AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದ ಸಂಭ್ರಮಕ್ಕಾಗಿ ಓಲಾ ಇವಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ದೇಶಾದ್ಯಂತ ಹೋಳಿ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದ್ದು, ಹೋಳಿ ಹಬ್ಬದ ಸಂಭ್ರಮಕ್ಕಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಇವಿ ಸ್ಕೂಟರ್ ಉತ್ಪನ್ನಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

Follow us
Praveen Sannamani
|

Updated on:Mar 08, 2023 | 8:48 PM

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ(Electric Two Wheeler) ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ಇವಿ ಸ್ಕೂಟರ್ ಗಳ ಖರೀದಿಯ ಮೇಲೆ ಆಕರ್ಷಕ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಕಂಪನಿಯು ಕ್ಯಾಶ್‌ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಸೇರಿದಂತೆ ಹಲವು ಹೆಚ್ಚುವರಿ ಉಳಿತಾಯ ಯೋಜನೆಗಳನ್ನ ಪ್ರಕಟಿಸಿದೆ.

ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1, ಎಸ್1 ಪ್ರೊ ಮತ್ತು ಎಸ್1 ಏರ್ ಸ್ಕೂಟರ್ ಗಳ ಖರೀದಿ ಮೇಲೆ ಆಫರ್ ನೀಡುತ್ತಿದ್ದು, ಮಾರ್ಚ್ 8ರಿಂದ 12ರ ತನಕ ಬುಕಿಂಗ್ ದಾಖಲಿಸುವ ಗ್ರಾಹಕರಿಗೆ ಮಾತ್ರ ಹೊಸ ಆಫರ್ ಅನ್ವಯಿಸಲಿದೆ. ಹಾಗಾದ್ರೆ ಯಾವ ಇವಿ ಸ್ಕೂಟರ್ ಮಾದರಿಯ ಮೇಲೆ ಎಷ್ಟು ಆಫರ್ ಲಭ್ಯವಿದೆ ಎನ್ನುವುದನ್ನ ಇಲ್ಲಿ ತಿಳಿಯೋಣ.

ಎಸ್1 ಪ್ರೊ ಆಫರ್ ಗಳು

ಓಲಾ ಎಲೆಕ್ಟ್ರಿಕ್ ಕಂಪನಿಯು ಹೈ ಎಂಡ್ ಇವಿ ಸ್ಕೂಟರ್ ಮಾದರಿಯಾದ ಎಸ್1 ಪ್ರೊ ಆವೃತ್ತಿಯ ಮೇಲೆ ರೂ. 16 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 12 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 4 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಮತ್ತು ಇತರೆ ಉಳಿತಾಯ ಯೋಜನೆಗಳನ್ನ ಒಳಗೊಂಡಿರಲಿದೆ. ಸದ್ಯ ಎಸ್1 ಪ್ರೊ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.27 ಲಕ್ಷ ಬೆಲೆ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 181 ಕಿ.ಮೀ ಮೈಲೇಜ್ ನೀಡುತ್ತದೆ.

ಎಸ್1 ಆಫರ್ ಗಳು

ಓಲಾ ಎಲೆಕ್ಟ್ರಿಕ್ ಕಂಪನಿಯು ಮಧ್ಯಮ ಕ್ರಮಾಂಕದ ಎಸ್1 ಇವಿ ಆವೃತ್ತಿಯ ಮೇಲೆ ರೂ. 4 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 2 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 2 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಮತ್ತು ಇತರೆ ಉಳಿತಾಯ ಅವಕಾಶಗಳನ್ನ ನೀಡಲಾಗುತ್ತಿದೆ. ಎಸ್1 ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 99 ಸಾವಿರ ಬೆಲೆ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 128 ಕಿ.ಮೀ ಮೈಲೇಜ್ ನೀಡುತ್ತದೆ.

ಎಸ್1 ಏರ್

ಎಸ್1 ಏರ್ ಇವಿ ಆವೃತ್ತಿಯ ಮೇಲೂ ಓಲಾ ಎಲೆಕ್ಟ್ರಿಕ್ ಕಂಪನಿಯು ರೂ. 4 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 2 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 2 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಮತ್ತು ಇತರೆ ಉಳಿತಾಯ ಅವಕಾಶಗಳನ್ನ ನೀಡಲಾಗುತ್ತಿದೆ. ಎಸ್1 ಏರ್ ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 84,999 ಬೆಲೆ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 101 ಕಿ.ಮೀ ಮೈಲೇಜ್ ನೀಡುತ್ತದೆ.

ಇತರೆ ಆಫರ್ ಗಳು

ಪ್ರತ್ಯೇಕ ಆಫರ್ ಗಳ ಜೊತೆಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಇನ್ನು ಹೆಚ್ಚಿನ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಓಲಾ ಮಾರಾಟ ಮಳಿಗೆಗಳಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರಿಗಾಗಿ ರೂ. 7 ಸಾವಿರ ಮೌಲ್ಯ ಆಫರ್ ನೀಡಿದೆ. ಜೊತೆಗೆ ಓಲಾ ಕೇರ್ ಪ್ಲ್ಯಾನ್ ಖರೀದಿಯ ಮೇಲೆ ಶೇ. 50 ರಷ್ಟು ಆಫರ್ ನೀಡುತ್ತಿದ್ದು, ಓಲಾ ಕೇರ್ ಪ್ಲ್ಯಾನ್ ನಲ್ಲಿ ಆ್ಯನುವಲ್ ಸರ್ವಿಸ್, ಫ್ರೀ ಹೋಂ ಸರ್ವಿಸ್ ಜೊತೆಗೆ ಪಿಕ್ಅಪ್/ಡ್ರಾಪ್, ತುರ್ತು ಸಂದರ್ಭಗಳಲ್ಲಿ ಡಾಕ್ಟರ್ ಮತ್ತು ಆ್ಯಂಬುಲೆನ್ಸ್ ಸರ್ವಿಸ್ ಸಹ ಸಿಗಲಿದೆ.

Published On - 4:24 pm, Wed, 8 March 23

ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?