ಅದ್ಯಾಕೆ ಕಾರಿನ ಸೈಡ್ ಮಿರರ್‌ನಲ್ಲಿ ದೂರದ ವಸ್ತುಗಳು ಹತ್ತಿರದಲ್ಲಿರುವಂತೆ ಕಾಣುತ್ತವೆ? ಅದು ಮೆದುಳಿಗೆ ಕಳಿಸುವ ಸಂದೇಶವಾದರೂ ಏನು?
Outside rear view mirror: ಕಾರಿನ ಸೈಡ್ ಮಿರರ್‌ನಲ್ಲಿ ದೂರದ ವಸ್ತುಗಳು ಏಕೆ ಹತ್ತಿರದಲ್ಲಿರುವಂತೆ ಕಾಣುತ್ತವೆ? ಕುತೂಹಲಕಾರಿ ರಹಸ್ಯ ಇಲ್ಲಿದೆ!
Outside rear view mirror: ಹೊರಗಿನ ಹಿಂಬದಿಯ ಕನ್ನಡಿ -ಕಾರುಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ವೆಚ್ಚವು ಹೆಚ್ಚಾಗುತ್ತಿದ್ದರೂ, ಅದಕ್ಕೆ ತಕ್ಕಂತೆ ವೈಶಿಷ್ಟ್ಯಗಳು ಸಹ ಬದಲಾಗುತ್ತವೆ. ಕಾರಿನಲ್ಲಿನ (car) ಸೌಕರ್ಯಗಳು ನಮ್ಮ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಎಲ್ಲರಿಗೂ ಈ ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಕೌತುಕದ ಸಂಗತೊಯೆಂದರೆ ಜನರೂ ಸಹ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಒಂದು ವೈಶಿಷ್ಟ್ಯವೆಂದರೆ ಕಾರಿನ ಔಟ್‌ಸೈಡ್ ರಿಯರ್ ವ್ಯೂ ಮಿರರ್ (ORVM). ಹೊರ ಭಾಗದಿಂದ ಕಾರಿಗೆ ಲಗತ್ತಿಸಿರುವ ಕನ್ನಡಿಗಳನ್ನು (mirror) ಗಮನಿಸಿದರೆ ಅದರಲ್ಲಿ ಕಾಣುವ ವಸ್ತುಗಳು, ಇತರ ವಾಹನಗಳು ದೂರದಲ್ಲಿದ್ದರೂ ಹತ್ತಿರದಲ್ಲಿಯೇ ಇರುವಂತೆ (Convex) ಕಾಣಿಸುತ್ತವೆ. ಕನ್ನಡಿಯ ಮೇಲೆ ಸಹ ಅದನ್ನು ಬರೆಯಲಾಗಿದೆ. ಇದಕ್ಕೆ ಕಾರಣ.. ಕನ್ನಡಿಯ ವಿನ್ಯಾಸದಲ್ಲಿ ಅಡಗಿದೆ (Automobiles).
ಚಾಲನೆ ಮಾಡುವಾಗ ಮೆದುಳನ್ನು ಎಚ್ಚರವಾಗಿರಿಸಲು ಇದು ಸಹಾಯ:
ಹೆಚ್ಚಿನ ಕಾರುಗಳು ORPM ಗಳಿಗೆ ಪೀನ (ಉಬ್ಬಿದ) ಕನ್ನಡಿಯನ್ನು (Convex Mirror) ಬಳಸುತ್ತವೆ. ಇದರಲ್ಲಿ ಗಾಜಿನ ಪ್ರತಿಫಲಿತ ಮೇಲ್ಮೈ ಬೆಳಕಿನ ಮೂಲವನ್ನು ಪ್ರತಿಬಿಂಬಿಸುತ್ತದೆ. ಇದರಿಂದಾಗಿ ಕನ್ನಡಿಯ ಮೇಲೆ ಬೀಳುವ ಬೆಳಕು ಹೆಚ್ಚು ಚದುರುತ್ತದೆ. ಪರಿಣಾಮವಾಗಿ, ಚಿಕ್ಕ ಕನ್ನಡಿಯಲ್ಲಿ ಹೆಚ್ಚಿನ ವಾಹನಗಳು ಮತ್ತು ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಪೀನದ (Convex) ಕನ್ನಡಿಯಿಂದಾಗಿ, ಕಾರನ್ನು ಸುರಕ್ಷಿತ ಮತ್ತು ಸರಿಯಾದ ರೀತಿಯಲ್ಲಿ ಓಡಿಸಬಹುದು.
ಇದನ್ನೂ ಓದಿ: 360 ಡಿಗ್ರಿ ಕ್ಯಾಮೆರಾ ಹೊಂದಿರುವ ಬಜೆಟ್ ಬೆಲೆಯ ಕಾರುಗಳಿವು!
ಕನ್ನಡಿಯಲ್ಲಿ ವಸ್ತುಗಳು ಚಿಕ್ಕದಾಗಿ ಕಾಣುವ ಪ್ರಕ್ರಿಯೆಯನ್ನು ಮಿನಿಮೈಸೇಶನ್ ಎಂದು ಕರೆಯಲಾಗುತ್ತದೆ. ಡ್ರೈವಿಂಗ್ ಮಾಡುವಾಗ ಸುರಕ್ಷತೆಗೆ ವಸ್ತುಗಳ ಮಿನಿಮೈಸೇಶನ್ ಕೂಡ ಬಹಳ ಮುಖ್ಯ. ಕನ್ನಡಿಯ ಓರೆ ಹೆಚ್ಚಿದ್ದರೆ.. ಹೆಚ್ಚು ಕಡಿಮೆಗೊಳಿಸುವಿಕೆಯಿಂದಾಗಿ ORPM ಗಳಲ್ಲಿ ಸಣ್ಣ ಸಣ್ಣ ವಸ್ತುಗಳು ದೂರದಿಂದಲೇ ಕಾಣಿಸಿಕೊಳ್ಳುತ್ತವೆ. ಚಾಲನೆ ಮಾಡುವಾಗ ನಮ್ಮ ಮೆದುಳನ್ನು ಎಚ್ಚರವಾಗಿರಿಸಲು ಇದು ಸಹಾಯ ಮಾಡುತ್ತದೆ.
ವಾಹನೋದ್ಯಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ