ಆಕರ್ಷಕ ಬೆಲೆಗೆ ಬುಲೆಟ್ ಪ್ರೂಫ್ ವೈಶಿಷ್ಟ್ಯತೆಯ ಟೆಸ್ಲಾ ಸೈಬರ್‌ಟ್ರಕ್ ಇವಿ ಪಿಕ್ಅಪ್ ಬಿಡುಗಡೆ
ಟೆಸ್ಲಾ ಕಂಪನಿಯು ತನ್ನ ಬಹುನೀರಿಕ್ಷಿತ ಸೈಬರ್‌ಟ್ರಕ್ ಇವಿ ಪಿಕ್ಅಪ್ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಮಾದರಿಯು ಭರ್ಜರಿ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ.
ಅಮೆರಿಕ ಜನಪ್ರಿಯ ಎಲೆಕ್ಟ್ರಿಕ್ ಕಾರು (Electric Cars) ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ (Tesla) ತನ್ನ ಬಹುನೀರಿಕ್ಷಿತ ಸೈಬರ್‌ಟ್ರಕ್ (Cybertruck) ಎಲೆಕ್ಟ್ರಿಕ್ ಪಿಕ್ಅಪ್ ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಇವಿ ಪಿಕ್ಅಪ್ ಮಾದರಿಯು ಮೂರು ವಿವಿಧ ವೆರಿಯೆಂಟ್ ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಿದೆ.
ಬೆಲೆ ಮತ್ತು ಬುಕಿಂಗ್ ಸೈಬರ್‌ಟ್ರಕ್ ಎಲೆಕ್ಟ್ರಿಕ್ ಪಿಕ್ಅಪ್ ಬೆಲೆಯನ್ನು ಟೆಸ್ಲಾ ಕಂಪನಿಯು ಆರಂಭಿಕವಾಗಿ 61 ಸಾವಿರ ಅಮೆರಿಕನ್ ಡಾಲರ್ ನಿಂದ ಆರಂಭಿಸಿ ಟಾಪ್ ಎಂಡ್ ಮಾದರಿಗೆ 1 ಲಕ್ಷ ಅಮೆರಿಕನ್ ಡಾಲರ್ ನಿಗದಿಪಡಿಸಿದ್ದು, ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಆರಂಭಿಕವಾಗಿ ರೂ. 50.83 ಲಕ್ಷದಿಂದ ರೂ. 83.40 ಲಕ್ಷ ಬೆಲೆ ಹೊಂದಿರಲಿದೆ.
ಹೊಸ ಸೈಬರ್‌ಟ್ರಕ್ ಮಾದರಿಯನ್ನು 2019ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿ ಬುಕಿಂಗ್ ಆರಂಭಿದ್ದ ಟೆಸ್ಲಾ ಕಂಪನಿಯು ಇದುವರೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮುಂಗಡ ಪಾವತಿಸಿದ್ದಾರೆ. ಪಿಕ್ಅಪ್ ಎಸ್ ಯುವಿ ಕಾರುಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿ ಟೆಸ್ಲಾ ಹೊಸ ಸೈಬರ್‌ಟ್ರಕ್ ಮಾದರಿಯು ಹೊಸ ಸಂಚಲನ ಮೂಡಿಸಿದ್ದು, ಇದು ಜನಪ್ರಿಯ ಫೋರ್ಡ್ 150 ಲೈಟ್ನಿಂಗ್, ಹಮ್ಮರ್ ಇವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಬ್ಯಾಟರಿ ಪ್ಯಾಕ್, ಮೈಲೇಜ್ ಮತ್ತು ಪರ್ಫಾಮೆನ್ಸ್ ಸೈಬರ್‌ಟ್ರಕ್ ನಲ್ಲಿ ಆರಂಭಿಕ ಮಾದರಿಯಲ್ಲಿ ಟೆಸ್ಲಾ ಕಂಪನಿಯು ರಿಯರ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಪ್ರತಿ ಚಾರ್ಜ್ ಗೆ 402 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಮಧ್ಯಮ ಕ್ರಮಾಂಕದ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್ ಗೆ 547 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್ ಗೆ 514 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.
ಟಾಪ್ ಎಂಡ್ ಮಾದರಿಯು ಮಧ್ಯಮ ಕ್ರಮಾಂಕದ ಮಾದರಿಗಿಂತಲೂ ಕಡಿಮೆ ಮೈಲೇಜ್ ಹೊಂದಿದ್ದರೂ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ಇದು ಕೇವ 6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆಗೆ 120 ಕಿ.ಮಿ ಟಾಪ್ ಸ್ಪೀಡ್ ನೊಂದಿಗೆ 845 ಹಾರ್ಸ್ ಪವರ್ ಉತ್ಪಾದಿಸುತ್ತದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾಡೆಲ್ ವೈ ತಂತ್ರಜ್ಞಾನ ಆಧರಿಸಿರುವ ಹೊಸ ಸೈಬರ್‌ಟ್ರಕ್ ಪಿಕ್ಅಪ್ ವಾಹನವು ವಿಶೇಷ ವಿನ್ಯಾಸದೊಂದಿಗೆ ಬಲಿಷ್ಠವಾದ ಹೊರಭಾಗದ ವಿನ್ಯಾಸವು ಬಲಶಾಲಿಯಾದ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಇತರೆ ವೆರಿಯೆಂಟ್ ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಬುಲೆಟ್ ಪ್ರೂಫ್ ಬಾಡಿ ಪ್ಯಾನೆಲ್ ಮತ್ತು ಗ್ಲಾಸ್ ಗಳನ್ನು ನೀಡಲಾಗಿದೆ.
ಇನ್ನು ಹೊಸ ಸೈಬರ್‌ಟ್ರಕ್ ಮಾದರಿಗಾಗಿ ಭಾರೀ ಬೇಡಿಕೆ ಪಡೆದುಕೊಂಡಿರುವ ಟೆಸ್ಲಾ ಕಂಪನಿಯು ಟೆಕ್ಸಾಸ್ ನಲ್ಲಿರುವ ತನ್ನ ಗಿಗಾಫ್ಯಾಕ್ಟರಿಯಲ್ಲಿ ಹೊಸ ಇವಿ ವಾಹನದ ಉತ್ಪಾದನೆಯನ್ನು ತೀವ್ರಗೊಳಿಸಿದ್ದು, ಗಿಗಾಫ್ಯಾಕ್ಟರಿಯಲ್ಲಿ ವಾರ್ಷಿಕವಾಗಿ 1.50 ಲಕ್ಷ ಯುನಿಟ್ ಉತ್ಪಾದನೆ ಮಾಡುವ ಗುರಿಹೊಂದಿದೆ.
Published On - 4:30 pm, Fri, 1 December 23