PMV EaS-E: ಬಜೆಟ್ ಬೆಲೆಯಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಪಿಎಂವಿ ಮೈಕ್ರೊ ಇವಿ ಕಾರು ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪರ್ಸನಲ್ ಮೊಬಿಲಿಟಿ ವೆಹಿಕಲ್ ಕಂಪನಿಯು ತನ್ನ ಹೊಸ ತಂತ್ರಜ್ಞಾನ ಪ್ರೇರಿತ ಇಎಸ್-ಇ ಮೈಕ್ರೊ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.

PMV EaS-E: ಬಜೆಟ್ ಬೆಲೆಯಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಪಿಎಂವಿ ಮೈಕ್ರೊ ಇವಿ ಕಾರು ಬಿಡುಗಡೆ
ಬಜೆಟ್ ಬೆಲೆಯಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಪಿಎಂಪಿ ಮೈಕ್ರೊ ಇವಿ ಕಾರು ಬಿಡುಗಡೆ
Follow us
Praveen Sannamani
|

Updated on:Nov 17, 2022 | 6:28 PM

ಭಾರತದಲ್ಲಿ ಇವಿ ಕಾರುಗಳ(Electric Cars) ಮಾರಾಟ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಅದರಲ್ಲೂ ಸ್ಟಾರ್ಟ್ಅಪ್ ಇವಿ ಕಂಪನಿಗಳು ಭಾರೀ ಹೂಡಿಕೆಯೊಂದಿಗೆ ಸಾಂಪ್ರಾದಾಯಿಕ ವಾಹನಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಬಜೆಟ್ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಪರ್ಸನಲ್ ಮೊಬಿಲಿಟಿ ವೆಹಿಕಲ್(PMV) ಕಂಪನಿಯು ಸಹ ತನ್ನ ಮೊದಲ ಮೈಕ್ರೊ ಇವಿ ಕಾರು ಬಿಡುಗಡೆಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮುಂಬೈ ಮೂಲದ ಪಿಎಂವಿ ಕಂಪನಿಯು ಇವಿ ವಾಹನ ಉದ್ಯಮಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದು, ಕಂಪನಿಯು ಆರಂಭಿಕ ಹಂತದಲ್ಲಿಯೇ ವಿನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡ ಇಎಸ್-ಇ(EaS-E) ಮೈಕ್ರೊ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದು ಟಾಟಾ ನ್ಯಾನೋ ಕಾರಿಗಿಂತಲೂ ಕಡಿಮೆ ಉದ್ದಳತೆ ಹೊಂದಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಬೆಲೆಯಲ್ಲಿ ಬಿಡುಗಡೆಯಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ.

PMV EaS-E Microcar

ಪಿಎಂವಿ ಮೈಕ್ರೊ ಇವಿ ಬೆಲೆ

ಪಿಎಂವಿ ಕಂಪನಿಯ ನಿರ್ಮಾಣದ ಹೊಸ ಮೈಕ್ರೊ ಇವಿ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 4.79 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು 6 ಸಾವಿರ ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ. ಆಸಕ್ತ ಗ್ರಾಹಕರು ಆನ್‌ಲೈನ್‌ ಮೂಲಕ ರೂ 2 ಸಾವಿರ ಮುಂಗಡ ಹಣ ಪಾವತಿಯೊಂದಿಗೆ ಬುಕಿಂಗ್ ಮಾಡಬಹುದಾಗಿದೆ. ಇದರಲ್ಲಿ ಮೊದಲ 10 ಸಾವಿರ ಗ್ರಾಹಕರಿಗೆ ಮಾತ್ರ ಸದ್ಯದ ದರ ಅನ್ವಯಿಸಲಿದ್ದು, ತದನಂತರ ದರ ಹೆಚ್ಚಳವಾಗಲಿದೆ.

ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಈ ಮೂರು ಬಹುನೀರಿಕ್ಷಿತ ಕಾರುಗಳು!

ಮೈಲೇಜ್ ಮತ್ತು ಪರ್ಫಾಮೆನ್ಸ್

ಹೊಸ ಕಾರಿನಲ್ಲಿ ಕಂಪನಿಯು 48B ಬ್ಯಾಟರಿ ಜೋಡಣೆ ಮಾಡಿದ್ದು, ಇದು ಇದು ಪ್ರತಿ ಚಾರ್ಜ್ ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರೊಂದಿಗೆ ಗ್ರಾಹಕರು ತಮ್ಮ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 120 ಕಿಮಿ ರೇಂಜ್, 160 ಕಿಮೀ ರೇಂಜ್ ಮತ್ತು 200 ಕಿಮೀ ರೇಂಜ್ ಆವೃತ್ತಿಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದ್ದು, ಇದರೊಂದಿಗೆ ಹೊಸ ಇವಿ ಕಾರು 13 ಹಾರ್ಸ್ ಪವರ್ ಜೊತೆ 50 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಇದು ಕೇವಲ 5 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿಯು 3kW ಎಸಿ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದೆ.

PMV EaS-E Microcar

ಹೊಸ ಕಾರಿನಲ್ಲಿರುವ ಬ್ಯಾಟರಿ ಸೌಲಭ್ಯವು ಕೇವಲ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಇದರಲ್ಲಿರುವ ರೀಜನರೇಟಿವ್ ಬ್ರೇಕಿಂಗ್‌ ಸಿಸ್ಟಂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ. ಹಾಗೆಯೇ ಹೊಸ ಇವಿ ಕಾರಿನಲ್ಲಿ ವಿವಿಧ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಹಲವಾರು ಉನ್ನತ-ಮಟ್ಟದ ವೈಶಿಷ್ಟ್ಯಗಳಿವೆ.

ಇದನ್ನೂ ಓದಿ: ಹೋಂಡಾ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಡಿಸೈನ್ ಮತ್ತು ಫೀಚರ್ಸ್

ಬಜೆಟ್ ಬೆಲೆಯಲ್ಲೂ ಸ್ಪೋರ್ಟಿ ಸ್ಟೈಲ್ ಹೊಂದಿರುವ ಹೊಸ ಕಾರಿನಲ್ಲಿ ರೌಂಡ್ ಹೆಡ್‌ಲ್ಯಾಂಪ್‌ಗಳು, ರನ್ನಿಂಗ್ ಎಲ್ಇಡಿ ಲೈಟ್ ಬಾರ್ ಮತ್ತು ಸ್ಲಿಮ್ ಎಲ್ಇಡಿ ಲ್ಯಾಂಪ್‌ ಸೌಲಭ್ಯವಿದೆ. ಹಾಗೆಯೇ ಟೈಲ್-ಲೈಟ್‌ಗಳ ಮೇಲೆ ಲೈಟ್ ಬಾರ್ ಜೋಡಿಸಲಾಗಿದ್ದು, ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಸಿ, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ರಿಮೋಟ್ ಪಾರ್ಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ.

PMV EaS-E Microcar

ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡ ಹೊಸ ಮೈಕ್ರೊ ಕಾರು ಸಿದ್ದಪಡಿಸಿರುವ ಪಿಎಂವಿ ಕಂಪನಿಯು ಹೊಸ ಕಾರಿನಲ್ಲೂ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ನೀಡಿದೆ. ಇದು 2,915 ಎಂಎಂ, 1,1157 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವನ್ನು ಹೊಂದಿದ್ದು, ಸಣ್ಣ ಗಾತ್ರದ ಕ್ಯಾಬಿನ್ ನಲ್ಲಿ ಇಬ್ಬರು ವಯಸ್ಕರು ಮತ್ತು ಮಗುವಿಗೆ ಕೂರುವ ಅವಕಾಶವಿದೆ. ಜೊತೆಗೆ ಈ ಎಲೆಕ್ಟ್ರಿಕ್ ಕಾರು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 550 ಕೆಜಿ ಒಟ್ಟು ತೂಕವನ್ನು ಹೊಂದಿದೆ. ಈ ಮೂಲಕ ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು 2023ರ ಮಧ್ಯಂತರದಲ್ಲಿ ಗ್ರಾಹಕರ ಕೈ ಸೇರುವ ನೀರಿಕ್ಷೆಯಿದೆ.

Published On - 6:21 pm, Thu, 17 November 22