Tata Motors: ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಕಾರುಗಳ ಖರೀದಿಯ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೋ ಮತ್ತು ಟಿಯಾಗೋ ಕಾರುಗಳ ಖರೀದಿಯ ಮೇಲೆ ಆಫರ್ ನೀಡಲಾಗುತ್ತಿದೆ.

Tata Motors: ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ
ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

Updated on: Mar 07, 2023 | 1:58 PM

ಹೊಸ ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ನಲ್ಲಿ ಕಂಪನಿಯು ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೋ ಮತ್ತು ಟಿಯಾಗೋ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 65 ಸಾವಿರ ತನಕ ಆಫರ್ ನೀಡುತ್ತಿದೆ.

ಸಫಾರಿ ಎಸ್ ಯುವಿ

ಹೈ ಎಂಡ್ ಕಾರು ಮಾದರಿಯಾಗಿರುವ ಸಫಾರಿ ಮಾದರಿಯ ಮೇಲೆ ಟಾಟಾ ಮೋಟಾರ್ಸ್ ಕಂಪನಿಯು ಗರಿಷ್ಠ ರೂ. 65 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ 2022ರ ಮಾದರಿಯ ಮೇಲೆ ಮಾತ್ರ ಅನ್ವಯಿಸುತ್ತದೆ. 2023ರ ಸಫಾರಿ ಮಾದರಿಯನ್ನ ಖರೀದಿಸುವುದಾದರೆ ರೂ. 35 ಸಾವಿರ ಆಫರ್ ಲಭ್ಯವಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಹ್ಯಾರಿಯರ್ ಎಸ್ ಯುವಿ

ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಖರೀದಿಯ ಮೇಲೆ ಗರಿಷ್ಠ ರೂ. 65 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ 2022ರ ಮಾದರಿಯ ಮೇಲೆ ಮಾತ್ರ ಅನ್ವಯಿಸುತ್ತದೆ. 2023ರ ಹ್ಯಾರಿಯರ್ ಮಾದರಿಯನ್ನ ಖರೀದಿಸುವುದಾದರೆ ರೂ. 35 ಸಾವಿರ ಆಫರ್ ಲಭ್ಯವಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಟಿಗೋರ್ ಕಂಪ್ಯಾಕ್ಟ್ ಸೆಡಾನ್

ಟಾಟಾ ಮೋಟಾರ್ಸ್ ಕಂಪನಿಯು ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಖರೀದಿಯ ಮೇಲೆ ಗರಿಷ್ಠ ರೂ. 45 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ 2022ರ ಮಾದರಿಯ ಮೇಲೆ ಮಾತ್ರ ಅನ್ವಯಿಸುತ್ತದೆ. 2023ರ ಹ್ಯಾರಿಯರ್ ಮಾದರಿಯನ್ನ ಖರೀದಿಸುವುದಾದರೆ ರೂ. 30 ಸಾವಿರ ಆಫರ್ ಲಭ್ಯವಿದ್ದು, ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಟಿಯಾಗೋ ಹ್ಯಾಚ್ ಬ್ಯಾಕ್

ಟಿಯಾಗೋ ಹ್ಯಾಚ್ ಬ್ಯಾಕ್ ಖರೀದಿಯ ಮೇಲೆ ಗರಿಷ್ಠ ರೂ. 40 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ 2022ರ ಮಾದರಿಯ ಮೇಲೆ ಮಾತ್ರ ಅನ್ವಯಿಸುತ್ತದೆ. 2023ರ ಟಿಯಾಗೋ ಮಾದರಿಯನ್ನ ಖರೀದಿಸುವುದಾದರೆ ರೂ. 25 ಸಾವಿರ ಆಫರ್ ಲಭ್ಯವಿದ್ದು, ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಆಲ್ಟ್ರೊಜ್ ಹ್ಯಾಚ್ ಬ್ಯಾಕ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾದರಿಯಾದ ಆಲ್ಟ್ರೊಜ್ ಹ್ಯಾಚ್ ಬ್ಯಾಕ್ ಖರೀದಿಯ ಮೇಲೆ ಗರಿಷ್ಠ ರೂ. 35 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ 2022ರ ಮಾದರಿಯ ಮೇಲೆ ಮಾತ್ರ ಅನ್ವಯಿಸುತ್ತದೆ. 2023ರ ಆಲ್ಟ್ರೊಜ್ ಮಾದರಿಯನ್ನ ಖರೀದಿಸುವುದಾದರೆ ರೂ. 25 ಸಾವಿರ ಆಫರ್ ಲಭ್ಯವಿದ್ದು, ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ.