Tata Sierra: ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಬಂತು 90ರ ದಶಕದ ಟಾಟಾ ಸಿಯೆರಾ: ಬೆಲೆ ಎಷ್ಟು ಗೊತ್ತೇ?
Tata Sierra launch: ಟಾಟಾ ಸಿಯೆರಾ 90 ರ ದಶಕದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿತ್ತು. ನಂತರ ಅದನ್ನು ಸ್ಥಗಿತಗೊಳಿಸಲಾಯಿತು. ಈಗ, ಕಂಪನಿಯು ನವೆಂಬರ್ 25 ರಂದು ಅದನ್ನು ಹೊಸ ಅವತಾರದಲ್ಲಿ ಪರಿಚಯಿಸಲಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ಸುಮಾರು 11 ಲಕ್ಷ ರೂ.ಗಳಾಗಿರಬಹುದು.

ಬೆಂಗಳೂರು (ಅ. 29): ಟಾಟಾ ಮೋಟಾರ್ಸ್ (TATA Motors) ತನ್ನ ಹೊಸ ಎಸ್‌ಯುವಿ ಸಿಯೆರಾವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಕಂಪನಿಯು ಮುಂದಿನ ತಿಂಗಳು ನವೆಂಬರ್ 25 ರಂದು ವಾಹನವನ್ನು ಬಿಡುಗಡೆ ಮಾಡುತ್ತಿದೆ. ಈ ಎಸ್‌ಯುವಿ ಬಹಳ ಸಮಯದಿಂದ ಸುದ್ದಿಯಲ್ಲಿತ್ತು. ಕಂಪನಿಯು ಇದನ್ನು ಡೀಲರ್‌ಶಿಪ್ ಈವೆಂಟ್‌ಗಳಲ್ಲಿ ಸಹ ಪ್ರದರ್ಶಿಸಿದೆ. ಗ್ರಾಹಕರು ಈ ಎಸ್‌ಯುವಿ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಟಾಟಾ ಸಿಯೆರಾ 90 ರ ದಶಕದ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ನಂತರ ಇದನ್ನು ಸ್ಥಗಿತಗೊಳಿಸಲಾಯಿತು. ಈಗ, ಕಂಪನಿಯು ಇದನ್ನು ಹೊಸ ಅವತಾರದಲ್ಲಿ ಪರಿಚಯಿಸಲಿದೆ.
ಟಾಟಾ ಸಿಯೆರಾ ಬೆಲೆ ಎಷ್ಟು?
ಟಾಟಾ ಎಸ್‌ಯುವಿ ವಿಭಾಗದಲ್ಲಿ ಕರ್ವ್, ಹ್ಯಾರಿಯರ್, ಸಫಾರಿ ಮುಂತಾದ ಹಲವಾರು ವಾಹನಗಳನ್ನು ನೀಡುತ್ತಿವೆ. ಇವುಗಳ ಮಧ್ಯೆ ಹೊಸ ಸಿಯೆರಾ ಎಲ್ಲಿ ಸ್ಥಾನ ಪಡೆಯಲಿದೆ ಎಂಬುದು ಪ್ರಶ್ನೆ. ಹೊಸ ಸಿಯೆರಾ ಕರ್ವ್ ಮೇಲೆ ಮತ್ತು ಹ್ಯಾರಿಯರ್ ಕೆಳಗೆ ಸ್ಥಾನ ಪಡೆಯಲಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ಸುಮಾರು 11 ಲಕ್ಷ ರೂ.ಗಳಾಗಿರಬಹುದು. ಟಾಟಾ ತನ್ನ 4 ಮೀಟರ್‌ಗಿಂತ ದೊಡ್ಡ ವಾಹನಗಳ ವಿಭಾಗದಲ್ಲಿ ಬಲಿಷ್ಠವಾಗಲು ತಯಾರಿ ನಡೆಸುತ್ತಿದೆ. ಕಂಪನಿಯು ಸಬ್-4 ಮೀಟರ್ ಎಸ್‌ಯುವಿಗಳಲ್ಲಿ ಪಂಚ್ ಮತ್ತು ನೆಕ್ಸಾನ್‌ನಂತಹ ಜನಪ್ರಿಯ ವಾಹನಗಳನ್ನು ಹೊಂದಿದೆ, ಆದರೆ 4.2 ಮೀಟರ್‌ನಿಂದ 4.4 ಮೀಟರ್ ವಿಭಾಗದಲ್ಲಿ ಟಾಟಾ ದುರ್ಬಲವಾಗಿದೆ. ಈ ಕೊರತೆಯನ್ನು ನೀಗಿಸಲು, ಟಾಟಾ ತನ್ನ ಹೊಸ ಸಿಯೆರಾವನ್ನು ಬಿಡುಗಡೆ ಮಾಡಲಿದೆ.
ಟಾಟಾ ಸಿಯೆರಾ ಎಂಜಿನ್ ಆಯ್ಕೆಗಳು
ಸಿಯೆರಾ ಭಾರತದ ಮೊದಲ ನೈಜ್ಯ ಜೀವನಶೈಲಿ SUV ಆಗಿದ್ದು, ಅದರ ಬಾಗಿದ ಫ್ರಂಟ್ ವಿಂಡೋಗೆ ಹೆಸರುವಾಸಿಯಾಗಿದೆ. ಹಳೆಯ ಸಿಯೆರಾಕ್ಕಿಂತ ಭಿನ್ನವಾಗಿ, ಹೊಸ ಸಿಯೆರಾ ಆಧುನಿಕ ಎಂಜಿನ್‌ಗಳು ಮತ್ತು ತಂತ್ರಜ್ಞಾನದೊಂದಿಗೆ 5-ಬಾಗಿಲಿನ ಮಾನೋಕಾಕ್ SUV ಆಗಿರುತ್ತದೆ. ಹೊಸ ಸಿಯೆರಾವನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು: ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ (EV).
Auto Tips: ನಾರ್ಮಲ್ ಪೆಟ್ರೋಲ್ -ಪವರ್ ಪೆಟ್ರೋಲ್: ಕಾರಿಗೆ ಯಾವ ಇಂಧನ ಉತ್ತಮ?, ವ್ಯತ್ಯಾಸ ತಿಳಿಯಿರಿ
- ಪೆಟ್ರೋಲ್ – ಇದು ಟಾಟಾದ ಹೊಸ 1.5L ಟರ್ಬೊ GDI ಎಂಜಿನ್‌ನೊಂದಿಗೆ ಬರಬಹುದು, ಇದು 170 PS ಪವರ್ ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
- ಡೀಸೆಲ್ – ಇದು ಕರ್ವ್‌ನ 1.5L ಯೂನಿಟ್ ಅಥವಾ ಹ್ಯಾರಿಯರ್‌ನ 2.0L ಸ್ಟೆಲ್ಲಾಂಟಿಸ್ ಮೂಲದ ಎಂಜಿನ್ (ಸ್ವಲ್ಪ ಕಡಿಮೆ ಶಕ್ತಿಯೊಂದಿಗೆ) ಪಡೆಯಬಹುದು.
- EV – ಮೂಲಗಳ ಪ್ರಕಾರ ICE (ಪೆಟ್ರೋಲ್/ಡೀಸೆಲ್) ಮಾದರಿಯನ್ನು ಮೊದಲು ಬಿಡುಗಡೆ ಮಾಡಲಾಗುವುದು, ನಂತರ ಸಿಯೆರಾ EV ಬಿಡುಗಡೆಯಾಗಲಿದೆ. ಸಿಯೆರಾ EV ಹ್ಯಾರಿಯರ್ EV ಯಂತೆಯೇ ಬ್ಯಾಟರಿ ಮತ್ತು ಡ್ಯುಯಲ್-ಮೋಟಾರ್ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ಆಫ್-ರೋಡಿಂಗ್‌ಗೆ ಹೆಚ್ಚು ಸೂಕ್ತವಾಗಿದೆ.
ಚಾಲಕ ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕಾರು ಅನೇಕ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೂರು-ಸ್ಕ್ರೀನ್ ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿರುವ ಮೊದಲ ಟಾಟಾ ಕಾರು ಆಗಿರುತ್ತದೆ: ಒಂದು ಇನ್ಫೋಟೈನ್‌ಮೆಂಟ್‌ಗಾಗಿ, ಒಂದು ಚಾಲಕ ಮಾಹಿತಿಗಾಗಿ ಮತ್ತು ಇನ್ನೊಂದು ಸಹ-ಚಾಲಕ ಮನರಂಜನೆಗಾಗಿ. ಮಹೀಂದ್ರಾ XUV.e9e ನಂತರ ಇದು ಎರಡನೇ ಅಂತಹ SUV ಆಗಿರುತ್ತದೆ.
ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್-ವ್ಯೂ ಅಸಿಸ್ಟ್, ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS), ಆಂಬಿಯೆಂಟ್ ಲೈಟಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಇತರ ಹಲವು ಸಂಪರ್ಕ ವೈಶಿಷ್ಟ್ಯಗಳು ಸೇರಿವೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








