TVS Jupiter CNG: 1 ಕಿ. ಮೀ ಓಡಲು ಕೇವಲ 1 ರೂ. ಮಾತ್ರ: ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಬಿಡುಗಡೆಗೆ ಸಿದ್ದ
TVS Jupiter CNG Launching Soon: ಟಿವಿಎಸ್ ಜೂಪಿಟರ್ ಸಿಎನ್‌ಜಿ ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಸ್ಕೂಟರ್ ಎಂದು ಹೇಳಲಾಗುತ್ತದೆ. ಕಂಪನಿಯು ತನ್ನ ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 1 ರೂ. ಗಿಂತ ಕಡಿಮೆ ಎಂದು ಹೇಳಿಕೊಂಡಿದೆ. ಇದು ಸೀಟಿನ ಕೆಳಗಿರುವ ಸ್ಟೋರೇಜ್ ಜಾಗದಲ್ಲಿ 1.4 ಕೆಜಿ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ.

TVS Jupiter CNG Launching Soon: ಮುಂಬರುವ ದಿನಗಳಲ್ಲಿ ನೀವು ಉತ್ತಮ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ಇದೇ ವರ್ಷ ಜನವರಿಯಲ್ಲಿ ದೆಹಲಿಯಲ್ಲಿ ನಡೆದ 2025 ರ ಆಟೋ ಎಕ್ಸ್‌ಪೋದಲ್ಲಿ ಟಿವಿಎಸ್ ಹಲವಾರು ಹೊಸ ದ್ವಿಚಕ್ರ ವಾಹನ ಮಾದರಿಗಳನ್ನು ಪರಿಚಯಿಸಿತು. ಇವುಗಳಲ್ಲಿ ಟಿವಿಎಸ್ ಜೂಪಿಟರ್ ಸಿಎನ್‌ಜಿ ಹೆಸರು ಕೂಡ ಸೇರಿದೆ. ವರದಿಗಳ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಟಿವಿಎಸ್ ಜೂಪಿಟರ್ ಸಿಎನ್‌ಜಿ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೂಲಕ ಅಟೋ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ.
1 ಕೆಜಿ ಸಿಎನ್‌ಜಿಯಲ್ಲಿ ಜುಪಿಟರ್ ಸಿಎನ್‌ಜಿ ಎಷ್ಟು ಚಲಿಸುತ್ತದೆ?:
ಟಿವಿಎಸ್ ಜೂಪಿಟರ್ ಸಿಎನ್‌ಜಿ ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಸ್ಕೂಟರ್ ಎಂದು ಹೇಳಲಾಗುತ್ತದೆ. ಕಂಪನಿಯು ತನ್ನ ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 1 ರೂ. ಗಿಂತ ಕಡಿಮೆ ಎಂದು ಹೇಳಿಕೊಂಡಿದೆ. ಇದು ಸೀಟಿನ ಕೆಳಗಿರುವ ಸ್ಟೋರೇಜ್ ಜಾಗದಲ್ಲಿ 1.4 ಕೆಜಿ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ.
ಈ ಸ್ಕೂಟರ್ 1 ಕೆಜಿ ಸಿಎನ್‌ಜಿಯಲ್ಲಿ 84 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ, ಟಿವಿಎಸ್ ಜೂಪಿಟರ್ ಸಿಎನ್‌ಜಿ ಟ್ಯಾಂಕ್ ತುಂಬಿದ ನಂತರ 226 ಕಿಲೋ ಮೀಟರ್ ಗಳವರೆಗೆ ಓಡಲು ಸಾಧ್ಯವಾಗುತ್ತದೆ.
ಟಿವಿಎಸ್ ಜೂಪಿಟರ್ ಸಿಎನ್‌ಜಿಯ ಪವರ್‌ಟ್ರೇನ್:
ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಜುಪಿಟರ್ ಸಿಎನ್‌ಜಿಗೆ ಒಬಿಡಿ2ಬಿ ಕಂಪ್ಲೈಂಟ್ ಎಂಜಿನ್ ನೀಡಲಾಗಿದೆ. ಇದು 125 ಸಿಸಿ ಜೈವಿಕ ಇಂಧನ ಎಂಜಿನ್ ಹೊಂದಿದ್ದು, 600 ಆರ್‌ಪಿಎಂನಲ್ಲಿ 5.3 ಕಿ.ವ್ಯಾಟ್ ಶಕ್ತಿಯನ್ನು ಮತ್ತು 5500 ಆರ್‌ಪಿಎಂನಲ್ಲಿ 9.4 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
Maruti Suzuki Ciaz: ಮಾರುತಿ ಕಾರು ಬಳಕೆದಾರರಿಗೆ ಬಿಗ್ ಶಾಕ್: 1 ತಿಂಗಳ ಬಳಿಕ ಈ ಕಾರು ಸ್ಥಗಿತಗೊಳ್ಳಲಿದೆ
ಜುಪಿಟರ್ ಸಿಎನ್‌ಜಿಯ ವೈಶಿಷ್ಟ್ಯಗಳು:
ಜುಪಿಟರ್ ಸಿಎನ್‌ಜಿಯಲ್ಲಿ ಹೊಸ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು LED ಹೆಡ್‌ಲೈಟ್‌ಗಳು, USB ಚಾರ್ಜರ್, ಸ್ಟ್ಯಾಂಡ್ ಕಟ್-ಆಫ್ ಮತ್ತು ಬ್ಲೂಟೂತ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಪರಿಸರ ಸ್ನೇಹಪರತೆ ಮತ್ತು ಇಂಧನ ಉಳಿತಾಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಜೂಪಿಟರ್ ಸಿಎನ್‌ಜಿಯ ನಿರೀಕ್ಷಿತ ಬೆಲೆ:
ಪ್ರಸ್ತುತ, ಟಿವಿಎಸ್ ಜೂಪಿಟರ್ 125 ಪೆಟ್ರೋಲ್ ಆವೃತ್ತಿಯ ಬೆಲೆ ರೂಪಾಂತರವನ್ನು ಅವಲಂಬಿಸಿ ರೂ. 88,174 ರಿಂದ ರೂ. 99,015 ರವರೆಗೆ ಇರುತ್ತದೆ. ಅದರ ಹೊಸ CNG ಆವೃತ್ತಿಯನ್ನು ಸಹ ಅದೇ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಅಂದರೆ ಸುಮಾರು 90,000 ರಿಂದ 99,000 ರೂ. ಇರಬಹುದು. ಆದಾಗ್ಯೂ, ಅದರಲ್ಲಿ ಸಿಎನ್‌ಜಿ ಟ್ಯಾಂಕ್ ಇರುವುದರಿಂದ, ಬೂಟ್ ಸ್ಥಳವು ಸ್ವಲ್ಪ ಕಡಿಮೆ ಇರುವ ಸಾಧ್ಯತೆ ಇದೆ.
ಕಡಿಮೆ ಇಂಧನ ವೆಚ್ಚದಲ್ಲಿ ಪ್ರಯಾಣಿಸುವ ವಾಹನಗಳ ಹುಡುಕಾಟ ಬಹಳ ಹಿಂದಿನಿಂದಲೂ ಜನರಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಬಜಾಜ್ ಈಗಾಗಲೇ ಬೈಕ್‌ನಲ್ಲಿ ಸಿಎನ್‌ಜಿ ವಾಹನವನ್ನು ಬಿಡುಗಡೆ ಮಾಡಿದ್ದರೂ, ಇದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಲಿದೆ. ಇಂಧನ ವೆಚ್ಚ ಗಮನಾರ್ಹವಾಗಿ ಕಡಿಮೆ ಇರುವುದರಿಂದ ಜನರು ಖಂಡಿತವಾಗಿಯೂ ಇದನ್ನು ಹೆಚ್ಚು ಇಷ್ಟಪಡುತ್ತಾರೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ