
ಬೆಂಗಳೂರು (ಅ. 15): ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಕಡಿತದಿಂದಾಗಿ ವಾಹನಗಳ ಬೆಲೆಗಳಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇದರಿಂದ ಕಾರು ಮಾರಾಟವನ್ನು ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆ ನಿರೀಕ್ಷೆ ನಿಜವಾಗಿದೆ. ಟಾಟಾದ (TATA SUV) ಎಸ್‌ಯುವಿ, ನೆಕ್ಸಾನ್ ಇದರಿಂದ ಗಮನಾರ್ಹವಾಗಿ ಲಾಭ ಗಳಿಸಿದೆ. ಬೆಲೆ ಕಡಿತದ ತಕ್ಷಣ, ಸೆಪ್ಟೆಂಬರ್‌ನಲ್ಲಿ ಈ ವಾಹನದ ಬೇಡಿಕೆ ಗಗನಕ್ಕೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಾಹನದ ಮಾರಾಟವು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಟಾಟಾ ನೆಕ್ಸಾನ್‌ನ ಲುಕ್ ಮತ್ತು ಡಿಸೈನ್ ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲದೆ ಈ ವಿಭಾಗದಲ್ಲಿ ಇತರ ವಾಹನಗಳಿಗಿಂತ ಈ ಕಾರು ಶ್ರೇಷ್ಠ ಎನಿಸಿದೆ. ಬೆಲೆ ಕಡಿತವು ಇದನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಿದ್ದು, ಗ್ರಾಹಕರು ಖರೀದಿಸಲು ಮುಗಿಬೀಳುತ್ತಿದ್ದಾರೆ.
ದತ್ತಾಂಶದ ಪ್ರಕಾರ, ಟಾಟಾ ನೆಕ್ಸಾನ್ ಸೆಪ್ಟೆಂಬರ್ 2025 ರಲ್ಲಿ ಒಟ್ಟು 22,573 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಹಿಂದಿನ ವರ್ಷಕ್ಕಿಂತ ಶೇ. 97 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2024 ರಲ್ಲಿ, ಈ ಕಾರು 11,470 ಗ್ರಾಹಕರನ್ನು ಹೊಂದಿತ್ತು. ಪರಿಣಾಮವಾಗಿ, ಈ ವರ್ಷ ಅದರ ಮಾರಾಟವು ದ್ವಿಗುಣಗೊಂಡಿದೆ. ಈ ಭರ್ಜರಿ ಮಾರಾಟದೊಂದಿಗೆ, ಕಾರು ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾರಾಟವಾದ SUV ಆಗಿ ಮಾರ್ಪಟ್ಟಿದೆ, ಕ್ರೆಟಾ ಮತ್ತು ಸ್ಕಾರ್ಪಿಯೊದಂತಹ ಕಾರುಗಳನ್ನು ಮೀರಿಸಿದೆ. ಇದು ಟಾಟಾದ ಅತ್ಯುತ್ತಮ ಮಾರಾಟವಾದ ಕಾರು ಕೂಡ ಆಗಿದೆ.
ಟಾಟಾ ನೆಕ್ಸಾನ್ ಮಾರಾಟದಲ್ಲಿ ಹೆಚ್ಚಳಕ್ಕೆ ದೊಡ್ಡ ಕಾರಣವೆಂದರೆ ಜಿಎಸ್‌ಟಿ ಇಳಿಕೆಯಿಂದಾಗಿ ಕಡಿಮೆ ಬೆಲೆ ಎಂದು ನಂಬಲಾಗಿದೆ. ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ಜಿಎಸ್‌ಟಿ ದರಗಳನ್ನು ಅನುಮೋದಿಸಿತು, ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತು. ಜಿಎಸ್‌ಟಿ ಇಳಿಕೆಯ ಲಾಭವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸಲು ಟಾಟಾ ಕಂಪನಿಯು ತನ್ನ ವಾಹನಗಳ ಬೆಲೆಗಳನ್ನು ಕಡಿಮೆ ಮಾಡಿತು. ಜಿಎಸ್‌ಟಿ ಇಳಿಕೆಯಿಂದಾಗಿ, ನೆಕ್ಸಾನ್‌ನ ಬೆಲೆ 1.55 ಲಕ್ಷ ರೂ. ಗಳಷ್ಟು ಕಡಿಮೆಯಾಯಿತು. ಇದರಿಂದಾಗಿ, ಈ ಎಸ್‌ಯುವಿ ಹೆಚ್ಚು ಕೈಗೆಟುಕುವಂತಾಗಿದೆ. ಕಡಿಮೆ ಬೆಲೆಯ ಲಾಭವನ್ನು ಪಡೆದುಕೊಂಡು, ಗ್ರಾಹಕರು ಶೋ ರೂಂಗೆ ಹೋಗಿ ಈ ವಾಹನವನ್ನು ಖರೀದಿಸುತ್ತಿದ್ದಾರೆ.
Maruti Suzuki: ತಗ್ಗಿದ ಮಾರುತಿ ಕಾರುಗಳ ಬೇಡಿಕೆ: ಈ ಕಾರನ್ನು ಒಬ್ಬನೇ ಒಬ್ಬ ಖರೀದಿಸಿಲ್ಲ
ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಟಾಟಾ ನೆಕ್ಸಾನ್ ಮೊದಲ ಸ್ಥಾನದಲ್ಲಿದೆ, ಇದರ ಮಾರಾಟದ ಬಗ್ಗೆ ಈಗಾಗಲೇ ಹೇಳಿದ್ದೇವೆ. ಹುಂಡೈ ಕ್ರೆಟಾ ಸೆಪ್ಟೆಂಬರ್ 2025 ರಲ್ಲಿ 18,861 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದರ ಮಾರಾಟವು ಶೇ. 19 ರಷ್ಟು ಹೆಚ್ಚಾಗಿದೆ. ಮಹೀಂದ್ರಾ ಸ್ಕಾರ್ಪಿಯೊ ಶೇ. 27 ರಷ್ಟು ಬೆಳವಣಿಗೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಸೆಪ್ಟೆಂಬರ್‌ನಲ್ಲಿ ಇದರ ಒಟ್ಟು 18,372 ಯುನಿಟ್‌ಗಳು ಮಾರಾಟವಾಗಿವೆ. ಟಾಟಾ ಪಂಚ್ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಅದರ ಮಾರಾಟವು ಶೇ. 16 ರಷ್ಟು ಹೆಚ್ಚಾಗಿ 15,891 ತಲುಪಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಐದನೇ ಸ್ಥಾನದಲ್ಲಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಅದರ 13,767 ಯುನಿಟ್‌ಗಳು ಮಾರಾಟವಾಗಿವೆ. ಆದಾಗ್ಯೂ, ಇದರ ಮಾರಾಟವು ಶೇ. 1 ರಷ್ಟು ಕಡಿಮೆಯಾಗಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Wed, 15 October 25