AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Altroz iCNG: ಆಲ್ಟ್ರೊಜ್ ಸಿಎನ್ ಜಿ ಬುಕಿಂಗ್ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಆಲ್ಟ್ರೋಜ್ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಖರೀದಿಗಾಗಿ ಬುಕಿಂಗ್ ಆರಂಭಿಸಿದೆ.

Praveen Sannamani
|

Updated on:Apr 20, 2023 | 8:12 PM

Share

ಭಾರತದಲ್ಲಿ ಇವಿ ಕಾರುಗಳ ಜೊತೆಗೆ ಸಿಎನ್ ಜಿ ಕಾರುಗಳ(CNG Cars) ಅಬ್ಬರವು ಕೂಡಾ ಹೆಚ್ಚುತ್ತಿದೆ. ಸಿಎನ್ ಜಿ ಕಾರುಗಳ ಉತ್ಪಾದನೆಯಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿ ಇದೀಗ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಿಯಲ್ ಎಮಿಷನ್ ಪರಿಣಾಮ ಕಾರು ಉತ್ಪಾದನಾ ಕಂಪನಿಗಳು ಪರಿಸರ ಸ್ನೇಹಿ ಕಾರು ಮಾದರಿಗಳತ್ತ ಮುಖ ಮಾಡುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಕಾರಗಳಿಗೆ ಪರ್ಯಾಯವಾಗಿ ಸಿಎನ್ ಜಿ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಇಂಧನ ದಕ್ಷತೆ ಕಾರಣಕ್ಕೆ ಸಿಎನ್ ಜಿ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಟಾಟಾ ಮೋಟಾರ್ಸ್ ಕಂಪನಿ ಮತ್ತಷ್ಟು ಹೊಸ ಸಿಎನ್ ಜಿ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಟಿಗೋರ್ ಮತ್ತು ಟಿಯಾಗೋ ಸಿಎನ್​ಜಿ ವರ್ಷನ್ ಮಾರಾಟ ಮಾಡುತ್ತಿರುವ ಟಾಟಾ ಕಂಪನಿ ಮುಂಬರುವ ಕೆಲವೇ ದಿನಗಳಲ್ಲಿ ಆಲ್ಟ್ರೊಜ್ ಸಿಎನ್​ಜಿ(Altroz CNG) ವರ್ಷನ್ ಬಿಡುಗಡೆ ಮಾಡುತ್ತಿದೆ. ಹೊಸ ಕಾರು ಸುಧಾರಿತ ಐ ಸಿಎನ್ ಜಿ ತಂತ್ರಜ್ಞಾನ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಖರೀದಿಗೆ ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದೆ.

ಇದನ್ನೂ ಓದಿ: ಹೊಸ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾದ ಸಿಟ್ರನ್ ಇಂಡಿಯಾ

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಸಿಎನ್ ಜಿ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಡೀಸೆಲ್ ಕಾರುಗಳಿಗೆ ಇವು ಭರ್ಜರಿ ಪೈಪೋಟಿ ನೀಡುತ್ತಿವೆ. ಹೀಗಾಗಿ ಶೀಘ್ರದಲ್ಲಿಯೇ ಹಲವು ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರುಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುತ್ತಿವೆ. ಐ-ಸಿಎನ್​ಜಿ ತಂತ್ರಜ್ಞಾನದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಸಹ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಇದೀಗ ಆಲ್ಟ್ರೋಜ್ ಸಿಎನ್ ಜಿ ರಸ್ತೆಗಿಳಿಸುತ್ತಿದೆ. ಜೊತೆಗೆ ಕಂಪನಿಯು ಪಂಚ್ ಕಾರಿನಲ್ಲೂ ಕೂಡಾ ಸಿಎನ್ ಜಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿರುವ ಆಲ್ಟ್ರೊಜ್ ಸಿಎನ್ ಜಿ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್​ಜಿ ಕಿಟ್ ಜೋಡಿಸಲಾಗಿದೆ. ಈ ಬಾರಿ ಸಿಎನ್ ಜಿ ಕಾರುಗಳಲ್ಲಿ ಟಾಟಾ ಕಂಪನಿಯು ಹೊಸದಾಗಿ ಟ್ವಿನ್ ಸಿಲಿಂಡರ್ ಟ್ಯಾಂಕ್ ಅಭಿವೃದ್ದಿಪಡಿಸಿದ್ದು, ಹೊಸ ವಿನ್ಯಾಸದಿಂದಾಗಿ ಬೂಟ್ ಸ್ಪೆಸ್ ಹೆಚ್ಚಳವಾಗಲಿದೆ. ಸಾಮಾನ್ಯವಾಗಿ ಸಿಎನ್‌ ಜಿ ಕಾರುಗಳಲ್ಲಿ ಬೂಟ್ ಸ್ಪೆಸ್ ಕಡಿಮೆ ಎನ್ನುವ ಹಲವು ಗ್ರಾಹಕರು ಅಸಮಾಧಾನ ಹೊಂದಿದ್ದರು. ಆದರೆ ಟಾಟಾ ಕಂಪನಿಯು ಟ್ವಿನ್ ಸಿಲಿಂಡರ್ ಟ್ಯಾಂಕ್ ಪರಿಚಯಿಸುವ ಮೂಲಕ ಗ್ರಾಹಕರನ್ನ ಸೆಳೆಯುತ್ತಿದ್ದು, ಟ್ವಿನ್ ಸಿಲಿಂಡರ್ ಟ್ಯಾಂಕ್ ನಿಂದಾಗಿ ಹೆಚ್ಚಿನ ಮಟ್ಟದ ಲಗೇಜ್ ಸ್ಪೆಸ್ ಸಿಗಲಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ

ಇನ್ನು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್​ಜಿ ಕಿಟ್ ಹೊಂದಿರುವ ಟಾಟಾ ಹೊಸ ಕಾರುಗಳು ಪ್ರತಿ ಕೆಜಿ ಸಿಎನ್ ಜಿ ಗೆ 26 ರಿಂದ 28 ಕಿ.ಮೀ ಮೈಲೇಜ್ ನೀಡಲಿವೆ. ಜೊತೆಗೆ ಹೊಸ ಕಾರುಗಳು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, 73.5 ಹಾರ್ಸ್ ಪವರ್ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ. ಆದರೆ ಹೊಸ ಕಾರುಗಳು ಪೆಟ್ರೋಲ್ ಮಾದರಿಗಿಂತ ರೂ. 70 ಸಾವಿರದಿಂದ ರೂ. 90 ಸಾವಿರದಷ್ಟು ದುಬಾರಿಯಾಗಿರಲಿದ್ದು, ಇವು ಮಾರುತಿ ಸುಜುಕಿ ಸಿಎನ್​ಜಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿವೆ. ಇದರೊಂದಿಗೆ ಹೊಸ ಸಿಎನ್ ಜಿ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಸಿಎನ್ ಜಿ ಆವೃತ್ತಿಯು ಈ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

Published On - 8:11 pm, Thu, 20 April 23