ಬಹಳಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್ಗಳ ಹಿಂದೆ ಒಂದಿಲ್ಲೊಂದು ಕುತೂಹಲದ ಹಿನ್ನೆಲೆಯಂತೂ ಇದ್ದೇ ಇರುತ್ತದೆ. ಲಕ್ಷುರಿ ಕಾರು ಮಾರುಕಟ್ಟೆಯ ಪ್ರಮುಖ ಕಂಪನಿಗಳ ಪೈಕಿ ಒಂದಾದ ಮರ್ಸೆಡಿಸ್ ಬೆಂಜ್ (Mercedes- Benz) ಹೆಸರು ಹೇಗೆ ಹುಟ್ಟಿತು ಎಂದು ಹೇಳುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಕಂಪನಿಯ ಸಿಇಒ ಓಲಾ ಕಾಲೆನಿಯಸ್ (Ola Kallenius) ಎಂಬುವವರು ಮರ್ಡೆಡೀಸ್ ಕಂಪನಿಯ ಒಂದು ಬಹಳ ಕುತೂಹಲ ಎನಿಸುವ ಸಂಗತಿಯನ್ನು ತಿಳಿಸಿದ್ದಾರೆ. ಆ ಮರ್ಸೆಡೀಸ್ ಹೆಸರು ಬರಲು ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ ಈ ವಿಡಿಯೋದಲ್ಲಿ.
ಮರ್ಸೆಡೀಸ್ ಬೆಂಜ್ ಕಂಪನಿಯ ಸಿಇಒ ಪ್ರಕಾರ ಮರ್ಸೆಡೀಸ್ ಹೆಸರು ಎಮಿಲ್ ಜೆಲಿನೆಕ್ (Emil Jellenik) ಎಂಬುವವರ ಮಗಳದ್ದು. 1900ರ ಇಸವಿಯಲ್ಲಿ ಎಮಿಲ್ ಜೆಲಿನೆಕ್ ಅವರು ಹೊಸ 35ಎಚ್ಪಿ ಎಂಜಿನ್ ತಯಾರಿಸಿದ್ದರು. ಅವರ ಮಗಳ ಹೆಸರು ಮರ್ಸೆಡೀಸ್ ಎಂದಿತ್ತು. ಈ ಹೊಸ ಎಂಜಿನ್ಗೆ ಅವರು ತಮ್ಮ ಮಗಳ ಹೆಸರನ್ನೇ ಇಟ್ಟರು. ಆ ಎಂಜಿನ್ ಇದ್ದ ಕಾರು ಮರ್ಸೆಡೀಸ್-ಬೆಂಜ್ ಎಂದೇ ಖ್ಯಾತವಾಗತೊಡಗಿತ್ತು. ಅಂದ ಹಾಗೆ, ಮರ್ಸೆಡೀಸ್ ಎಂಬುದು ಸ್ಪ್ಯಾನಿಷ್ ಭಾಷೆಯ ಪದ. ಅದು ಇಂಗ್ಲೀಷ್ನ ಮರ್ಸಿಗೆ ಸಮಾನಾರ್ಥ ಪದ. ಮರ್ಸಿ ಎಂದರೆ ಕ್ಷಮಾ ಎಂದಾಗುತ್ತದೆ.
ಇದನ್ನೂ ಓದಿ: 2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು
Mercedes-Benz CEO Ola Källenius shares how the name ‘Mercedes’ came about. pic.twitter.com/h7xh29lYv3
— Historic Vids (@historyinmemes) June 12, 2024
ಇಲ್ಲಿ ಮರ್ಸೆಡೀಸ್ ಬೆಂಜ್ ಬ್ರ್ಯಾಂಡ್ ಹುಟ್ಟುವ ಮುನ್ನ ಕಂಪನಿ ಹೆಸರು ಡೇಮ್ಲರ್-ಬೆಂಜ್ ಎಂದಿತ್ತು. ಗಾಟ್ಲೇಬ್ ವಿಲ್ಹೆಲ್ಮ್ ಡೇಮ್ಲರ್ ಮತ್ತು ಕಾರ್ಲ್ ಬೆಂಜ್ ಎಂಬಿಬ್ಬರು ಉದ್ಯಮಿಗಳು ಆರಂಭಿಸಿದ ಸಂಸ್ಥೆ. 19ನೇ ಶತಮಾನದ ಕೊನೆಯ ಕ್ವಾರ್ಟರ್ನಲ್ಲಿ ಬೆಂಜ್ ಆರಂಭ ಸಿಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಮರ್ಸಡಿಸ್ ಬೆಂಜ್ ಖ್ಯಾತ ಬ್ರ್ಯಾಂಡ್ ಆಗುತ್ತದೆ. ರಾಕ್ಫೆಲರ್, ಆಸ್ಟಾರ್, ಮಾರ್ಗನ್, ಟೇಲರ್ ಇತ್ಯಾದಿ ಅಂದಿನ ಕಾಲದ ಅತೀ ಶ್ರೀಮಂತರಿಗೆ ಸರಬರಾಜಾಗುತ್ತಿದ್ದ ಲಕ್ಸುರಿ ಕಾರು ಅದಾಗಿತ್ತು.
ಇವತ್ತೂ ಕೂಡ ಮರ್ಸೆಡೀಸ್ ಬೆಂಜ್ ಬ್ರ್ಯಾಂಡ್ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಬಂದಿದೆ. ಲಂಬೋರ್ಗಿನಿ, ಫೆರಾರಿ, ಬಿಎಂಡಬ್ಲ್ಯು, ಪೋಶೆ, ಜಾಗ್ವರ್, ಬೆಂಟ್ಲೆ, ಆಡಿ, ಆಸ್ಟಾನ್ ಮಾರ್ಟಿನ್ ಇತ್ಯಾದಿ ಬ್ರ್ಯಾಂಡ್ಗಳ ಮಧ್ಯೆ ಮರ್ಸೆಡಿಸ್ ಹೆಸರು ಉಳಿಸಿಕೊಂಡಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ