ಮರ್ಸೆಡೀಸ್ ಹೆಸರು ಯಾವ ಸಂಸ್ಥಾಪಕರದ್ದಲ್ಲ; ಇಲ್ಲಿದೆ ಈ ಬ್ರ್ಯಾಂಡ್ ಹಿಂದಿನ ಕುತೂಹಲದ ಸಂಗತಿ

The person behind the name Mercedes: ವಿಶ್ವದ ಪ್ರಮುಖ ಲಕ್ಷುರಿ ಕಾರ್ ಬ್ರ್ಯಾಂಡ್​​ಗಳಲ್ಲಿ ಮರ್ಸೆಡೀಸ್-ಬೆಂಜ್ ಕೂಡ ಒಂದು. ಇದರ ಸಂಸ್ಥಾಪಕರು ಗಾಟ್​ಲೇಬ್ ವಿಲ್​ಹೆಲ್ಮ್ ಡೇಮ್ಲರ್ ಮತ್ತು ಕಾರ್ಲ್ ಬೆಂಜ್ ಎಂಬಿಬ್ಬರು. ಇಲ್ಲಿ ಬೆಂಜ್ ಹೆಸರಿಗೆ ಕಾರ್ಲ್ ಬೆಂಜ್ ಕಾರಣ. ಆದರೆ, ಮರ್ಸೆಡೀಸ್ ಹೆಸರು ಬರಲು ಎಮಿಲ್ ಜೆಲ್ಲಿನೆಕ್ ಕಾರಣ. ಇವರು ತಯಾರಿಸಿದ 35 ಎಚ್​ಪಿ ಎಂಜಿನ್ ಅನ್ನು ಬೆಂಜ್ ಕಾರಿಗೆ ಅಳವಡಿಸಲಾಗಿತ್ತು. ಅದು ಮರ್ಸೆಡಿಸ್ ಎಂದೇ ಖ್ಯಾತವಾಯಿತು. ಈ ಮರ್ಸೆಡೀಸ್ ಹೆಸರು ಎಮಿಲ್ ಅವರ ಮಗಳದ್ದು. ಅವರ ಮಗಳ ಹೆಸರು ಮರ್ಸೆಡೀಸ್ ಎಂದಿತ್ತು. ಆಕೆಯ ಹೆಸರನ್ನೇ ಇಡಲಾಗಿತ್ತು. ಆಗಿನಿಂದ ಡೇಮ್ಲರ್-ಬೆಂಜ್ ಎಂದಿದ್ದ ಕಾರು ಮರ್ಸೆಡೀಸ್-ಬೆಂಜ್ ಆಗಿ ಹೆಸರಾಯಿತು.

ಮರ್ಸೆಡೀಸ್ ಹೆಸರು ಯಾವ ಸಂಸ್ಥಾಪಕರದ್ದಲ್ಲ; ಇಲ್ಲಿದೆ ಈ ಬ್ರ್ಯಾಂಡ್ ಹಿಂದಿನ ಕುತೂಹಲದ ಸಂಗತಿ
ಮೆರ್ಸೇಡೀಸ್ ಬೆಂಜ್
Follow us
|

Updated on: Jun 13, 2024 | 3:51 PM

ಬಹಳಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್​ಗಳ ಹಿಂದೆ ಒಂದಿಲ್ಲೊಂದು ಕುತೂಹಲದ ಹಿನ್ನೆಲೆಯಂತೂ ಇದ್ದೇ ಇರುತ್ತದೆ. ಲಕ್ಷುರಿ ಕಾರು ಮಾರುಕಟ್ಟೆಯ ಪ್ರಮುಖ ಕಂಪನಿಗಳ ಪೈಕಿ ಒಂದಾದ ಮರ್ಸೆಡಿಸ್ ಬೆಂಜ್ (Mercedes- Benz) ಹೆಸರು ಹೇಗೆ ಹುಟ್ಟಿತು ಎಂದು ಹೇಳುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಕಂಪನಿಯ ಸಿಇಒ ಓಲಾ ಕಾಲೆನಿಯಸ್ (Ola Kallenius) ಎಂಬುವವರು ಮರ್ಡೆಡೀಸ್ ಕಂಪನಿಯ ಒಂದು ಬಹಳ ಕುತೂಹಲ ಎನಿಸುವ ಸಂಗತಿಯನ್ನು ತಿಳಿಸಿದ್ದಾರೆ. ಆ ಮರ್ಸೆಡೀಸ್ ಹೆಸರು ಬರಲು ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ ಈ ವಿಡಿಯೋದಲ್ಲಿ.

ಮರ್ಸೆಡೀಸ್ ಬೆಂಜ್ ಕಂಪನಿಯ ಸಿಇಒ ಪ್ರಕಾರ ಮರ್ಸೆಡೀಸ್ ಹೆಸರು ಎಮಿಲ್ ಜೆಲಿನೆಕ್ (Emil Jellenik) ಎಂಬುವವರ ಮಗಳದ್ದು. 1900ರ ಇಸವಿಯಲ್ಲಿ ಎಮಿಲ್ ಜೆಲಿನೆಕ್ ಅವರು ಹೊಸ 35ಎಚ್​​ಪಿ ಎಂಜಿನ್ ತಯಾರಿಸಿದ್ದರು. ಅವರ ಮಗಳ ಹೆಸರು ಮರ್ಸೆಡೀಸ್ ಎಂದಿತ್ತು. ಈ ಹೊಸ ಎಂಜಿನ್​ಗೆ ಅವರು ತಮ್ಮ ಮಗಳ ಹೆಸರನ್ನೇ ಇಟ್ಟರು. ಆ ಎಂಜಿನ್ ಇದ್ದ ಕಾರು ಮರ್ಸೆಡೀಸ್-ಬೆಂಜ್ ಎಂದೇ ಖ್ಯಾತವಾಗತೊಡಗಿತ್ತು. ಅಂದ ಹಾಗೆ, ಮರ್ಸೆಡೀಸ್ ಎಂಬುದು ಸ್ಪ್ಯಾನಿಷ್ ಭಾಷೆಯ ಪದ. ಅದು ಇಂಗ್ಲೀಷ್​ನ ಮರ್ಸಿಗೆ ಸಮಾನಾರ್ಥ ಪದ. ಮರ್ಸಿ ಎಂದರೆ ಕ್ಷಮಾ ಎಂದಾಗುತ್ತದೆ.

ಇದನ್ನೂ ಓದಿ: 2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು

ಬೆಂಜ್ ಹೆಸರು ಯಾರದ್ದು?

ಇಲ್ಲಿ ಮರ್ಸೆಡೀಸ್ ಬೆಂಜ್ ಬ್ರ್ಯಾಂಡ್ ಹುಟ್ಟುವ ಮುನ್ನ ಕಂಪನಿ ಹೆಸರು ಡೇಮ್ಲರ್-ಬೆಂಜ್ ಎಂದಿತ್ತು. ಗಾಟ್​ಲೇಬ್ ವಿಲ್​ಹೆಲ್ಮ್ ಡೇಮ್ಲರ್ ಮತ್ತು ಕಾರ್ಲ್ ಬೆಂಜ್ ಎಂಬಿಬ್ಬರು ಉದ್ಯಮಿಗಳು ಆರಂಭಿಸಿದ ಸಂಸ್ಥೆ. 19ನೇ ಶತಮಾನದ ಕೊನೆಯ ಕ್ವಾರ್ಟರ್​ನಲ್ಲಿ ಬೆಂಜ್ ಆರಂಭ ಸಿಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಮರ್ಸಡಿಸ್ ಬೆಂಜ್ ಖ್ಯಾತ ಬ್ರ್ಯಾಂಡ್ ಆಗುತ್ತದೆ. ರಾಕ್​ಫೆಲರ್, ಆಸ್ಟಾರ್, ಮಾರ್ಗನ್, ಟೇಲರ್ ಇತ್ಯಾದಿ ಅಂದಿನ ಕಾಲದ ಅತೀ ಶ್ರೀಮಂತರಿಗೆ ಸರಬರಾಜಾಗುತ್ತಿದ್ದ ಲಕ್ಸುರಿ ಕಾರು ಅದಾಗಿತ್ತು.

ಇವತ್ತೂ ಕೂಡ ಮರ್ಸೆಡೀಸ್ ಬೆಂಜ್ ಬ್ರ್ಯಾಂಡ್ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಬಂದಿದೆ. ಲಂಬೋರ್ಗಿನಿ, ಫೆರಾರಿ, ಬಿಎಂಡಬ್ಲ್ಯು, ಪೋಶೆ, ಜಾಗ್ವರ್, ಬೆಂಟ್ಲೆ, ಆಡಿ, ಆಸ್ಟಾನ್ ಮಾರ್ಟಿನ್ ಇತ್ಯಾದಿ ಬ್ರ್ಯಾಂಡ್​​ಗಳ ಮಧ್ಯೆ ಮರ್ಸೆಡಿಸ್ ಹೆಸರು ಉಳಿಸಿಕೊಂಡಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್