ಪ್ರತಿ ಚಾರ್ಜ್ ಗೆ 541 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ9 ಉತ್ಪಾದನಾ ಆವೃತ್ತಿ ಅನಾವರಣ!
ಕಿಯಾ ಕಂಪನಿಯು ತನ್ನ ಹೊಸ ಇವಿ9 ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯನ್ನ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು 99.8ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರಲಿವೆ.
ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಲೆವಲ್ 3 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಜೋಡಣೆ ಮಾಡಲಾಗಿದ್ದು, ಇದು ಸದ್ಯ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಭಾರತದಲ್ಲಿ ಬಿಡುಗಡೆಯಾದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 70 ಲಕ್ಷದಿಂದ ರೂ. 75 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.