ಮಧ್ಯಮ ಕ್ರಮಾಂಕದ ಬಜೆಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಜೂನ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲೊಯಾಲಿಟಿ ಆಫರ್ ಲಭ್ಯವಿವೆ.
ರೆನಾಲ್ಟ್ ಕಂಪನಿಯು ಟ್ರೈಬರ್ ಮಿನಿ ಎಂಪಿವಿ, ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಕ್ವಿಡ್ ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಯಾವ ಕಾರಿನ ಮೇಲೆ ಎಷ್ಟು ಆಫರ್ ಲಭ್ಯವಿದೆ? ಯಾವ ಆಫರ್ ಗಳಲ್ಲಿ ಹೊಸ ಕಾರು ಖರೀದಿ ಉತ್ತಮ ಎನ್ನುವುದನ್ನು ಇಲ್ಲಿ ತಿಳಿಯೋಣ.
ಇದನ್ನೂ ಓದಿ: ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಂಪ್ಯಾಕ್ಟ್ ಎಸ್ ಯುವಿ ಅನಾವರಣ
ಹ್ಯಾಚ್ ಬ್ಯಾಕ್ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಕ್ವಿಡ್ ಕಾರು 2015ರಿಂದಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕ್ವಿಡ್ ಕಾರಿನ ಮೇಲೆ ಕಂಪನಿಯು ಒಟ್ಟಾರೆ ರೂ. 57 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಬಿಎಸ್6 ಆವೃತ್ತಿಯ ಮೇಲೆ ರೂ. 25 ಸಾವಿರ ಮೌಲ್ಯದ ಕ್ಯಾಶ್ ಬ್ಯಾಕ್, ರೂ.20 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮತ್ತು ರೂ. 12 ಸಾವಿರ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ. ಇದರ ಜೊತೆಗೆ ಬಿಎಸ್6 ಎರಡನೇ ಹಂತದ ಮಾನದಂಡ ಪೂರೈಸಿರುವ ಹೊಸ ಕ್ವಿಡ್ ಮೇಲೂ ರೂ. 57 ಸಾವಿರ ಮೌಲ್ಯದ ಆಫರ್ ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
ರೆನಾಲ್ಟ್ ಕಂಪನಿಯು ಟ್ರೈಬರ್ ಮಿನಿ ಎಂಪಿವಿ ಮಾದರಿಯ ಖರೀದಿಯ ಮೇಲೆ ರೂ. 62 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಮಾತ್ರವೇ ಹೊಸ ಆಫರ್ ಅನ್ವಯಿಸಲಿದ್ದು, ಬಿಎಸ್6 ಮತ್ತು ಬಿಎಸ್6 2ನೇ ಹಂತದ ಮಾನದಂಡ ಪೂರೈಸಿರುವ ಹೊಸ ಕಾರಿನ ಮೇಲೂ ಆಫರ್ ಅನ್ವಯಿಸುತ್ತದೆ. ಹಾಗೆಯೇ ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಟಾಟಾ ಪಂಚ್ ಗಿಂತ ಹ್ಯುಂಡೈ ಎಕ್ಸ್ ಟರ್ ಯಾಕೆ ಬೆಸ್ಟ್?
ಹೊಸ ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 65 ಸಾವಿರ ಮೌಲ್ಯದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಮಾತ್ರವೇ ಹೊಸ ಆಫರ್ ಅನ್ವಯಿಸುತ್ತದೆ. ಜೊತೆಗೆ ಹೊಸ ಆಫರ್ ಬಿಎಸ್6 ಮತ್ತು ಬಿಎಸ್6 2ನೇ ಹಂತದ ಮಾನದಂಡ ಪೂರೈಸಿದ ಆವೃತ್ತಿಯ ಮೇಲೂ ಅನ್ವಯಿಸಲಿದ್ದು, ಇದು 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.