AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಸೆಪ್ಟಂಬರ್ 14ರವರೆಗೆ ಗಡುವು ವಿಸ್ತರಣೆ; ಅಪ್​ಡೇಟ್ ಮಾಡುವ ಕ್ರಮ, ಬೇಕಾದ ದಾಖಲೆ ಮತ್ತಿತರ ವಿವರ ಇಲ್ಲಿದೆ

Aadhaar Card Free Update: ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಮಾಹಿತಿಯನ್ನು ಅಪ್​ಡೇಟ್ ಮಾಡಲು ಜೂನ್ 14ರವರೆಗೆ ಇದ್ದ ಗಡುವನ್ನು ಯುಐಡಿಎಐ ಸೆಪ್ಟಂಬರ್ 14ರವರೆಗೂ ವಿಸ್ತರಿಸಿದೆ. ಆ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ ಇತ್ಯಾದಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಹೊಸದಾಗಿ ಅಡ್ರೆಸ್ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಸೆಪ್ಟಂಬರ್ 14ರವರೆಗೆ ಗಡುವು ವಿಸ್ತರಣೆ; ಅಪ್​ಡೇಟ್ ಮಾಡುವ ಕ್ರಮ, ಬೇಕಾದ ದಾಖಲೆ ಮತ್ತಿತರ ವಿವರ ಇಲ್ಲಿದೆ
ಆಧಾರ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2024 | 5:25 PM

Share

ನವದೆಹಲಿ, ಜೂನ್ 13: ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್​ಡೇಟ್ (Aadhaar card free update) ಮಾಡುವ ಅವಕಾಶವನ್ನು ಇನ್ನಷ್ಟು ಕಾಲ ವಿಸ್ತರಿಸಲಾಗಿದೆ. ಜೂನ್ 14ರವರೆಗೂ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 14ರವರೆಗೂ ಮುಂದುವರಿದಿದೆ. ಯುಐಡಿಎಐ ಇಂದು ಗುರುವಾರ ಈ ವಿಚಾರವನ್ನು ಪ್ರಕಟಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್​ಲೈನ್​ನಲ್ಲಿ ಮಾಹಿತಿ ಅಪ್​ಡೇಟ್ ಮಾಡಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸುವುದಾದರೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಸೆಪ್ಟಂಬರ್ 14ರ ಬಳಿಕವೂ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ನೀಡಬೇಕಾಗುತ್ತದೆ.

ಆನ್​ಲೈನ್​ನಲ್ಲಿ ಏನೆಲ್ಲಾ ಆಧಾರ್ ಅಪ್​ಡೇಟ್ ಮಾಡಬಹುದು?

ಯುಐಡಿಎಐನ ಆಧಾರ್ ಪೋರ್ಟಲ್​ನಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಬಯೋಮೆಟ್ರಿಲ್ ಲಾಕ್ ಮಾಡುವುದು, ಅನ್​ಲಾಕ್ ಮಾಡುವುದು ಇತ್ಯಾದಿಯೂ ಅದರಲ್ಲಿ ಇದೆ. ಹಾಗೆಯೇ, ಆಧಾರ್ ಕಾರ್ಡ್​ನಲ್ಲಿರುವ ಕೆಲ ಮಾಹಿತಿಯನ್ನು ಅಗತ್ಯಬಿದ್ದಲ್ಲಿ ಬದಲಿಸಬಹುದು.

ಹೆಸರು, ವಿಳಾಸ ಇವುಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಬಹುದು. ಜನ್ಮದಿನಾಂಕ ಮೊದಲಾದವುಗಳನ್ನು ಅಪ್​ಡೇಟ್ ಮಾಡಲು ಆಧಾರ್ ಸೆಂಟರ್​ಗೆ ಹೋಗಬೇಕಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

ಹತ್ತು ವರ್ಷಗಳಿಂದ ಒಮ್ಮೆಯೂ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ಕೆಲವಾರು ವರ್ಷಗಳಿಂದ ಹೇಳುತ್ತಾ ಬಂದಿದೆ. ಇಂಥವರು ತಪ್ಪದೇ ತಮ್ಮ ಆಧಾರ್ ಅನ್ನು ಅಪ್​ಡೇಟ್ ಮಾಡತಕ್ಕದ್ದು. ಆಧಾರ್​ನಲ್ಲಿರುವ ತಮ್ಮ ವಿವರದಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ತಮ್ಮ ಗುರುತು ದಾಖಲೆ ಮತ್ತು ವಿಳಾಸ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ಕ್ರಮ

  • ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಹೋಗಿ; ಅದರ ವಿಳಾಸ: myaadhaar.uidai.gov.in/
  • ಇಲ್ಲಿ ನಿಮ್ಮ ಆಧಾರ್ ನಂಬರ್ ಬಳಸಿ ಲಾಗಿನ್ ಆಗಿ
  • ಮುಖ್ಯಪುಟದಲ್ಲಿ ನಿಮಗೆ ವಿವಿಧ ಟ್ಯಾಬ್​ಗಳು ಕಾಣಬಹುದು. ಅದರಲ್ಲಿ ಡಾಕ್ಯುಮೆಂಟ್ ಅಪ್​ಡೇಟ್ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು.

ಸಬ್ಮಿಟ್ ಒತ್ತಿದ ಬಳಿಕ ನಿಮಗೆ 14 ಅಂಕಿ ಯುಆರ್​ಎನ್ ಸಂಖ್ಯೆ ಬರುತ್ತದೆ. ಅಲ್ಲಿಗೆ ನಿಮ್ಮ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಿದಂತಾಗುತ್ತದೆ.

ಐಡಿ ಪ್ರೂಫ್ ಆಗಿ ಸಲ್ಲಿಸಬಹುದಾದ ದಾಖಲೆಗಳು

  • ಪಾಸ್​ಪೋರ್ಟ್
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್
  • ನರೇಗಾ ಕಾರ್ಡ್
  • ಪಿಂಚಣಿ ಕಾರ್ಡ್
  • ವಿವಾಹ ನೊಂದಣಿ ದಾಖಲೆ
  • ಮಾನ್ಯ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್
  • ಹೆಸರು ಮತ್ತು ಫೋಟೋ ಇರುವ ಬ್ಯಾಂಕ್ ಪಾಸ್​ಬುಕ್

ಇದನ್ನೂ ಓದಿ: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್

ಅಡ್ರೆಸ್ ಪ್ರೂಫ್​ಗೆ ಬೇಕಿರುವ ದಾಖಲೆಗಳು

  • ಪಾಸ್​ಪೋರ್ಟ್
  • ಬ್ಯಾಂಕ್ ಸ್ಟೇಟ್ಮೆಂಟ್
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್
  • ನಿಮ್ಮ ಹೆಸರಿನಲ್ಲಿರುವ ನೀರಿನ ಬಿಲ್
  • ಪ್ರಾಪರ್ಟಿ ಟ್ಯಾಕ್ಸ್ ಬಿಲ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ