
ಭಾರತದಲ್ಲಿ ಸ್ಕೂಟರ್ ಮಾರಾಟದ(Scooter Sales) ಟ್ರೆಂಡ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಪ್ರೀಮಿಯಂ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮ್ಯಾಕ್ಸಿ ಸ್ಕೂಟರ್ ವಿಭಾಗದಲ್ಲಿ ಸುಜುಕಿ ಬರ್ಗಮನ್ ಸ್ಟ್ರೀಟ್(Suzuki Burgman Street) ಹೊಸ ಸಂಚಲನ ಮೂಡಿಸಿದೆ. ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಗೊಂಡ ನಂತರ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಹೊಸ ಸ್ಕೂಟರಿನಲ್ಲಿ ಇದೀಗ ಇಎಕ್ಸ್ ವೆರಿಯೆಂಟ್(EX Variant) ಬಿಡುಗಡೆ ಮಾಡಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಬರ್ಗಮನ್ ಸ್ಟ್ರೀಟ್ ಹೊಸ ಇಎಕ್ಸ್ ವೆರಿಯೆಂಟ್ ಟಾಪ್ ಎಂಡ್ ಮಾದರಿಯಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1 ಲಕ್ಷ 12 ಸಾವಿರದ ಮನ್ನೂರು ಬೆಲೆ ಹೊಂದಿದೆ. ಇಎಕ್ಸ್ ವೆರಿಯೆಂಟ್ ಸಾಮಾನ್ಯ ಮಾದರಿಗಿಂತ ಹೆಚ್ಚಿನ ಫೀಚರ್ಸ್ ಮತ್ತು ಪರ್ಫಾಮೆನ್ಸ್ ಹೊಂದಿರಲಿದೆ. ಹೊಸ ಸ್ಕೂಟರ್ ನಲ್ಲಿ ಸುಜುಕಿ ಕಂಪನಿಯು 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಿದ್ದು, ಇದು ಇಕೋ ಪರ್ಫಾಮೆನ್ಸ್ ಆಲ್ಫಾ ತಂತ್ರಜ್ಞಾನ ಹೊಂದಿದೆ. ಈ ಮೂಲಕ ಇದು 8.5 ಹಾರ್ಸ್ ಪವರ್ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸುತ್ತಿದೆ. ಇದರೊಂದಿಗೆ ಇದು ಉತ್ತಮ ಪರ್ಫಾಮೆನ್ಸ್ ಜೊತೆಗೆ ಈ ವಿಭಾಗದಲ್ಲಿಯೇ ಗರಿಷ್ಠ ಮೈಲೇಜ್ ಅನ್ನು ನೀಡಲು ಸಹಕಾರಿಯಾಗಿದೆ.
ಬರ್ಗಮನ್ ಸ್ಟ್ರೀಟ್ ಇಎಕ್ಸ್ ಸ್ಕೂಟರಿನ ಎಂಜಿನ್ ನಲ್ಲಿ ಸುಜುಕಿ ಕಂಪನಿಯು ಆಟೋ ಸ್ಟಾರ್ಟ್ ಮತ್ತು ಸ್ಟಾಪ್ ಸೌಲಭ್ಯ ನೀಡಿದೆ. ಇದು ಮಿತಿವ್ಯಯ ಇಂಧನ ಬಳಕೆ ಜೊತೆಗೆ ಮಾಲಿನ್ಯ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಹೊಸ ಸ್ಕೂಟರ್ ನಲ್ಲಿ ಸೈಲೆಂಟ್ ಸ್ಟಾರ್ಟರ್ ಸಿಸ್ಟಂ ಜೋಡಣೆ ಪಡೆದುಕೊಂಡಿದೆ. ಇದು ಟ್ರಾಫಿಕ್‌ನಲ್ಲಿ ನಿಂತಾಗ ಕೆಲವು ಸೆಕೆಂಡುಗಳ ನಂತರ ಎಂಜಿನ್ ನಿಷ್ಕೀಯವಾಗುತ್ತದೆ. ನಂತರ ರೈಡರ್ ಥ್ರೊಟಲ್ಸ್ ಮಾಡಿದಾಗಲೇ ಆಟೋ ಸ್ಟಾರ್ಟ್ ಆಗಿ ಮರು ಪ್ರಾರಂಭಗೊಳ್ಳುತ್ತದೆ.
ಹೊಸ ಫೀಚರ್ಸ್
ಇದರ ಜೊತೆಗೆ ಹೊಸ ಇಎಕ್ಸ್ ವೆರಿಯೆಂಟ್ ಮತ್ತು ಸಾಮಾನ್ಯ ವೆರಿಯೆಂಟ್ ಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಟಾಪ್ ವೆರಿಯೆಂಟ್ ನಲ್ಲಿ ದೊಡ್ಡದಾದ 12-ಇಂಚಿನ ವ್ಹೀಲ್ ನೀಡಲಾಗಿದ್ದು, ಜೊತೆಗೆ ಅಗಲವಾದ ಟೈರ್ ನೀಡಲಾಗಿದೆ. ಇಷ್ಟೇ ಅಲ್ಲದೆ ಹೊಸ ಸ್ಕೂಟರಿನಲ್ಲಿ ರೈಡ್ ಕನೆಕ್ಟ್ ಸಿಸ್ಟಮ್ ಜೋಡಿಸಲಾಗಿದೆ. ಇದು ಬ್ಲೂಟೂತ್ ಸಕ್ರಿಯಗೊಂಡಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿರಲಿದ್ದು, ಇದರಲ್ಲಿ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಇನ್ ಕಾಮಿಂಗ್ ಕಾಲ್, ಎಸ್ಎಂಎಸ್ ಮತ್ತು ವಾಟ್ಸ್ ಅಪ್ ಅಲರ್ಟ್, ಮಿಸ್ಡ್ ಕಾಲ್ ಮತ್ತು ಎಸ್ಎಂಎಸ್ ಅಲರ್ಟ್ ನೀಡುತ್ತದೆ. ಹಾಗೆಯೇ ಸುರಕ್ಷತೆಗಾಗಿ ಅತಿ ವೇಗದಲ್ಲಿರುವಾದ ಅಲರ್ಟ್ ಮಾಡುವುದರ ಜೊತೆಗೆ ಫೋನ್ ಚಾರ್ಜ್ ಮಟ್ಟದ ಕುರಿತು ಮಾಹಿತಿ ಒದಗಿಸುತ್ತದೆ.
Published On - 7:37 pm, Sat, 10 December 22