Toyota bZ3 Electric: ಪ್ರತಿ ಚಾರ್ಜ್ ಗೆ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ ಇವಿ ಕಾರು ಅನಾವರಣ
ಟೊಯೊಟಾ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಬಿಜೆಡ್3 ಕಾನ್ಸೆಪ್ಟ್ ಇವಿ ಸೆಡಾನ್ ಕಾರನ್ನು ಅನಾವರಣಗೊಳಿಸಿದ್ದು, ಹೊಸ ಕಾರನ್ನು ಕಂಪನಿಯು ಚೀನಿ ಮಾರುಕಟ್ಟೆಗಾಗಿ ಬಿಡುಗಡೆ ಮಾಡಲಿದೆ.
ಜಾಗತಿಕ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಟೊಯೊಟಾ(Toyota) ಕಂಪನಿಯು ಚೀನಿ ಮಾರುಕಟ್ಟೆಗಾಗಿ ವಿಶೇಷ ಇವಿ ಕಾನ್ಸೆಪ್ಟ್ ಬಿಜೆಡ್3(bz3) ಸೆಡಾನ್ ಅನಾವರಣಗೊಳಿಸಿದ್ದು, ಹೊಸ ಕಾರನ್ನು ಕಂಪನಿಯು ಚೀನಿ ಕಾರು ಉತ್ಪಾದನಾ ಕಂಪನಿಯಾಗಿರುವ ಫಸ್ಟ್ ಆಟೋಮೊಬೈಲ್ ವರ್ಕ್ಸ್(ಎಫ್ಎಡಬ್ಲ್ಯು) ಜೊತೆಗೂಡಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ ಇವಿ ಕಾರನ್ನು ಟೊಯೊಟಾ ಮತ್ತು ಫಸ್ಟ್ ಆಟೋಮೊಬೈಲ್ ವರ್ಕ್ಸ್ ಕಂಪನಿಯ ಸುಮಾರು 100 ತಂತ್ರಜ್ಞರ ಒಳಗೊಂಡ ತಂಡವು ನಿರ್ಮಾಣಗೊಳಿಸಿದ್ದು, ಹೊಸ ಕಾರು ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ ಮಾನದಂಡಗಳೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 600 ಕಿ.ಮೀ ಮೈಲೇಜ್ ನೀಡಲಿದೆ.
ಬಿಜೆಡ್3 ಇವಿ ಕಾನ್ಸೆಪ್ಟ್ ಸೆಡಾನ್ ಕಾರಿನಲ್ಲಿ ಟೊಯೊಟಾ ಕಂಪನಿಯು ಚೀನಿ ಕಂಪನಿ ಉತ್ಪಾದಿತ ಬ್ಲೇಡ್ ಎಲ್ಎಫ್ ಪಿ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಹೊಸ ಬ್ಯಾಟರಿಯು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ವಿನ್ಯಾಸ, ಕೂಲಿಂಗ್, ಕಂಟ್ರೋಲ್ ಮತ್ತು ಸೇಫ್ಟಿ ಸಿಸ್ಟಂನೊಂದಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತದೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?
ಬ್ಯಾಟರಿ ತಂತ್ರಜ್ಞಾನಕ್ಕಾಗಿ ಬಿವೈಡಿ ಜೊತೆ ಒಪ್ಪಂದ
ಟೊಯೊಟಾ ಮತ್ತು ಫಸ್ಟ್ ಆಟೋಮೊಬೈಲ್ ವರ್ಕ್ಸ್ ಕಂಪನಿಗಳು ಹೊಸ ಇವಿ ಕಾರು ಮಾದರಿಗಾಗಿ ಬಿವೈಡಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಹೊಸ ಕಾರಿನಲ್ಲಿ TZ200-XS002 ಎಲೆಕ್ಟ್ರಿಕ್ ಮೋಟಾರ್ ಗ್ರಾಹಕರ ಬೇಡಿಕೆಯೆಂತೆ ಎರಡು ರೀತಿಯ ಪವರ್ ಪ್ಯಾಕೇಜ್ ಹೊಂದಿರಲಿದೆ.
ಆರಂಭಿಕ ಮಾದರಿಯು ಹೆಚ್ಚಿನ ಮೈಲೇಜ್ ಜೊತೆಗೆ 178 ಬಿಎಚ್ ಪಿ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು 238 ಬಿಎಚ್ ಪಿ ಉತ್ಪಾದನೆಯೊಂದಿಗೆ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ನೀಡುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಶಾರ್ಪ್ ಎಡ್ಜ್ ಡಿಸೈನ್ ಹೊಂದಿರುವ ಹೊಸ ಕಾರು ಟೊಯೊಟಾ ಕಂಪನಿಯ e-TNGA EV ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, 4,725 ಎಂಎಂ ಉದ್ದ, 1,835 ಎಂಎಂ ಅಗಲ, 1,475 ಎಂಎಂ ಎತ್ತರ ಮತ್ತು 2,880 ಎಂಎಂ ವ್ಹೀಲ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಹೊಂದಿದೆ.
ಮುಂಭಾಗದಲ್ಲಿ ಶಾರ್ಕ್ ಡಿಸೈನ್ ನೊಂದಿಗೆ ಫ್ಲ್ಯಾಟ್ ಡೋರ್ ಹ್ಯಾಂಡಲ್, ಅಲ್ಯುನಿಯಂ ವ್ಹೀಲ್ಸ್ ಮತ್ತು ರಿಯರ್ ಬಂಪರ್ ಹೊಂದಿದ್ದು, ಕಾರಿನ ಒಳಭಾಗದಲ್ಲಿ ಫ್ಲೋಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯವು ಗಮನಸೆಳೆಯುತ್ತದೆ.
ಇದನ್ನು ಓದಿ: ಮಾರುತಿ ಸುಜುಕಿ ರೀಬ್ಯಾಡ್ಜ್ ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ ಟೊಯೊಟಾ ಇನೋವಾ ಹೈಕ್ರಾಸ್
ಬಿಡುಗಡೆ ಯಾವಾಗ?
ಹೊಸ ಕಾರನ್ನು ಕಂಪನಿಯು 2023ರ ಮಧ್ಯಂತರದಲ್ಲಿ ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ತದನಂತರ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸುವ ಸಾಧ್ಯತೆಗಳಿವೆ. ಆದರೆ ಹೊಸ ಕಾರನ್ನು ಟೊಯೊಟಾ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಿದ್ದು, e-TNGA EV ಪ್ಲ್ಯಾಟ್ ಫಾರ್ಮ್ ಆಧರಿಸಿ ಹೊಸ ಮಾದರಿಯನ್ನು ಇವಿ ಕಾರನ್ನು ಬಿಡುಗಡೆ ಮಾಡಬಹುದಾಗಿದೆ.
Published On - 8:20 pm, Tue, 25 October 22