ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸಖತ್ ಪರ್ಫಾಮೆನ್ಸ್ ನೀಡಿದ ನೆಕ್ಸಾನ್ ಇವಿ ಮತ್ತು ಪಂಚ್ ಇವಿ

|

Updated on: Jun 14, 2024 | 7:27 PM

ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ಎಲೆಕ್ಟ್ರಿಕ್ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿವೆ.

ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸಖತ್ ಪರ್ಫಾಮೆನ್ಸ್ ನೀಡಿದ ನೆಕ್ಸಾನ್ ಇವಿ ಮತ್ತು ಪಂಚ್ ಇವಿ
ಟಾಟಾ ನೆಕ್ಸಾನ್ ಇವಿ ಮತ್ತು ಪಂಚ್ ಇವಿ
Follow us on

ಭಾರತ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಎಲೆಕ್ಟ್ರಿಕ್ (Nexon EV) ಮತ್ತು ಪಂಚ್ ಎಲೆಕ್ಟ್ರಿಕ್ (Punch EV) ಕಾರುಗಳು ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದು, ಗುಣಮಟ್ಟದ ಉತ್ಪಾದನೆ ಮತ್ತು ಅತ್ಯುತ್ತಮ ಸುರಕ್ಷಾ ಫೀಚರ್ಸ್ ಗಳೊಂದಿಗೆ ಎರಡು ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ. ಪಂಚ್ ಇವಿ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 32 ಅಂಕಗಳಲ್ಲಿ 31.46 ಅಂಕ ಗಳಿಕೆ ಮಾಡಿದ್ರೆ ಮಕ್ಕಳ ಸುರಕ್ಷತೆಯ 49 ಅಂಕಗಳಲ್ಲಿ 45 ಅಂಕಗಳನ್ನು ಗಳಿಸಿದೆ. ಹಾಗೆಯೇ ನೆಕ್ಸಾನ್ ಇವಿ ಕಾರು ಪ್ರಯಾಣಿಕರ ಸುರಕ್ಷತೆಯ 32 ಅಂಕಗಳಿಗೆ 29.86 ಅಂಕ ಗಳಿಸಿದ್ರೆ ಮಕ್ಕಳ ಸುರಕ್ಷತೆಯ 49 ಅಂಕಗಳಲ್ಲಿ 44.95 ಅಂಕಗಳನ್ನು ಗಳಿಸಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಪಂಚ್ ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಆರಂಭಿಕ ಮಾದರಿಗಳಲ್ಲೂ 6 ಏರ್ ಬ್ಯಾಗ್ ಗಳು, ಇಎಸ್ ಸಿ, ಐಸೋಫಿಕ್ಸ್ ಆ್ಯಂಕರ್ಸ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಜೊತೆ ರಿಮೆಂಡರ್ ಸಿಸ್ಟಂ ಮತ್ತು ಎಬಿಎಸ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಪಂಚ್ ಇವಿ ಕಾರು 25kWh ಮತ್ತು 35kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಇದು ಪ್ರತಿ ಚಾರ್ಜ್ ಗೆ 315 ರಿಂದ 421 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ನೆಕ್ಸಾನ್ ಇವಿ ಕಾರು ಕೂಡಾ 30kWh ಮತ್ತು 40.5kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದ್ದು, ಇವು ಪ್ರತಿ ಚಾರ್ಜ್ ಗೆ 325 ರಿಂದ 465 ಕಿ.ಮೀ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಇನ್ನು ವಾಹನಗಳಲ್ಲಿನ ಸುರಕ್ಷತೆಯ ಕೊರತೆ ಪರಿಣಾಮ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಅಪಘಾತಗಳಲ್ಲಿ ಪ್ರಾಣಹಾನಿ ತಗ್ಗಿಸುವ ನಿಟ್ಟಿನಲ್ಲಿ ವಾಹನಗಳಲ್ಲಿನ ಸುರಕ್ಷಾ ಮಾನದಂಡಗಳನ್ನು ಉನ್ನತೀಕರಿಸುತ್ತಿದ್ದು, ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಕಡ್ಡಾಯವಾಗಿ ಜಾರಿ ತಂದಿದೆ. ಜೊತೆಗೆ ಸುರಕ್ಷಾ ಸೌಲಭ್ಯಗಳ ಕಾರ್ಯಕ್ಷಮತೆ ಪರೀಕ್ಷಿಸಲು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಪರಿಚಯಿಸಿದ್ದು, ಇದು ಹೊಸ ಕಾರುಗಳಲ್ಲಿನ ಸುರಕ್ಷತಾ ಗುಣಮಟ್ಟಕ್ಕೆ ರೇಟಿಂಗ್ಸ್ ನೀಡುತ್ತದೆ.

ಜಾಗತಿಕವಾಗಿ ಹೊಸ ಕಾರುಗಳ ಗುಣಮಟ್ಟ ಪರೀಕ್ಷಿಸಲು ಈ ಹಿಂದೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಮಾನದಂಡಗಳನ್ನು ಪಾಲನೆ ಮಾಡುತ್ತಿದ್ದ ಭಾರತೀಯ ಕಾರು ಕಂಪನಿಗಳಿಗೆ ಇದೀಗ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಭಾರತೀಯ ರಸ್ತೆಗಳಲ್ಲಿ ಅವಶ್ಯವಿರುವ ಸುರಕ್ಷಾ ಮಾನದಂಡಗಳನ್ನು ಆಧರಿಸಿ ಪ್ರತ್ಯೇಕವಾಗಿರುವ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ ಮಾಡಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಹೊಸ ಕಾರುಗಳು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವ ರೀತಿ ಸುರಕ್ಷತೆಯನ್ನು ಖಾತ್ರಿಪಡಿಸುತ್ತೆ ಎನ್ನುವುದೇ ಕ್ರ್ಯಾಶ್ ಟೆಸ್ಟಿಂಗ್ ಪ್ರಮುಖ ಅಂಶವಾಗಿದ್ದು, ಇದು ಫ್ರಂಟ್ ಇಂಪ್ಯಾಕ್ಟ್ ಟೆಸ್ಟ್ , ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್‌ ಒಳಗೊಂಡಿರುತ್ತದೆ. ಐದು ಸ್ಟಾರ್ ರೇಟಿಂಗ್ಸ್ ಹೊಂದಿರುವ ಕಾರುಗಳು ಅಪಘಾತದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದರೆ ಸೊನ್ನೆ ರೇಟಿಂಗ್ಸ್ ಪಡೆಯುವ ಕಾರುಗಳು ಖರೀದಿಗೆ ಯೋಗ್ಯವಲ್ಲ ಎಂಬುವುದನ್ನು ಗ್ರಾಹಕರಿಗೆ ಮನವರಿಕೆ ಮಾಡಲು ಸಹಕಾರಿಯಾಗಿದೆ. ಈ ಮೂಲಕ ವಾಹನ ತಯಾಕರು ಕೂಡಾ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳ ಉತ್ಪಾದನೆಯತ್ತ ಹೆಚ್ಚಿನ ಆದ್ಯತೆ ನೀಡಲು ಸಹಕಾರಿಯಾಗುತ್ತಿದ್ದು, ಒಟ್ಟಿನಲ್ಲಿ ಅಪಘಾತಗಳಲ್ಲಿ ಪ್ರಾಣಹಾನಿ ಇಳಿಕೆಯಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ ಎನ್ನಬಹುದು.