ದುಬಾರಿ ಬೆಲೆಯ ಶಾಟ್‌ಗನ್ 650 ಬೈಕ್ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್
ರಾಯಲ್ ಎನ್‌ಫೀಲ್ಡ್ ಕಂಪನಿ ತನ್ನ ಹೊಸ ಫಾಕ್ಟರಿ ಕಸ್ಟಮ್ ಬಿಲ್ಡ್ ಶಾಟ್‌ಗನ್ 650 ಬೈಕ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಯು ಪವರ್ ಫುಲ್ ಎಂಜಿನ್ ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.
ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯು ಹೊಸ ಫಾಕ್ಟರಿ ಕಸ್ಟಮ್ ಬಿಲ್ಡ್ ಶಾಟ್‌ಗನ್ 650 (Shotgun 650) ಬೈಕ್ ಮಾದರಿಯನ್ನು 2023ರ ಮೊಟೊವೆರ್ಸ್ ಆಟೋ ಪ್ರದರ್ಶನದಲ್ಲಿ ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಯು ಪವರ್ ಫುಲ್ ಎಂಜಿನ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.
ಬಾಬರ್ ಸ್ಟೈಲ್ ಫೀಚರ್ಸ್ ಹೊಂದಿರುವ ಹೊಸ ಶಾಟ್‌ಗನ್ 650 ಬೈಕ್ ಮಾದರಿಯನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಕೇವಲ 25 ಯುನಿಟ್ ಮಾತ್ರ ಉತ್ಪಾದನೆ ಮಾಡಲಿದ್ದು, ಮೊಟೊವೆರ್ಸ್ ಆಟೋ ಪ್ರದರ್ಶನದಲ್ಲಿ ಭಾಗಿಯಾಗಿರುವ ಬೈಕ್ ಪ್ರಿಯರಿಗೆ ಲಕ್ಕಿ ಡ್ರಾ ಮೂಲಕ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: ಪವರ್‌ಫುಲ್ ಎಂಜಿನ್ ಪ್ರೇರಿತ ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಬಿಡುಗಡೆ
ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 4.25 ಲಕ್ಷ ಬೆಲೆ ಹೊಂದಿದ್ದು, ಇದು ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯಲ್ಲಿ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಹ್ಯಾಂಡ್ ಪೇಟಿಂಗ್ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿದೆ.
ಶಾಟ್‌ಗನ್ 650 ಬೈಕ್ ಮಾದರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮಿಟಿಯೋರ್ 650, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿರುವಂತೆ 647.95 ಸಿಸಿ ಆಯಿಲ್ ಕೂಲ್ಡ್ ಪ್ಯಾರಲೆಲ್-ಟ್ವಿನ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 47 ಹಾರ್ಸ್ ಪವರ್ ಮತ್ತು 52.3 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಹೊಸ ಬೈಕ್ ಮಾದರಿಗಾಗಿ ಸುಧಾರಿತ ಅಪ್‌ಸೈಡ್-ಡೌನ್ ಫ್ರಂಟ್ ಫೋರ್ಕ್ ಸಸ್ಷೆಂಷನ್ ಜೊತೆಗೆ ಟ್ವಿನ್ ಶಾರ್ಕ್ ರಿಯರ್ ಅಬ್ಸಾರ್ಬರ್ ಪಡೆದುಕೊಂಡಿದ್ದು, ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಜೊತೆಗೆ ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ಬೈಬ್ರೆ ಡಿಸ್ಕ್ ಬ್ರೇಕ್ ಸಿಸ್ಟಂ ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಹೆಡ್‌ಲೈಟ್ ಮತ್ತು ಅಪ್‌ಸ್ವೆಪ್ಡ್ ಡ್ಯುಯಲ್ ಎಕ್ಸಾಸ್ಟ್ ಸಿಸ್ಟಮ್ ಸಖತ್ ಸ್ಪೋರ್ಟಿಯಾಗಿದ್ದು, ದೊಡ್ಡದಾದ ಇಂಧನ ಟ್ಯಾಂಕ್ ಮತ್ತು ಸಿಂಗಲ್-ಸೀಟ್ ಸೆಟಪ್ ಪಡೆದುಕೊಂಡಿದೆ.
ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?
ಇನ್ನು ಹೊಸ ಬೈಕ್ ಮಾದರಿಯಲ್ಲಿ ಡ್ಯುಯಲ್ ಟೋನ್ ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಶಾಟ್‌ಗನ್ ಲೋಗೊವನ್ನು ನೀಡಲಾಗಿದ್ದು, ಟ್ರಿಪ್ಪರ್ ನ್ಯಾವಿಗೇಶನ್‌ನೊಂದಿಗೆ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಫಾರ್ವಡ್ ಸೆಟ್ ಫೂಟ್ ಪೆಗ್‌ಗಳು ಮತ್ತು ಉತ್ತಮ ಎತ್ತರ ಒಳಗೊಂಡಿರುವ ರೈಡರ್ ಎತ್ತರವನ್ನು ಹೊಂದಿದೆ.