Safest Cars: ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ಬೆಸ್ಟ್ ಕಾರುಗಳಿವು!

ಭಾರತದಲ್ಲಿ ಮಾರಾಟಗೊಳ್ಳುವ ಹೊಸ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇತ್ತೀಚೆಗೆ ಹಲವು ಹೊಸ ಕಾರು ಮಾದರಿಗಳು ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡಿವೆ.

Follow us
Praveen Sannamani
|

Updated on:Apr 06, 2023 | 8:13 PM

ಹೊಸ ಕಾರುಗಳಲ್ಲಿ ಗ್ರಾಹಕರು ಸುರಕ್ಷತೆಗೆ ಹೆಚ್ಚಿನ ಗಮನಹರಿಸುತ್ತಿರುವುದರಿಂದ ಕಾರು ಉತ್ಪಾದನಾ ಕಂಪನಿಗಳು ಗುಣಮಟ್ಟದ ಕಾರುಗಳ ಉತ್ಪಾದನೆಯತ್ತ ಗಮನಹರಿಸುತ್ತಿದ್ದು, ಈ ವರ್ಷ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡಿರುವ ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಈ ವರ್ಷ ಬಿಡುಗಡೆಯಾದ ಹಲವು ಹೊಸ ಕಾರುಗಳು ಉತ್ತಮ ರೇಟಿಂಗ್ಸ್ ಪಡೆದುಕೊಂಡಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸದ್ಯ ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಕಾರುಗಳತ್ತ ಗ್ರಾಹಕರು ಮುಖ ಮಾಡುತ್ತಿದ್ದು, ಇವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಭಾರತದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತಗಳಲ್ಲಿನ ಪ್ರಾಣಹಾನಿ ತಡೆಗೆ ಕೇಂದ್ರ ಸಾರಿಗೆ ಇಲಾಖೆಯು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದ್ದು, ಸುರಕ್ಷಾ ಫೀಚರ್ಸ್ ಗಳ ಗುಣಮಟ್ಟದ ಪರೀಕ್ಷಿಸಲು ಕ್ರ್ಯಾಶ್ ಟೆಸ್ಟಿಂಗ್ ಸಾಕಷ್ಟು ಅನುಕೂಲಕರವಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಕಾರುಗಳಲ್ಲಿ ಸುರಕ್ಷಾ ಸೌಲಭ್ಯಗಳನ್ನ ಸಾಕಷ್ಟು ಉನ್ನತೀಕರಿಸಲಾಗುತ್ತಿದ್ದು, 5 ಸ್ಟಾರ್ ರೇಟಿಂಗ್ಸ್ ಹೊಂದಿರುವ ಕಾರುಗಳನ್ನು ಅತ್ಯುತ್ತಮ ಕಾರು ಮಾದರಿಯಾಗಿ ಘೋಷಣೆ ಮಾಡಲಾಗುತ್ತದೆ.

ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಾರುಗಳು ಭಾರತದಲ್ಲಿ ಸದ್ಯ ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಕಾರುಗಳ ಪಟ್ಟಿಯಲ್ಲಿ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಾರುಗಳು ಅಗ್ರಸ್ಥಾನದಲ್ಲಿವೆ. ಟೈಗುನ್ ಮತ್ತು ಕುಶಾಕ್ ಕಾರುಗಳು 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ನಂತರ ಸ್ಲಾವಿಯಾ ಮತ್ತು ವರ್ಟಸ್ ಕಾರುಗಳು ಸಹ ಸುರಕ್ಷತೆಗಾಗಿ ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿವೆ. ಈ ಎರಡು ಕಾರು ಮಾದರಿಗಳು ಒಂದೇ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣಗೊಂಡಿದ್ದು, ಸುರಕ್ಷತೆಯಲ್ಲೂ ಗ್ರಾಹಕರನ್ನು ಸೆಳೆಯುತ್ತಿವೆ. ಈ ಮೂಲಕ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಅಪಘಾತಗಳಲ್ಲಿ ಇವು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನ ಖಾತ್ರಿಪಡಿಸುತ್ತವೆ.

VW Virtus, Skoda Slavia

ಇದನ್ನೂ ಓದಿ: ಬಜೆಟ್ ಬೆಲೆಯ ಬೆಸ್ಟ್ ಸಿಎನ್ ಜಿ ಕಾರುಗಳಿವು!

ಸ್ಲಾವಿಯಾ ಮತ್ತು ವರ್ಟಸ್ ಕಾರುಗಳಲ್ಲಿ ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ ನೀಡಲಾಗಿದೆ. ಇದರಲ್ಲಿ ಮಲ್ಟಿ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಗಳಿವೆ. ಇವು ವಯಸ್ಕ ಪ್ರಯಾಣಿಕರ ಜೊತೆಗೆ ಮಕ್ಕಳ ಸುರಕ್ಷತೆಗೂ ಹೆಚ್ಚಿನ ಅಂಕ ಪಡೆದುಕೊಂಡಿವೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ 2023ರಲ್ಲಿ ಅತ್ಯುತ್ತಮ ಸುರಕ್ಷಾ ಸೌಲಭ್ಯ ಹೊಂದಿರುವ ಪಟ್ಟಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಕೂಡಾ ಅಗ್ರಸ್ಥಾನದಲ್ಲಿದೆ. ಹೊಸ ಸ್ಕಾರ್ಪಿಯೋ ಎನ್ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಗ್ಲೋಬಲ್ NCAP ಪ್ರೋಟೋಕಾಲ್‌ ಅಡಿಯಲ್ಲಿ ನಡೆಸಲಾಗುತ್ತಿರುವ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಮಾನದಂಡಗಳನ್ನು ಇದೀಗ ಸಾಕಷ್ಟು ಬದಲಾವಣೆಗೊಂಡಿವೆ. ಹೊಸ ನಿಯಮದಡಿಯಲ್ಲಿಯೇ ಸ್ಕಾರ್ಪಿಯೋ ಎನ್ ಮಾದರಿಯು ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿದೆ.

Mahinda scorpio N

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಮಾರುತಿ ವ್ಯಾಗನ್ಆರ್ ಮತ್ತು ಆಲ್ಟೊ ಕೆ10

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ ನೀಡಿದೆ.

ಇನ್ನು ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಕಾರುಗಳಲ್ಲಿ ಮಹೀಂದ್ರಾ ಎಕ್ಸ್ ಯುವಿ ಸೆವೆನ್ ಡಬಲ್ ಒ, ಎಕ್ಸ್ ಯುವಿ ತ್ರಿ ಡಬಲ್ ಒ ಕೂಡಾ ಪ್ರಮುಖವಾಗಿವೆ. ತದನಂತರದಲ್ಲಿ ಟಾಟಾ ಪಂಚ್, ಟಾಟಾ ನೆಕ್ಸಾನ್ ಮತ್ತು ಟಾಟಾ ಆಲ್ಟ್ರೊಜ್ ಕಾರುಗಳು ಕೂಡಾ ಉತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿದ್ದು, ಇವು ಅಪಘಾತದ ಸಂದರ್ಭದಲ್ಲಿ ಸಂಭಾವ್ಯ ಪ್ರಾಣಹಾನಿಯನ್ನ ತಪ್ಪಿಸುವಲ್ಲಿ ಸಾಕಷ್ಟು ನೆರವಾಗುತ್ತಿವೆ.

Published On - 6:29 pm, Thu, 6 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ