ ಎನ್ನುವ ಮೂರು ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಎಸ್ ಆಪ್ಷನ್ ಪ್ಲಸ್ ಮತ್ತು ಎಸ್ಎಕ್ಸ್ ವೆರಿಯೆಂಟ್ ಗಳು 1.2 ಲೀಟರ್ ಪೆಟ್ರೋಲ್ ಮ್ಯಾನುವಲ್ ನಲ್ಲಿ ಖರೀದಿಗೆ ಲಭ್ಯವಿದ್ದರೆ ಡಿಸಿಟಿ ಎಸ್ ಆಪ್ಷನ್ ವೆರಿಯೆಂಟ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ನಲ್ಲಿ ಖರೀದಿಗೆ ಲಭ್ಯವಿರಲಿದೆ.

ಹ್ಯುಂಡೈ ಕಂಪನಿಯು ಹೊಸ ಆವೃತ್ತಿಯಲ್ಲಿ ಆಕರ್ಷಕವಾದ ರೇಂಜರ್ ಖಾಕಿ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಸೆಜ್ ಗ್ರೀನ್ ಇಂಟಿರಿಯರ್ ನೀಡಲಾಗಿದೆ. ಹೊಸ ಆವೃತ್ತಿಯನ್ನು ಸಾಮಾನ್ಯ ವೆನ್ಯೂಗಿಂತಲೂ ವಿಭಿನ್ನವಾಗಿಸಲು ಕೆಲವು ಹೊಸ ಫೀಚರ್ಸ್ ಗಳನ್ನು ಸಹ ನೀಡಲಾಗಿದ್ದು, ಇದು ಈ ಹಿಂದೆ ಬಿಡುಗಡೆಯಾಗಿದ್ದ ಕ್ರೆಟಾ ಅಡ್ವೆಂಚರ್ ಮತ್ತು ಅಲ್ಕಾಜರ್ ಅಡ್ವೆಂಚರ್ ಮಾದರಿಗಳಂತೆ ಬ್ಲ್ಯಾಕ್ ಔಟ್ ಹೊಂದಿರುವ ಹ್ಯುಂಡೈ ಲೋಗೊ ಒಳಗೊಂಡ ಫ್ರಂಟ್ ಗ್ರಿಲ್, ಅಲಾಯ್ ವ್ಹೀಲ್ಸ್, ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ವಿಂಗ್ ಮಿರರ್, ಶಾರ್ಕ್ ಫಿನ್ ಅಂಟೆನಾ ನೀಡಲಾಗಿದೆ.

ಇದನ್ನೂ ಓದಿ: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಹಾಗೆಯೇ ಹೊಸ ಅಡ್ವೆಂಚರ್ ಮಾದರಿಯಲ್ಲಿ ಬಾಗಿಲುಗಳಲ್ಲಿ ಸೈಡ್ ಕ್ಲಾಡಿಂಗ್, ರೆಡ್ ಬ್ರೇಕ್ ಕ್ಯಾಪಿಪರ್ಸ್, ಫ್ರಂಟ್ ಫೆಂಡರ್ ಬಳಿ ಅಡ್ವೆಂಚರ್ ಬ್ಯಾಡ್ಜ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ ಗ್ರೆ ಮತ್ತು ಬ್ಲ್ಯಾಕ್ ಕಲರ್ ಕ್ಯಾಬಿನ್ ನೊಂದಿಗೆ ಸೆಜ್ ಗ್ರೀನ್ ಇನ್ಸರ್ಟ್ಸ್ ನೀಡಲಾಗಿದೆ. ಇದರಲ್ಲಿ ಸೆಜ್ ಗ್ರೀನ್ ಇನ್ಸರ್ಟ್ ಹೊಂದಿರುವ ಆಸನಗಳು ಪ್ರಮುಖ ಆಕರ್ಷಣೆಯಾಗಿದ್ದು, 3ಡಿ ಮ್ಯಾಟ್ಸ್, ಸ್ಪೋರ್ಟಿಯಾಗಿರುವ ಪೆಡಲ್ಸ್ ಮತ್ತು ಸುಧಾರಿತವಾಗಿರುವ ಡ್ಯುಯಲ್ ಕ್ಯಾಮೆರಾ ಒಳಗೊಂಡ ಡ್ಯಾಶ್ ಕ್ಯಾಮ್ ನೀಡಲಾಗಿದೆ.

ವೆನ್ಯೂ ಅಡ್ವೆಂಚರ್ ಎಡಿಷನ್ ನಲ್ಲಿ ಹ್ಯುಂಡೈ ಕಂಪನಿಯು ವಿಶೇಷವಾದ ರೇಂಜರ್ ಖಾಕಿ ಬಣ್ಣದ ಜೊತೆಗೆ ಅಬ್ಯಾಸ್‌ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಬಣ್ಣಗಳೊಂದಿಗೆ ರೇಂಜರ್ ಖಾಕಿ ಜೊತೆ ಬ್ಲ್ಯಾಕ್ ರೂಫ್, ಅಟ್ಲಾಸ್ ವೈಟ್ ಜೊತೆ ಬ್ಲ್ಯಾಕ್ ರೂಫ್ ಮತ್ತು ಟೈಟಾನ್ ಗ್ರೇ ಜೊತೆ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಆಯ್ಕೆಯನ್ನು ಸಹ ನೀಡುತ್ತಿದೆ. ಇದರಲ್ಲಿ ಡ್ಯುಯಲ್ ಮಾದರಿಗಳು ಸಾಮಾನ್ಯ ಬಣ್ಣಗಳ ಆಯ್ಕೆಗಿಂತಲೂ ರೂ. 15 ಸಾವಿರದಷ್ಟು ದುಬಾರಿಯಾಗಿರಲಿದ್ದು, ನೋಡಲು ಸಖತ್ ಸ್ಪೋರ್ಟಿಯಾಗಿವೆ.

ಇದನ್ನೂ ಓದಿ: ಟಾಟಾ ಪಂಚ್ ಇವಿಗೆ ಟಕ್ಕರ್ ಕೊಡುತ್ತಾ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್?

ಇನ್ನು ಹೊಸ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು 83 ಹಾರ್ಸ್ ಪವರ್ ಉತ್ಪಾದನೆ ಮಾಡಿದ್ದಲ್ಲಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಪೆಟ್ರೋಲ್ ಮಾದರಿಯು 120 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲಿ ಗಮನಸೆಳೆಯುತ್ತದೆ. ಆದರೆ ಹೊಸ ಮಾದರಿಯಲ್ಲಿ ಡೀಸೆಲ್ ಆಯ್ಕೆ ನೀಡದ ಹ್ಯುಂಡೈ ಕಂಪನಿಯು ಸಾಮಾನ್ಯ ಮಾದರಿಯಲ್ಲಿ ಮಾತ್ರ ಎನ್ಎ ಪೆಟ್ರೋಲ್, ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.