ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ಮೊಟ್ಟ ಮೊದಲ ತಂತ್ರಜ್ಞಾನ ಆಧರಿತ ಪ್ರಿಮಾ 2830 ಟಿಕೆ ವಿಎಕ್ಸ್ ಟಿಪ್ಪರ್

ಟಾಟಾ ಮೋಟರ್ಸ್ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ತಂತ್ರಜ್ಞಾನ ಆಧರಿತ ಪ್ರಿಮಾ 2830 ಟಿಕೆ ವಿಎಕ್ಸ್ ಟಿಪ್ಪರ್ ಟ್ರಕ್ ಪರಿಚಯಿಸಿದ್ದು, ಹೊಸ ಟ್ರಕ್ ಮಾದರಿಯ ವಿತರಣೆಗೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ಮೊಟ್ಟ ಮೊದಲ ತಂತ್ರಜ್ಞಾನ ಆಧರಿತ ಪ್ರಿಮಾ 2830 ಟಿಕೆ ವಿಎಕ್ಸ್ ಟಿಪ್ಪರ್
ಟಾಟಾ ಪ್ರಿಮಾ 2830 ಟಿಕೆ ವಿಎಕ್ಸ್ ಟಿಪ್ಪರ್
Follow us
Praveen Sannamani
|

Updated on: Nov 30, 2023 | 8:23 PM

ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಉದ್ಯಮ ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಿಮಾ 2830 ಟಿಕೆ ವಿಎಕ್ಸ್ ಹೇವಿ ಟಿಪ್ಪರ್ ಟ್ರಕ್ ಮಾದರಿಯನ್ನು ಪರಿಚಯಿಸಿದ್ದು, ಇದು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅತ್ಯುತ್ತಮ ಚಾಲನಾ ತಂತ್ರಜ್ಞಾನ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಪ್ರಿಮಾ 2830 ಟಿಕೆ ವಿಎಕ್ಸ್ ಟಿಪ್ಪರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಲ್ಎಕ್ಸ್ ಮತ್ತು ವಿಎಕ್ಸ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ವಿಶ್ವ ದರ್ಜೆಯ ಫ್ಲೀಟ್ ಮಾನದಂಡಗಳನ್ನು ಒಳಗೊಳ್ಳುವ ಮೂಲಕ ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಇವು ಎಕ್ಸ್ ಶೋರೂಂ ಪ್ರಕಾರ ರೂ. 44.61 ಲಕ್ಷದಿಂದ ರೂ. 53.35 ಲಕ್ಷ ಬೆಲೆ ಹೊಂದಿದ್ದು, ವಿವಿಧ ಅಪ್ಲಿಕೆಷನ್ ಗಳಿಗೆ ಅನುಗುಣವಾಗಿ ಹಲವಾರು ಮಾರ್ಪಾಡುಗಳನ್ನು ಹೊಂದಿರುತ್ತವೆ.

ಪ್ರಯಾಣಿಕ ವಾಹನಗಳ ಉತ್ಪಾದನೆಯಲ್ಲಿನ ಬದಲಾವಣೆಯೆಂತೆ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲೂ ಮಹತ್ವದ ಬದಲಾವಣೆ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೊಸ ಪ್ರಿಮಾ 2830 ಟಿಕೆ ವಿಎಕ್ಸ್ ಟ್ರಕ್ ಬಿಡುಗಡೆ ಮಾಡಿದ್ದು, ಹೊಸ ಟಿಪ್ಪರ್ ಮಾದರಿಯು ಅಧಿಕ ಉತ್ಪಾದಕತೆ ಮತ್ತು ಚಾಲಕ ಹಾಗೂ ವಾಹನ ಸುರಕ್ಷತೆಯಲ್ಲಿ ಅನುಕೂಲಕರವಾದ ವಿನ್ಯಾಸ ಹೊಂದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ

ಜೊತೆಗೆ ಹೊಸ ಟಿಪ್ಪರ್ ಮಾದರಿಯಲ್ಲಿ ಡ್ರೈವರ್ ಮಾನಿಟರಿಂಗ್ ಸಿಸ್ಟಂ, ಆಟೋಮ್ಯಾಟಿಕ್ ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮಲ್ಟಿ ಮೋಡ್ ಫ್ಯೂಲ್ ಎಫಿಯೆನ್ಷಿ (ಇಂಧನ ಕಾರ್ಯಕ್ಷಮತೆ) ಸ್ವಿಚ್, ಕ್ಯಾಮೆರಾ ಆಧಾರಿತ ಪಾರ್ಕ್ ಅಸಿಸ್ಟ್ ಸಿಸ್ಟಂ, ಇನ್-ಬಿಲ್ಟ್ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಫ್ಯುಯೆಲ್ ಮಾನಿಟರಿಂಗ್ ಸಿಸ್ಟಂ, ನ್ಯುಮ್ಯಾಟಿಕಲಿ ಸಸ್ಪೆಂಡೆಡ್ ಡ್ರೈವರ್ ಸೀಟ್, ಹ್ವಾಕ್ ಯೂನಿಟ್, ಎಂಜಿನ್ ಬ್ರೇಕ್ ಮತ್ತು ಥ್ರೂ ಆ್ಯಕ್ಸೆಲ್ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಇದಲ್ಲದೇ ಹೊಸ ವಾಣಿಜ್ಯ ವಾಹನದಲ್ಲಿ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ 4ಜಿ ಸಕ್ರಿಯಗೊಂಡ ಸಂಪರ್ಕ ಮತ್ತು ಓವರ್ ದಿ ಏರ್ ವೈಶಿಷ್ಟ್ಯತೆಯೊಂದಿಗೆ ಕಾಂಪ್ರಿಹೆನ್ಸಿವ್ ಟ್ರಿಪ್ ಮ್ಯಾನೇಜ್ಮೆಂಟ್, ಎಕ್ಸ್ ಪೆನ್ಸ್ ಮಾನಿಟರಿಂಗ್ ಮತ್ತು ಮೇಂಟೇನ್ ಶೆಡ್ಯೂಲ್ ಮೂಲಕ ಮಾಲೀಕರ ವ್ಯವಹಾರವನ್ನು ವೃದ್ಧಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಇದು ಅತ್ಯುತ್ತಮ ಇಂಧನ ಕಾರ್ಯದಕ್ಷತೆ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ವಾಹನ ಬಾಳಿಕೆಯನ್ನು ಹೆಚ್ಚಿಸಲಿದ್ದು, ಮಾಲೀಕರಿಗೆ ಹೆಚ್ಚಿನ ಲಾಭಾಂಶ ತಂದುಕೊಡುತ್ತದೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಇನ್ನು ಟಾಟಾ ಮೋಟರ್ಸ್ ಕಂಪನಿಯು ವಾಣಿಜ್ಯ ವಾಹನಗಳ ವಿಭಾಗದಲ್ಲಿ ಮಹತ್ವದ ಬದಲಾವಣೆಗಾಗಿ ಸಂಪೂರ್ಣ ಸೇವಾ 2.0 ಉಪಕ್ರಮದ ಮೂಲಕ ಗ್ರಾಹಕರಿಗೆ ವಾರ್ಷಿಕ ನಿರ್ವಹಣಾ ಗುತ್ತಿಗೆ ಮತ್ತು ರಸ್ತೆಬದಿ ನೆರವಿನಂತಹ ಹಲವಾರು ಅತ್ಯುತ್ತಮ ದರ್ಜೆಯ ಸೇವೆಗಳನ್ನು ನೀಡುತ್ತಿದೆ. ಈ ಮೂಲಕ ಗುಣಮಟ್ಟ ಮತ್ತು ಸೇವೆಯಲ್ಲಿ ತನ್ನ ಬದ್ಧತೆಯನ್ನು ಕಾಯ್ದಿಟ್ಟುಕೊಂಡು ಬರುತ್ತಿರುವ ಟಾಟಾ ಮೋಟರ್ಸ್ ದೇಶಾದ್ಯಂತ 2500ಕ್ಕೂ ಹೆಚ್ಚು ಟಚ್ ಪಾಯಿಂಟ್ ಗಳೊಂದಿಗೆ ವ್ಯಾಪಕ ಸೇವಾ ಜಾಲ, ತರಬೇತಿ ಪಡೆದ ಪರಿಣತು ಮತ್ತು ಗುಣಮಟ್ಟದ ಬಿಡಿ ಭಾಗಗಳನ್ನು ಒದಗಿಸುತ್ತಿದೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ