AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

October Car Sale: ಅಕ್ಟೋಬರ್‌ನಲ್ಲಿ ಅಟೋ ಮಾರುಕಟ್ಟೆ ಶೇಕ್..: ಸೇಲ್ ಆಗಿದ್ದು ಎಷ್ಟು ಕಾರು ಗೊತ್ತೇ?

October Car Sale 2025: ಕಿಯಾ ಇಂಡಿಯಾದ ಮಾರಾಟವು ಅಕ್ಟೋಬರ್‌ನಲ್ಲಿ ಶೇ. 30 ರಷ್ಟು ಹೆಚ್ಚಾಗಿ 29,556 ವಾಹನಗಳಿಗೆ ತಲುಪಿದೆ, ಇದು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ನಂತರದ ಕಂಪನಿಯ ಅತ್ಯಧಿಕ ಮಾರಾಟವಾಗಿದೆ. ಅತಿ ಹೆಚ್ಚು ಸೇಲ್ ಆಗಿದ್ದು ಯಾವ ಕಂಪನಿಯ ಕಾರು?. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

October Car Sale: ಅಕ್ಟೋಬರ್‌ನಲ್ಲಿ ಅಟೋ ಮಾರುಕಟ್ಟೆ ಶೇಕ್..: ಸೇಲ್ ಆಗಿದ್ದು ಎಷ್ಟು ಕಾರು ಗೊತ್ತೇ?
October Car Sale
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Nov 03, 2025 | 11:52 AM

Share

ಬೆಂಗಳೂರು (ನ. 03): ಅಕ್ಟೋಬರ್ 2025 ರಲ್ಲಿ ಮಾರಾಟವಾದ ಎಲ್ಲಾ ಕಾರು ಕಂಪನಿಗಳ ವರದಿ ಬಿಡುಗಡೆ ಆಗಿದೆ. ಅಕ್ಟೋಬರ್ ತಿಂಗಳು ದಸರಾ, ಧಂತೇರಸ್ ಮತ್ತು ದೀಪಾವಳಿಯಂತಹ ಹಬ್ಬಗಳು ಇದ್ದ ಕಾರಣ ಆಟೋಮೊಬೈಲ್ ಕಂಪನಿಗಳಿಗೆ ಗರಿಷ್ಠ ಮಾರಾಟದ ಋತುವೆಂದು ಪರಿಗಣಿಸಲಾಗಿದೆ. ಒಂದುಕಡೆ ಹಬ್ಬದ ಋತುವು ಮಾರಾಟವನ್ನು ಹೆಚ್ಚಿಸಿದರೆ ಮತ್ತೊಂದೆಡೆ GST ಕಡಿತದಿಂದಾಗಿ ಕಾರುಗಳ ಬೆಲೆಗಳಲ್ಲಿನ ಕಡಿತವು ಮಾರಾಟವನ್ನು ಹೆಚ್ಚಿಸಿತು. ಸದ್ಯ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ (Maruti Suzuki) ಒಟ್ಟು ಮಾರಾಟವು ಅಕ್ಟೋಬರ್‌ನಲ್ಲಿ ಶೇ 7 ರಷ್ಟು ಹೆಚ್ಚಾಗಿ 2,20,894 ಯೂನಿಟ್‌ಗಳಿಗೆ ತಲುಪಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 2,06,434 ವಾಹನಗಳನ್ನು ಮಾರಾಟ ಮಾಡಿತ್ತು.

ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ, ವಾಣಿಜ್ಯ ವಾಹನಗಳು ಸೇರಿದಂತೆ ಅದರ ಒಟ್ಟು ದೇಶೀಯ ಮಾರಾಟವು 1,80,675 ಯೂನಿಟ್‌ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಮಾರುತಿ ಕಂಪನಿ ತಿಳಿಸಿದೆ, ಇದು ಹಿಂದಿನ ಅಕ್ಟೋಬರ್‌ನಲ್ಲಿ 1,63,130 ಆಗಿತ್ತು. ದೇಶೀಯ ಪ್ರಯಾಣಿಕ ವಾಹನ ಮಾರಾಟವು 1,76,318 ಯೂನಿಟ್‌ಗಳಿಗೆ ಏರಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತಿಳಿಸಿದೆ, ಇದು ಅಕ್ಟೋಬರ್ 2024 ರಲ್ಲಿ 1,59,591 ಯೂನಿಟ್‌ಗಳಷ್ಟಿತ್ತು.

ಅಕ್ಟೋಬರ್‌ನಲ್ಲಿ ಮಹೀಂದ್ರಾ 71,624 ಎಸ್‌ಯುವಿಗಳನ್ನು ಮಾರಾಟ ಮಾಡಿದೆ

ಈ ವರ್ಷದ ಅಕ್ಟೋಬರ್‌ನಲ್ಲಿ ತನ್ನ ಒಟ್ಟು ಮಾರಾಟವು ಶೇ.26 ರಷ್ಟು ಹೆಚ್ಚಾಗಿ 1,20,142 ಯೂನಿಟ್‌ಗಳಿಗೆ ತಲುಪಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ತಿಳಿಸಿದೆ. ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಅಕ್ಟೋಬರ್‌ನಲ್ಲಿ ಶೇ.31 ರಷ್ಟು ಹೆಚ್ಚಾಗಿ 71,624 ಯೂನಿಟ್‌ಗಳಿಗೆ ತಲುಪಿದೆ, ಆದರೆ ಹಿಂದಿನ ಅಕ್ಟೋಬರ್‌ನಲ್ಲಿ ಇದು 54,504 ಯೂನಿಟ್‌ಗಳಷ್ಟಿತ್ತು.

ಇದನ್ನೂ ಓದಿ
Image
ಟೊಯೋಟಾ ಬರೋಬ್ಬರಿ 15 ಹೊಸ ಕಾರುಗಳು ಬಿಡುಗಡೆ ಮಾಡುತ್ತಿದೆ
Image
ಭಾರತದಲ್ಲಿ ಹೊಸ ಹುಂಡೈ ವೆನ್ಯೂ ಎನ್ ಲೈನ್ ಅನಾವರಣ
Image
ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ನಡುವೆ ಯಾವುದು ಉತ್ತಮ?
Image
ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಬಂತು 90ರ ದಶಕದ ಟಾಟಾ ಸಿಯೆರಾ

ಎಸ್‌ಯುವಿ ಪ್ರಿಯರಿಗೆ ಬಂಪರ್ ಸುದ್ದಿ: ಟೊಯೋಟಾ ಬರೋಬ್ಬರಿ 15 ಹೊಸ ಕಾರುಗಳು ಬಿಡುಗಡೆ ಮಾಡುತ್ತಿದೆ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮಾರಾಟ ಶೇ.39ರಷ್ಟು ಏರಿಕೆ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಅಕ್ಟೋಬರ್‌ನಲ್ಲಿ ಒಟ್ಟು ಮಾರಾಟದಲ್ಲಿ ಶೇ 39 ರಷ್ಟು ಹೆಚ್ಚಳವಾಗಿ 42,892 ಯುನಿಟ್‌ಗಳಿಗೆ ತಲುಪಿದೆ ಎಂದು ವರದಿ ಮಾಡಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ ಇದು 30,845 ಯುನಿಟ್‌ಗಳಷ್ಟಿತ್ತು. ಕಳೆದ ತಿಂಗಳು 2,635 ವಾಹನಗಳ ರಫ್ತು ಕೂಡ ವರದಿಯಾಗಿದೆ ಎಂದು ಟಿಕೆಎಂ ಹೇಳಿಕೆಯಲ್ಲಿ ತಿಳಿಸಿದೆ.

ಟಾಟಾ ಮಾರಾಟದಲ್ಲೂ ಗಣನೀಯ ಏರಿಕೆ

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಒಟ್ಟು ಮಾರಾಟವು ಅಕ್ಟೋಬರ್‌ನಲ್ಲಿ ಶೇ.26.6 ರಷ್ಟು ಹೆಚ್ಚಾಗಿ 61,295 ವಾಹನಗಳಿಗೆ ತಲುಪಿದೆ. ಇದರಲ್ಲಿ ಎಸ್‌ಯುವಿಗಳು ಹೆಚ್ಚಿನ ಕೊಡುಗೆ ನೀಡಿವೆ, 47,000 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ಅಕ್ಟೋಬರ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 9,286 ಯುನಿಟ್‌ಗಳೊಂದಿಗೆ ಇದುವರೆಗಿನ ಅತ್ಯಧಿಕವಾಗಿದೆ ಎಂದು ಕಂಪನಿ ಹೇಳಿದೆ.

ಹುಂಡೈ, ಕಿಯಾ, ಸ್ಕೋಡಾ ಮಾರಾಟವೂ ಹೆಚ್ಚಳ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಒಟ್ಟು ಮಾರಾಟವು ಅಕ್ಟೋಬರ್ 2025 ರಲ್ಲಿ 69,894 ವಾಹನಗಳಷ್ಟಿತ್ತು. 53,792 ವಾಹನಗಳ ದೇಶೀಯ ಮಾರಾಟ ಮತ್ತು 16,102 ವಾಹನಗಳ ರಫ್ತುಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ. ಕಿಯಾ ಇಂಡಿಯಾದ ಮಾರಾಟವು ಅಕ್ಟೋಬರ್‌ನಲ್ಲಿ ಶೇ. 30 ರಷ್ಟು ಹೆಚ್ಚಾಗಿ 29,556 ವಾಹನಗಳಿಗೆ ತಲುಪಿದೆ, ಇದು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ನಂತರದ ಕಂಪನಿಯ ಅತ್ಯಧಿಕ ಮಾರಾಟವಾಗಿದೆ. ಸ್ಕೋಡಾ ಆಟೋ ಇಂಡಿಯಾ ಅಕ್ಟೋಬರ್ 2025 ರಲ್ಲಿ 8,252 ವಾಹನಗಳ ಮಾರಾಟವನ್ನು ವರದಿ ಮಾಡಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ