ಎಲೆಕ್ಟ್ರಿಕ್ ಕಾರು ಮಾರಾಟ: ಅಗ್ರಸ್ಥಾನದಲ್ಲಿ ಮುಂದುವರೆದ ಟಾಟಾ ಮೋಟಾರ್ಸ್

| Updated By: Praveen Sannamani

Updated on: Oct 26, 2022 | 4:21 PM

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಸೆಪ್ಟೆಂಬರ್ ಅವಧಿಯ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಎಲೆಕ್ಟ್ರಿಕ್ ಕಾರು ಮಾರಾಟ: ಅಗ್ರಸ್ಥಾನದಲ್ಲಿ ಮುಂದುವರೆದ ಟಾಟಾ ಮೋಟಾರ್ಸ್
electric cars
Follow us on

ಎಲೆಕ್ಟ್ರಿಕ್ ಕಾರುಗಳ ಮಾರಾಟವು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಹೆಚ್ಚಳವಾಗುತ್ತಿದ್ದು, ವಿವಿಧ ಇವಿ ಕಾರು ಮಾದರಿಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಸೆಪ್ಟೆಂಬರ್ ಅವಧಿಯಲ್ಲಿನ ಇವಿ ಮಾರಾಟ ಪಟ್ಟಿಯಲ್ಲಿ ಟಾಟಾ ಪ್ರಮುಖ ಇವಿ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ಟಾಪ್ 5 ಇವಿ ಮಾದರಿಗಳ ಪಟ್ಟಿ ಪ್ರಕಟಿಸಲಾಗಿದೆ.

ಟಾಟಾ ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ

ಎಲೆಕ್ಟ್ರಿಕ್ ಕಾರುಗಳ ಮಾರಾಟ ಪಟ್ಟಿಯಲ್ಲಿ ಟಾಟಾ ನಿರ್ಮಾಣದ ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ ಕಾರುಗಳು ಅಗ್ರಸ್ಥಾನದಲ್ಲಿದ್ದು, ಎರಡು ಮಾದರಿಗಳು ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 2,831 ಯುನಿಟ್ ಮಾರಾಟಗೊಂಡಿವೆ. ಈ ಕಾರುಗಳ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತ ಶೇ. 271ರಷ್ಟು ಹೆಚ್ಚಳವಾಗಿದ್ದು, ನೆಕ್ಸಾನ್ ಇವಿಯಲ್ಲಿ ಮ್ಯಾಕ್ಸ್ ಎಡಿಷನ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಎಕ್ಸ್ ಪ್ರೆಸ್ಸ್-ಟಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಟಿಯಾಗೋ ಇವಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಟಿಯಾಗೋ ಇವಿ ಕಾರಿನ ವಿತರಣೆಯು ಜನವರಿಯಿಂದ ಆರಂಭವಾಗಲಿದ್ದು, ಬಜೆಟ್ ಬೆಲೆಯೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಹೈಬ್ರಿಡ್ ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಹೈಕ್ರಾಸ್ ಟೀಸರ್ ಪ್ರಕಟ!

ಎಂಜಿ ಜೆಡ್ಎಸ್ ಇವಿ

ಎಂಜಿ ಮೋಟಾರ್ ಕಂಪನಿಯು ಹೊಸ ಜೆಡ್ಎಸ್ ಇವಿ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದುಬಾರಿ ಬೆಲೆ ನಡುವೆಯೂ ಎಂಜಿ ಕಂಪನಿಯು ಕಳೆದ ತಿಂಗಳು 280 ಯುನಿಟ್ ಮಾರಾಟ ಮಾಡಿದೆ. ಜೆಡ್ಎಸ್ ಇವಿ ಕಾರು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 461 ಕಿ.ಮೀ ಮೈಲೇಜ್ ನೀಡುತ್ತದೆ.

ಮಹೀಂದ್ರಾ ಇ-ವೆರಿಟೋ

ಮಹೀಂದ್ರಾ ಕಂಪನಿಯು ಕಾರು ಮಾರುಕಟ್ಟೆಯಲ್ಲಿ ಸದ್ಯ ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಈ ಹಿಂದಿನ ಇ-ವೆರಿಟೋ ಮಾದರಿಯನ್ನು ಫ್ಲಿಟ್ ಆಪರೆಟ್ ಕಂಪನಿಗಳಿಗೆ ಮಾರಾಟ ಮುಂದುವರಿಸಿದೆ. ಕಳೆದ ತಿಂಗಳು ಇ-ವೆರಿಟೋ ಒಟ್ಟು 112 ಯುನಿಟ್ ಮಾರಾಟಗೊಂಡಿದ್ದು, ಕಳೆದ ವರ್ಷದ ಮಾರಾಟಕ್ಕಿಂತ ಶೇ. 489.4 ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?

ಹ್ಯುಂಡೈ ಕೊನಾ ಇವಿ

ಪ್ರೀಮಿಯಂ ಇವಿ ಕಾರು ಮಾದರಿಯಾಗಿರುವ ಹ್ಯುಂಡೈ ಕೊನಾ ಇವಿ ಕೂಡಾ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ ತಿಂಗಳು ಹೊಸ ಕಾರು ವಿವಿಧ ಬಣ್ಣಗಳ ಆಯ್ಕೆಯೊಂದಿಗೆ 74 ಯುನಿಟ್ ಮಾರಾಟಗೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕೇವಲ 1 ಯುನಿಟ್ ಮಾತ್ರ ಮಾರಾಟ ಮಾಡಿದ್ದ ಹ್ಯುಂಡೈ ಕಂಪನಿಯು ಇದೀಗ ಶೇ. 957 ಬೆಳವಣಿಗೆ ಸಾಧಿಸಿದೆ.

ಬಿವೈಡಿ ಇ6

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಬಿವೈಡಿ ಕಂಪನಿಯು ಕಳೆದು ತಿಂಗಳು 63 ಯುನಿಟ್ ಮಾರಾಟದೊಂದಿಗೆ ಉತ್ತಮ ಮಾರಾಟ ದಾಖಲಿಸಿದೆ. ದೇಶಾದ್ಯಂತ ಪ್ರಮುಖ 5 ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಕಾರಿನ ಮಾರಾಟವು ಮುಂಬರುವ ದಿನಗಳಲ್ಲಿ ವಿವಿಧ ನಗರಗಳಿಗೆ ವಿಸ್ತರಿಸಲಿದ್ದು, ಉತ್ತಮ ಬೇಡಿಕೆಯ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Published On - 4:20 pm, Wed, 26 October 22