360 ಡಿಗ್ರಿ ಕ್ಯಾಮೆರಾ ಹೊಂದಿರುವ ಬಜೆಟ್ ಬೆಲೆಯ ಕಾರುಗಳಿವು!
ಹೊಸ ಕಾರುಗಳಲ್ಲಿ ಇತ್ತೀಚೆಗೆ ನೀಡಲಾಗುತ್ತಿರುವ ಹಲವು ಪ್ರೀಮಿಯಂ ಫೀಚರ್ಸ್ ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಇದರಲ್ಲಿ 360 ಡಿಗ್ರಿ ವ್ಯೂ ಕ್ಯಾಮೆರಾ ಸೌಲಭ್ಯ ಹೆಚ್ಚಿನ ಬೇಡಿಕೆಯಲ್ಲಿದೆ.
ಹೊಸ ಕಾರು(New Cars) ಮಾದರಿಗಳಲ್ಲಿ ಇತ್ತೀಚೆಗೆ ಗ್ರಾಹಕರ ಬೇಡಿಕೆಯೆಂತೆ ಹಲವಾರು ವಿನೂತನ ಫೀಚರ್ಸ್ ಗಳನ್ನು ನೀಡಲಾಗುತ್ತಿದ್ದು, ಹೊಸ ಫೀಚರ್ಸ್ ಗಳಲ್ಲಿ 360 ಡಿಗ್ರಿ ಕ್ಯಾಮೆರಾ (360 Degree Camera) ಸೌಲಭ್ಯವು ಅತ್ಯುತ್ತಮ ಸೌಲಭ್ಯವಾಗಿದೆ. 360 ಡಿಗ್ರಿ ಕ್ಯಾಮೆರಾ ಸೌಲಭ್ಯವು ಹೊಸ ಕಾರುಗಳಲ್ಲಿ ಪ್ರೀಮಿಯಂ ಅನುಭವ ನೀಡುವುದರ ಜೊತೆಗೆ ಗರಿಷ್ಠ ಸುರಕ್ಷತೆ ನೀಡಲು ಸಹಕಾರಿಯಾಗಿವೆ.
360 ಡಿಗ್ರಿ ಕ್ಯಾಮೆರಾ ಸೌಲಭ್ಯವು ಪ್ರೀಮಿಯಂ ಡ್ರೈವ್ ಅನುಭವದ ಜೊತೆಗೆ ಹೆಚ್ಚಿನ ಸುರಕ್ಷತೆ ನೀಡಲು ಅನೂಕರವಾಗಿದ್ದು, ಇದು ಪ್ರಮುಖ ನಾಲ್ಕು ಕ್ಯಾಮೆರಾ ಸೌಲಭ್ಯಗಳೊಂದಿಗೆ ಕಾರಿನ ಸುತ್ತಲೂ ನೋಡಲು ಚಾಲಕನಿಗೆ ಅನುಕೂಲ ಮಾಡಿಕೊಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿರುವ ಡ್ರೈವರ್ ಡಿಸ್ ಪ್ಲೇ ನಲ್ಲಿ ಕ್ಯಾಮೆರಾ ಔಟ್ ಫುಟ್ ದೊರೆಯಲಿದ್ದು, ಇದು ಸ್ಪಷ್ಟ ನೋಟ ನೀಡುವುದರ ಮೂಲಕ ಕಾರನ್ನು ಯಾರ ಸಹಾಯವಿಲ್ಲದೆ ಸುರಕ್ಷಿತವಾಗಿ ಪಾರ್ಕ್ ಮಾಡಲು ಸಹಕಾರಿಯಾಗಿದೆ. ಹೀಗಾಗಿ ಇತ್ತೀಚೆಗೆ ಹಲವು ಹೊಸ ಕಾರುಗಳು ಈ ಫೀಚರ್ಸ್ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ
360 ಡಿಗ್ರಿ ಕ್ಯಾಮೆರಾ ಸೌಲಭ್ಯ ಹೊಂದಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಪ್ರಮುಖವಾಗಿದ್ದು, ಅಲ್ಫಾ ಪ್ಲಸ್ ನಂತರದ ವೆರಿಯೆಂಟ್ ಗಳಲ್ಲಿ ಹೊಸ ಫೀಚರ್ಸ್ ನೀಡಲಾಗುತ್ತಿದೆ. ಹೊಸ ಫೀಚರ್ಸ್ ಹೊಂದಿರುವ ಗ್ರ್ಯಾಂಡ್ ವಿಟಾರಾ ಎಕ್ಸ್ ಶೋರೂಂ ಪ್ರಕಾರ ರೂ. 15.41 ಲಕ್ಷದಿಂದ ರೂ. 19.79 ಲಕ್ಷ ಬೆಲೆ ಹೊಂದಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಗಳಿವೆ.
ಎಂಜಿ ಆಸ್ಟರ್
ಹೊಸ ಎಂಜಿ ಆಸ್ಟರ್ ಕಾರಿನಲ್ಲೂ ಸಹ 360 ಡಿಗ್ರಿ ಕ್ಯಾಮೆರಾ ಸೌಲಭ್ಯ ನೀಡಲಾಗುತ್ತಿದ್ದು, ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯಕ್ಕೆ ಇದು ಸಹಕಾರಿಯಾಗಿದೆ. ಹೊಸ ಫೀಚರ್ಸ್ ಅನ್ನು ಶಾರ್ಪ್ ಮತ್ತು ಸ್ಯಾವಿ ವೆರಿಯೆಂಟ್ ಗಳಲ್ಲಿ ನೀಡಲಾಗುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 15.15 ಲಕ್ಷದಿಂದ ರೂ. 18.89 ಲಕ್ಷ ಬೆಲೆ ಹೊಂದಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಗಳಿವೆ.
ಮಾರುತಿ ಸುಜುಕಿ ಬ್ರೆಝಾ
360 ಡಿಗ್ರಿ ಕ್ಯಾಮೆರಾ ಸೌಲಭ್ಯ ಹೊಂದಿರುವ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಬ್ರೆಝಾ ಅತ್ಯುತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಕಂಪನಿಯು ಜೆಡ್ಎಕ್ಸ್ ಐ ಪ್ಲಸ್ ನಂತರ ವೆರಿಯೆಂಟ್ ಗಳಲ್ಲಿ ಹೊಸ ಫೀಚರ್ಸ್ ಜೋಡಣೆ ಮಾಡುತ್ತಿದೆ. ಹೊಸ ಫೀಚರ್ಸ್ ಜೋಡಣೆ ಹೊಂದಿರುವ ಬ್ರೆಝಾ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 12.48 ಲಕ್ಷದಿಂದ ರೂ. 13.98 ಲಕ್ಷ ಬೆಲೆ ಹೊಂದಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳಿವೆ.
ಮಾರುತಿ ಸುಜುಕಿ ಫ್ರಾಂಕ್ಸ್
ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಇತ್ತೀಚೆಗೆ ಮಾರುತಿ ಸುಜುಕಿ ಕಾರುಗಳು ಗ್ರಾಹಕರ ಗಮನಸೆಳೆಯುತ್ತಿದ್ದು, ಫ್ರಾಂಕ್ಸ್ ಕಾರು ಕೂಡಾ 360 ಡಿಗ್ರಿ ಕ್ಯಾಮೆರಾ ಸೌಲಭ್ಯ ಹೊಂದಿದೆ. ಅಲ್ಫಾ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಹೊಸ ಫೀಚರ್ಸ್ ಜೋಡಣೆ ಮಾಡುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 11.48 ಲಕ್ಷದಿಂದ ರೂ. 12.98 ಲಕ್ಷ ಲಕ್ಷ ಬೆಲೆ ಹೊಂದಿದೆ.
ನಿಸ್ಸಾನ್ ಮ್ಯಾಗ್ನೈಟ್
360 ಡಿಗ್ರಿ ವ್ಯೂ ಕ್ಯಾಮೆರಾ ಹೊಂದಿರುವ ಬಜೆಟ್ ಕಾರುಗಳ ಪಟ್ಟಿಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಅಗ್ರಸ್ಥಾನದಲ್ಲಿದೆ. ಹೊಸ ಸುರಕ್ಷಾ ಸೌಲಭ್ಯವನ್ನು ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರಿನ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಜೋಡಣೆ ಮಾಡುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8.59 ಲಕ್ಷದಿಂದ ರೂ. 10.80 ಲಕ್ಷ ಬೆಲೆ ಹೊಂದಿವೆ.