ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ

Morgan Stanley bullish on Indian equity market: ಚೀನಾದ ಷೇರು ಮಾರುಕಟ್ಟೆಯಿಂದ ಹೂಡಿಕೆದಾರರಿಗೆ ಏನೂ ಗಿಟ್ಟಲ್ಲ. ಭಾರತದಲ್ಲಿ ಪ್ರತೀ ಷೇರಿಗೆ ಸಿಗುವ ರಿಟರ್ನ್​ನ ದರ ಕಳೆದ ಹತ್ತು ವರ್ಷದಲ್ಲಿ ಗಣನೀಯವಾಗಿ ಏರಿದೆ ಎಂದು ಮಾರ್ಗನ್ ಸ್ಟಾನ್ಲೀಯ ಎಕ್ಸಿಕ್ಯೂಟಿವ್ ಆಗಿರುವ ಜೋನಾಥನ್ ಗಾರ್ನರ್ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಚೀನಾದ ಮಾರುಕಟ್ಟೆಯನ್ನು ಭಾರತ ಮೀರಿಸಲಿದೆ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ
ಷೇರು ಮಾರುಕಟ್ಟೆ
Follow us
|

Updated on: Jun 13, 2024 | 6:44 PM

ನವದೆಹಲಿ, ಜೂನ್ 13: ಭಾರತದ ಷೇರು ಮಾರುಕಟ್ಟೆ (stock market) ಅಗತ್ಯಕ್ಕಿಂತ ಹೆಚ್ಚು ಉಬ್ಬಿದೆ. ಚೀನಾದ ವ್ಯಾಲ್ಯುಯೇಶನ್ ಸರಿಯಾಗಿದೆ. ಅದರ ಪಿಇ ರೇಶಿಯೋ ಕಡಿಮೆ ಆಗಿದ್ದು ಹೂಡಿಕೆದಾರರಿಗೆ ಆಕರ್ಷಕ ಎನಿಸಿದೆ. ಹೀಗಾಗಿ, ವಿದೇಶೀ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಿಂದ ಹೊರಬಂದು ಚೀನಾದತ್ತ ಹೋಗುತ್ತಿದ್ದಾರೆ ಎನ್ನುವಂತಹ ವರದಿಗಳು ಇತ್ತೀಚೆಗೆ ಬಂದಿದ್ದವು. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಹಾಗಿಲ್ಲ. ಚೀನಾದ ಮಾರುಕಟ್ಟೆ ಮಂದಗೊಂಡಿದೆ. ಯಾವ ಆಕರ್ಷಣೆಯೂ ಉಳಿದಿಲ್ಲ ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಏಷ್ಯಾ ಮತ್ತು ಎಮರ್ಜಿಂಗ್ ಮಾರ್ಕೆಟ್​ನ ಮುಖ್ಯ ಈಕ್ವಿಟಿ ಸ್ಟ್ರಾಟಿಜಿಸ್ಟ್ ಆಗಿರುವ ಜೋನಾಥನ್ ಗಾರ್ನರ್ (Jonathan Garner) ಅಭಿಪ್ರಾಯಪಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಭಾರತದ ಮಾರುಕಟ್ಟೆಯು ಚೀನಾವನ್ನು ಸತತವಾಗಿ ಹಿಂದಿಕ್ಕಿದೆ. ಚೀನಾದ ಪ್ರತೀ ಷೇರಿಗೆ ಸಿಗುವ ಗಳಿಕೆ (EPS) ಕಳೆದ ಒಂದು ದಶಕದಲ್ಲಿ ನಿಂತ ನೀರಂತಾಗಿದೆ. ಆದರೆ, ಈ ಅವಧಿಯಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಶೇ. 15ರಷ್ಟಾದರೂ ಹೆಚ್ಚಳವಾಗಿದೆ ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಎಕ್ಸಿಕ್ಯೂಟಿವ್ ಹೇಳಿದ್ದಾರೆ.

ಇನ್ನು ಮೂರು ವರ್ಷದಲ್ಲಿ ಭಾರತದ ಷೇರು ಮಾರುಕಟ್ಟೆ ಚೀನಾದ್ದಕ್ಕಿಂತ ದೊಡ್ಡದಾಗಲಿದೆ. ಜಪಾನ್ ಮತ್ತು ಭಾರತದ ಈಕ್ವಿಟಿ ಮಾರುಕಟ್ಟೆ ಈ ವರ್ಷ ಹೊಸ ಎತ್ತರಕ್ಕೆ ಏರಿವೆ. ಉದಯೋನ್ಮುಖ ಮಾರುಕಟ್ಟೆ ಅಥವಾ ಎಮರ್ಜಿಂಗ್ ಮಾರ್ಕೆಟ್​ಗಳ ಪೈಕಿ ಭಾರತವೇ ಅತಿದೊಡ್ಡ ಓವರ್​ವೇಟ್ ಕೆಟಗರಿಯಲ್ಲಿ ಇರುವುದು ಎಂದು ಗಾರ್ನರ್ ತಿಳಿಸಿದ್ದಾರೆ.

ಇದನ್ನೂ ಓದಿ: Union Budget 2024: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್

ಚೀನಾಗೆ ಆಕರ್ಷಕ ವ್ಯಾಲ್ಯುಯೇಶನ್​ಅನುಕೂಲ ಇದೆ ಎನ್ನುವ ವಾದವನ್ನು ಮಾರ್ಗನ್ ಸ್ಟಾನ್ಲೀ ಎಕ್ಸಿಕ್ಯೂಟಿವ್ ಅಲ್ಲಗಳೆಯುತ್ತಾರೆ. ಈಕ್ವಿಟಿಯಿಂದ ಸಿಗುವ ರಿಟರ್ನ್ (RoE) ಅನ್ನು ಪರಿಗಣಿಸದೆಯೇ ಪಿಇ ರೇಶಿಯೋವೊಂದನ್ನೇ ಆಧಾರವಾಗಿ ಚೀನಾ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸಮಂಜಸ ಅಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಆರ್​ಒಇ ಬಹಳ ಎತ್ತರದಲ್ಲಿದೆ. ಅಮೆರಿಕ ಬಿಟ್ಟರೆ ಅತಿಹೆಚ್ಚು ಆರ್​ಒಇ ಇರುವುದು ಭಾರತದಲ್ಲೇ ಎಂದು ಭಾರತದ ಷೇರು ಮಾರುಕಟ್ಟೆಯ ಆಕರ್ಷಣೆಯ ಅಂಶವನ್ನು ಜೋನಾಥನ್ ಗಾರ್ನರ್ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ