ರೂ. 2 ಲಕ್ಷ ಬೆಲೆ ಇಳಿಕೆಯೊಂದಿಗೆ ಹೊಸ ಮಾರುತಿ ಜಿಮ್ನಿಯ ಥಂಡರ್ ಎಡಿಷನ್ ಬಿಡುಗಡೆ

|

Updated on: Dec 02, 2023 | 9:00 AM

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಕಾರು ಮಾದರಿಯಾದ ಜಮ್ನಿಯಲ್ಲಿ ಹೊಸ ಥಂಡರ್ ಎಡಿಷನ್ ಬಿಡುಗಡೆ ಮಾಡಿದ್ದು, ಇದು ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ರೂ. 2 ಲಕ್ಷ ಬೆಲೆ ಇಳಿಕೆಯೊಂದಿಗೆ ಹೊಸ ಮಾರುತಿ ಜಿಮ್ನಿಯ ಥಂಡರ್ ಎಡಿಷನ್ ಬಿಡುಗಡೆ
ಮಾರುತಿ ಜಿಮ್ನಿಯ ಥಂಡರ್ ಎಡಿಷನ್ ಬಿಡುಗಡೆ
Follow us on

ಮಾರುತಿ ಸುಜುಕಿ (Maruti Suzuki) ಹೊಸ ಜಿಮ್ನಿ ಥಂಡರ್ ಎಡಿಷನ್ (Jimny Thunder Edition) ಅನ್ನು ಜಿಟಾ ಮತ್ತು ಆಲ್ಫಾ ಎಂಬ ಎರಡು ವೆರಿಯೆಂಟ್ ಗಳಲ್ಲಿ ಖರೀದಿಸಬಹುದಾಗಿದ್ದು, ಇವು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.10.74 ಲಕ್ಷದಿಂದ ರೂ.14.05 ಲಕ್ಷ ಬೆಲೆ ಹೊಂದಿವೆ. ಹೊಸ ಥಂಡರ್ ಎಡಿಷನ್ ಗಳು ಸ್ಟ್ಯಾಂಡರ್ಡ್ ಜಿಮ್ನಿ ಮಾದರಿಯ ಬೆಲೆಗೆ ಹೋಲಿಕೆ ಮಾಡಿದರೆ ಬರೋಬ್ಬರಿ ರೂ. 2 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದ್ದು, ಕಡಿಮೆ ಬೆಲೆಯಲ್ಲೂ ಅತ್ಯುತ್ತಮ ಫೀಚರ್ಸ್ ಹೊಂದಿವೆ.

ಜಿಮ್ನಿ ಥಂಡರ್ ಎಡಿಷನ್ ನಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫ್ರಂಟ್ ಬಂಪರ್, ಫ್ರಂಟ್ ಸ್ಕೀಡ್ ಪ್ಲೇಟ್, ಸೈಡ್ ಡೋರ್ ಕ್ಲಾಡಿಂಗ್, ಡೋರ್ ವಿಸರ್, ರಿಯರ್ ವ್ಯೂ ಮಿರರ್ ಗಳು, ಸ್ಪೋರ್ಟಿಯಾಗಿರುವ ಬಾನೆಟ್ ಮತ್ತು ಸೈಡ್ ಫೆಂಡರ್‌ ಮತ್ತು ಸ್ಪೋರ್ಟಿ ಸ್ಟೀರಿಂಗ್ ವ್ಹೀಲ್ ಹೊಂದಿವೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಹೆಸರೇ ಸೂಚಿಸುವಂತೆ ಹೊಸ ಕಾರಿನ ಒಳಭಾಗದಲ್ಲೂ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿಯಲ್ಲಿರುವಂತೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಹಾಗೆಯೇ ಹೊಸ ಕಾರಿನ ಎಂಜಿನ್ ಆಯ್ಕೆಯನ್ನು ಮೂಲ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದ್ದ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ತಂತ್ರಜ್ಞಾನದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಇದು 5-ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗ 104.8 ಹಾರ್ಸ್ ಪವರ್ ಮತ್ತು134.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇನ್ನು ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಜಿಮ್ನಿ ಕಾರು ಒಟ್ಟು 3,985 ಎಂಎಂ ಉದ್ದಳತೆಯೊಂದಿಗೆ 1,645 ಎಂಎಂ ಅಗಲ, 1,720 ಎಂಎಂ ಎತ್ತರ, 2,590 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದ್ದು, ಸಿಗ್ನೆಚರ್ ಜಿಮ್ನಿ ಗ್ರಿಲ್, ಫ್ಲಾಟ್ ಆಗಿರುವ ಕ್ಲಾಮ್‌ಶೆಲ್ ಬಾನೆಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಜೊತೆಗೆ ವಾಷರ್, 15 ಇಂಚಿನ ಅಲಾಯ್ ವ್ಹೀಲ್ ಜೊತೆ 195/80 ಅಳತೆಯ ಆಫ್ ರೋಡ್ ಟೈಯರ್ ಜೋಡಣೆ ಹೊಂದಿದೆ.

ಹಾಗೆಯೇ ಹೊಸ ಕಾರಿನ ಒಳಭಾಗದ ವಿನ್ಯಾಸ ಕೂಡಾ ಗ್ರಾಹಕರನ್ನು ಸೆಳೆಯಲಿದ್ದು, ಆಫ್ ರೋಡ್ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯದೊಂದಿಗೆ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಂ ಜೋಡಣೆ ಹೊಂದಿದೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಇದರರಲ್ಲಿ ಅತ್ಯುತ್ತ ಸುರಕ್ಷಾ ಫೀಚರ್ಸ್ ಗಳನ್ನು ಸಹ ಜೋಡಣೆ ಮಾಡಲಾಗಿದ್ದು, ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೊಗ್ರಾಂ, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫ್ರೆಷನ್ಷಲ್, ಹಿಲ್ ಹೋಲ್ಡ್ ಕಂಟ್ರೊಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯಲ್ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.