ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಫೀಚರ್ಸ್ ಹೊಂದಿರುವ ಬಜೆಟ್ ಕಾರುಗಳ ಮೂಲಕ ಗಮನಸೆಳೆಯುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ (Renault and Nissan) ಕಂಪನಿಗಳು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡಗಡೆ ಮಾಡುತ್ತಿವೆ. ಭಾರತದಲ್ಲಿ ಸಹಭಾಗಿತ್ವ ಯೋಜನೆ ಅಡಿ ಹೊಸ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಇದೀಗ ಮತ್ತೊಂದು ಬೃಹತ್ ಯೋಜನೆ ರೂಪಿಸಿವೆ.
ಹೊಸ ಯೋಜನೆಯೊಂದಿಗೆ ಎರಡು ಕಂಪನಿಗಳು ತಮ್ಮದೇ ಬ್ರಾಂಡ್ ಅಡಿಯಲ್ಲಿ ತಲಾ ಒಂದೊಂದು ಮಧ್ಯಮ ಕ್ರಮಾಂಕದ ಎಸ್ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುತ್ತಿವೆ.
ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ಮಾಡುತ್ತಿದ್ದು, ಹೊಸ ಕಾರುಗಳು ಮೊದಲ ಹಂತದಲ್ಲಿ 5 ಸೀಟರ್ ಸೌಲಭ್ಯದೊಂದಿಗೆ ಬಿಡುಗಡೆಯಾಗಲಿದ್ದರೆ ಕೆಲವು ದಿನಗಳ ನಂತರ ಅದೇ ಮಾದರಿಗಳಲ್ಲಿ 7 ಸೀಟರ್ ಆವೃತ್ತಿಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಹೊಸ ಯೋಜನೆ ಅಡಿ ಬಿಡುಗಡೆ ಮಾಡಲಾಗುತ್ತಿರುವ ರೆನಾಲ್ಟ್ ಡಸ್ಟರ್ ಹೊಸ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದರೆ, ನಿಸ್ಸಾನ್ ಪರಿಚಯಿಸುತ್ತಿರುವ ಹೊಸ ಎಸ್ ಯುವಿ ಈ ಹಿಂದಿನ ಕಿಕ್ಸ್ ಕಾರು ಮಾದರಿಯನ್ನು ಆಧರಿಸಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸ್ಟೈಲಿಶ್ ಡಿಸೈನ್ ಮತ್ತು ಸಖತ್ ಫೀಚರ್ಸ್ ಪಡೆದುಕೊಳ್ಳಲಿದೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್
ಭಾರತದಲ್ಲಿ ಹೊಸ ಕಾರುಗಳ ಉತ್ಪಾದನೆಯನ್ನು ಮತ್ತಷ್ಟು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಸಿಎಂಎಫ್-ಬಿ ಪ್ಲ್ಯಾಟ್ ಫಾರ್ಮ್ ಅನ್ನು ಸಿದ್ದಪಡಿಸಿದ್ದು, ಎರಡೂ ಮಾದರಿಗಳಲ್ಲೂ ಒಂದೇ ರೀತಿಯ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಮಾಹಿತಿಗಳ ಪ್ರಕಾರ, ರೆನಾಲ್ಟ್-ನಿಸ್ಸಾನ್ ಹೊಸ ಕಾರುಗಳಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಎರಡು ಕಾರು ಮಾದರಿಗಳು ಅತ್ಯುತ್ತಮ ಪರ್ಫಾಮೆನ್ಸ್ ಗಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಹೊಸ ಕಾರುಗಳಲ್ಲಿ ಹೈಬ್ರಿಡ್ ಆವೃತ್ತಿಯನ್ನು ಸಹ ಪರಿಚಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ಈ ಮೂಲಕ ರೆನಾಲ್ಟ್-ನಿಸ್ಸಾನ್ ಹೊಸ 5 ಸೀಟರ್ ಸೌಲಭ್ಯದ ಕಾರುಗಳು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಕಾರುಗಳಿಗೆ ಪೈಪೋಟಿಯಾಗಲಿದ್ದರೆ 7 ಸೀಟರ್ ಸೌಲಭ್ಯದ ಕಾರು ಮಾದರಿಗಳು ಮಾರುತಿ ಸುಜಕಿ ಗ್ರ್ಯಾಂಡ್ ವಿಟಾರಾ, ಎಂಜಿ ಹೆಕ್ಟರ್, ಹ್ಯುಂಡೈ ಅಲ್ಕಾಜರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಪೈಪೋಟಿಯಾಗಲಿವೆ. ಇನ್ನು ರೆನಾಲ್ಟ್-ನಿಸ್ಸಾನ್ ಹೊಸ ಕಾರು ಮಾದರಿಗಳನ್ನು 2025ರ ವೇಳೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇವು ಮಧ್ಯಮ ವರ್ಗದ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.
Published On - 3:57 pm, Mon, 15 April 24