ಭಾರತದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್(Tata Motors) ತನ್ನ ಬಹುನೀರಿಕ್ಷಿತ ಕರ್ವ್ ಕಾನ್ಸೆಪ್ಟ್(Curvv Concept) ಆವೃತ್ತಿಯನ್ನು ಬಿಡುಗಡೆ ಮಾಡಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹೊಸ ಕಾರು ಮಾದರಿಯು ಕೂಪೆ ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳು ನೀರಿಕ್ಷೆಯಲ್ಲಿದೆ.
ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ 5 ವರ್ಷಗಳಲ್ಲಿ 5 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಕಾರುಗಳ ಜೊತೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಬಿಡುಗಡೆಯಾಗಲಿವೆ.
ಟಾಟಾ ಹೊಸ ಕಾರುಗಳಲ್ಲಿ ಕರ್ವ್ ಕಾನ್ಸೆಪ್ಟ್ ಕೂಡಾ ಒಂದಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವಲ್ಲದೆ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ. 2023ರ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕರ್ವ್ ಕಾನ್ಸೆಪ್ಟ್ ಕಾರು ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ
2024ರ ಆರಂಭದಲ್ಲಿ ಕರ್ವ್ ಎಲೆಕ್ಟ್ರಿಕ್ ಆವೃತ್ತಿ ಬಿಡುಗಡೆಯಾಗಲಿದ್ದರೆ ಮುಂದಿನ ಕೆಲವೇ ತಿಂಗಳಿನಲ್ಲಿ ಪೆಟ್ರೋಲ್ ಆವೃತ್ತಿಯು ಸಹ ಬಿಡುಗಡೆಯಾಗಿದೆ. ಸದ್ಯ ರೋಡ್ ಟೆಸ್ಟಿಂಗ್ ನಲ್ಲಿ ಕಾಣಿಸಿಕೊಂಡಿರುವ ಕರ್ವ್ ಕಾರು ಮಾದರಿಯು ಕಾನ್ಸೆಪ್ಟ್ ಆವೃತ್ತಿಗಿಂತಲೂ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಇದು ಕೂಪೆ ಎಸ್ ಯುವಿ ವೈಶಿಷ್ಟ್ಯತೆಗಳೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಹೊಸ ಕರ್ವ್ ಕಾನ್ಸಪ್ಟ್ ಕಾರು ಮಾದರಿಯು ನೆಕ್ಸಾನ್ ಕಾರು ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಬಲಿಶಾಲಿಯಾದ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಸಾಮಾನ್ಯ ಆವೃತ್ತಿಯೊಂದಿಗೆ ಟರ್ಬೊ ಆವೃತ್ತಿಯನ್ನು ಸಹ ಪಡೆದುಕೊಳ್ಳಲಿದೆ. ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕರ್ವ್ ಮಾದರಿಗಾಗಿಯೇ ಹೊಚ್ಚ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಬಹುದಾಗಿದ್ದು, ಇದು ಸಾಮಾನ್ಯ ಆವೃತ್ತಿಯೊಂದಿಗೆ 115 ಹಾರ್ಸ್ ಪವರ್ ಮತ್ತು ಟರ್ಬೊ ಆವೃತ್ತಿಯೊಂದಿಗೆ 140 ಹಾರ್ಸ್ ಪವರ್ ಉತ್ಪಾದನೆ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.
ಕರ್ವ್ ಕಾನ್ಸಪ್ಟ್ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಆಯ್ಕೆಯನ್ನು ಸಹ ನೀಡಬಹುದಾಗಿದ್ದು, ಹೊಸ ಕಾರಿನಲ್ಲಿ ನೀಡುವ ಬಲಿಷ್ಠ ಪೆಟ್ರೋಲ್ ಎಂಜಿನ್ ಆಯ್ಕೆ ಮುಂಬರುವ ದಿನಗಳಲ್ಲಿ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲೂ ಪರಿಚಯಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ
ಇನ್ನು ಎರಡನೇ ತಲೆಮಾರಿನ ಕಾರು ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗುತ್ತಿರುವ ಕರ್ವ್ ಕಾನ್ಸಪ್ಟ್ ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ವಿಭಾಗದಲ್ಲಿಯೇ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ಇದರಲ್ಲಿ ಬಲಿಷ್ಠ ವಿನ್ಯಾಸದ ಆಲ್ ಎಲ್ಇಡಿ ಹೆಡ್ ಲ್ಯಾಂಪ್ಸ್ ಮತ್ತು ಡಿಆರ್ ಎಲ್ ಗಳು, ಸ್ಕ್ವೇರ್ಡ್ ಆಫ್ ವ್ಹೀಲ್ ಅರ್ಚ್ ಸೇರಿದಂತೆ ಸ್ಪೋರ್ಟಿಯಾಗಿರುವ ರಿಯರ್ ಬಂಪರ್ ಹೊಂದಿದೆ.
ಹಾಗೆಯೇ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಗಳಾದ ಫ್ಲಶ್ ಡೋರ್ ಗಳು, ಆಟೋ ಪಾರ್ಕ್ ಅಸಿಸ್ಟ್ ಸೌಲಭ್ಯಕ್ಕಾಗಿ 360 ಡಿಗ್ರಿ ಕ್ಯಾಮೆರಾ, ಹೈ ಎಂಡ್ ಮಾದರಿಗಾಗಿ 6 ಏರ್ ಬ್ಯಾಗ್ ಗಳು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ 10.2 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಪ್ಲೋಟಿಂಗ್ ಸೆಂಟರ್ ಕನ್ಸೊಲ್, ಸೆಂಟರ್ ಆರ್ಮ್ ರೆಸ್ಟ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಟಾಟಾ ಮೋಟಾರ್ಸ್ ಮತ್ತಷ್ಟು ಬೇಡಿಕೆ ತಂದುಕೊಡಲಿದೆ.