ಹೊಸ ತಲೆಮಾರಿನ ಥಾರ್ ಎಸ್ ಯುವಿ ಕಾರು ಉತ್ಪಾದನೆಯ ಮೂಲಕ ಮಹೀಂದ್ರಾ ಕಂಪನಿಯು 1 ಲಕ್ಷ ಯುನಿಟ್ ಉತ್ಪಾದನೆ ಗುರಿತಲುಪಿದ್ದು, ಎರಡೂವರೆ ವರ್ಷದಲ್ಲಿ 1 ಲಕ್ಷ ಯುನಿಟ್ ಉತ್ಪಾದನೆಗೊಂಡಿದೆ. ಥಾರ್ ಮಾದರಿಯು ಸದ್ಯ 4×4 ಮತ್ತು 4×2 ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಸದ್ಯ ರೂ. 9.99 ಲಕ್ಷದಿಂದ ರೂ. 16.49 ಲಕ್ಷ ಬೆಲೆ ಹೊಂದಿದೆ.