SUV Sale: ಭಾರತೀಯರಲ್ಲಿ ಹೆಚ್ಚುತ್ತಿದೆ SUV ಕ್ರೇಜ್: ನವರಾತ್ರಿ ಸಮಯದಲ್ಲಿ ವಾಹನ ಮಾರಾಟವು ಶೇ. 60 ರಷ್ಟು ಹೆಚ್ಚಳ
ಈ ವರ್ಷದ ನವರಾತ್ರಿಯ ಸಮಯದಲ್ಲಿ ತನ್ನ ಎಸ್‌ಯುವಿಗಳ ಚಿಲ್ಲರೆ ಮಾರಾಟದಲ್ಲಿ ಶೇಕಡಾ 60 ರಷ್ಟು ಹೆಚ್ಚಳವನ್ನು ವರದಿ ಮಾಡಿದೆ. ಜಿಎಸ್‌ಟಿ ಕಡಿತದ ನಂತರ ವಾಹನಗಳ ಬೆಲೆಗಳಲ್ಲಿನ ಇಳಿಕೆಯೇ ಎಸ್‌ಯುವಿ ಮಾರಾಟದಲ್ಲಿನ ಈ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಿದೆ ಎಂಬುದನ್ನು ಗಮನಿಸಬೇಕು.

ಬೆಂಗಳೂರು (ಅ. 08): ದೇಶದಲ್ಲಿ ಎಸ್‌ಯುವಿಗಳ ಮೇಲಿನ ಕ್ರೇಜ್ ನಿರಂತರವಾಗಿ ಹೆಚ್ಚುತ್ತಿದೆ. ಜನರು ಈಗ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳಿಗಿಂತ ಎಸ್‌ಯುವಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಗಮನಾರ್ಹವಾಗಿ, ಎಸ್‌ಯುವಿ ಮಾರಾಟವು ಈಗ ಪ್ರಮುಖ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ವೇಗವಾಗಿ ಹೆಚ್ಚುತ್ತಿದೆ. ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿ ಮಹೀಂದ್ರಾ ಮತ್ತು ಮಹೀಂದ್ರಾ (Mahindra and Mahindra), ಈ ವರ್ಷದ ನವರಾತ್ರಿಯ ಸಮಯದಲ್ಲಿ ತನ್ನ ಎಸ್‌ಯುವಿಗಳ ಚಿಲ್ಲರೆ ಮಾರಾಟದಲ್ಲಿ ಶೇಕಡಾ 60 ರಷ್ಟು ಹೆಚ್ಚಳವನ್ನು ವರದಿ ಮಾಡಿದೆ.
ಜಿಎಸ್‌ಟಿ ಕಡಿತದ ನಂತರ ವಾಹನಗಳ ಬೆಲೆಗಳಲ್ಲಿನ ಇಳಿಕೆಯೇ ಎಸ್‌ಯುವಿ ಮಾರಾಟದಲ್ಲಿನ ಈ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಿದೆ ಎಂಬುದನ್ನು ಗಮನಿಸಬೇಕು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟವು ಭರ್ಜರಿ ಹೆಚ್ಚಳ
ಮಹೀಂದ್ರಾ ಮತ್ತು ಮಹೀಂದ್ರಾದ ಆಟೋಮೋಟಿವ್ ವಿಭಾಗದ ಸಿಇಒ ನಳಿನಿಕಾಂತ್ ಗೊಲ್ಲಗುಂಟ ಪಿಟಿಐಗೆ ತಿಳಿಸಿದ್ದು, ಗ್ರಾಮೀಣ ಮಾರುಕಟ್ಟೆಯೂ ಉತ್ತಮ ಮಾರಾಟ ಕಾಣುತ್ತಿದೆ ಎಂದಿದ್ದಾರೆ. “ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ, ಡೀಲರ್‌ಗಳು ಗ್ರಾಹಕರಿಗೆ ಎಸ್‌ಯುವಿ ಚಿಲ್ಲರೆ ಮಾರಾಟದಲ್ಲಿ ಸುಮಾರು 60 ಪ್ರತಿಶತದಷ್ಟು ಹೆಚ್ಚಳವನ್ನು ವರದಿ ಮಾಡಿದ್ದಾರೆ. ಕಳೆದ ವರ್ಷದ ನವರಾತ್ರಿಗೆ ಹೋಲಿಸಿದರೆ ಇದು ಗಮನಾರ್ಹ ಹೆಚ್ಚಳವಾಗಿದೆ” ಎಂದು ಅವರು ಹೇಳಿದರು. ನೈಜ್ಯ ಚಿಲ್ಲರೆ ಮಾರಾಟ ಅಂಕಿಅಂಶಗಳನ್ನು ವಾಹನ ನೋಂದಣಿ ವೇದಿಕೆ ‘ವಾಹನ್’ ನಿಂದ ಪಡೆದ ದತ್ತಾಂಶದಿಂದ ಮಾತ್ರ ಬಹಿರಂಗಪಡಿಸಲಾಗುತ್ತದೆ ಎಂದು ಅವರು ಹೇಳಿದರು.
Mahindra THAR 2025: ಭಾರತದಲ್ಲಿ ಕೇವಲ 10 ಲಕ್ಷ ರೂ.ಗೆ ಹೊಸ ಮಹೀಂದ್ರಾ ಥಾರ್ ಬಿಡುಗಡೆ
ಮಹೀಂದ್ರಾ ಕಂಪನಿಯಿಂದ ಬರುತ್ತಿದೆ ಹೊಸ ಮಾದರಿಯ ಬೊಲೆರೊ
ಹೊಸ ಜಿಎಸ್‌ಟಿ ದರಗಳು ಜಾರಿಗೆ ಬರುವುದನ್ನು ಅನೇಕ ಗ್ರಾಹಕರು ಕಾಯುತ್ತಿದ್ದ ಕಾರಣ ಮಾರಾಟದಲ್ಲಿ ಶೇ. 60 ರಷ್ಟು ಹೆಚ್ಚಳಕ್ಕೆ ಬೇಡಿಕೆ ಬಾಕಿ ಇರುವುದು ಭಾಗಶಃ ಕಾರಣ ಎಂದು ನಳಿನಿಕಾಂತ್ ಗೋಲಗುಂಟ ಹೇಳಿದರು. ಮಹೀಂದ್ರಾ ತನ್ನ ಜನಪ್ರಿಯ ಮಾದರಿ ಬೊಲೆರೊದ ಹೊಸ ಮಾದರಿಯನ್ನು ಪರಿಚಯಿಸಿದೆ. ಈ ಬಗ್ಗೆ, ಗ್ರಾಹಕರಿಂದ ಬಂದ ಸಲಹೆಗಳ ಆಧಾರದ ಮೇಲೆ ಕಂಪನಿಯು ಬೊಲೆರೊವನ್ನು ಹೊಸ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಮನರಂಜನಾ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಿದೆ ಎಂದು ಗೋಲಗುಂಟ ಹೇಳಿದರು.
ಕಂಪನಿಯ ಬೊಲೆರೊ ಶ್ರೇಣಿಯ ಒಟ್ಟು ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 9,000 ಯುನಿಟ್‌ಗಳು, ಇದು ವಾರ್ಷಿಕವಾಗಿ ಸುಮಾರು 1,08,000 ಯುನಿಟ್‌ಗಳು. ಇದು ವಾರ್ಷಿಕವಾಗಿ ಮಹೀಂದ್ರಾ ಮತ್ತು ಮಹೀಂದ್ರಾದ ಒಟ್ಟು ಎಸ್‌ಯುವಿ ಮಾರಾಟಕ್ಕೆ ಸರಿಸುಮಾರು ಶೇ. 20 ರಷ್ಟು ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








