ಕೆಲವರು ಹೊಸ ಕಾರನ್ನು ಖರೀದಿಸುವ ಮೊದಲು ಡ್ರೈವಿಂಗ್ ಅನ್ನು ಸುಧಾರಿಸಲು ಬಳಸಿದ ಕಾರು ಅಂದರೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುತ್ತಾರೆ. ಕೆಲವರು ಹೊಸ ಕಾರು ಖರೀದಿಸಲು ಬಜೆಟ್ ಹೊಂದಿಲ್ಲದ ಕಾರಣ ಹಳೆಯ ಕಾರನ್ನು ಸಹ ಖರೀದಿಸುತ್ತಾರೆ. ಭಾರತದಲ್ಲಿ ಹೊಸ ಕಾರುಗಳ ಜೊತೆಗೆ ಉಪಯೋಗಿಸಿದ ಕಾರುಗಳ ಮಾರುಕಟ್ಟೆಯೂ ಅಭಿವೃದ್ಧಿ ಹೊಂದುತ್ತಿದೆ. ನೀವು ಬ್ರೋಕರ್ ಸಹಾಯದಿಂದ ಅಥವಾ ನೇರವಾಗಿ ಕಾರ್ ಮಾಲೀಕರು ಅಥವಾ ಕಂಪನಿಯಿಂದ ಹಳೆಯ ಕಾರನ್ನು ಖರೀದಿಸಬಹುದು. ನೀವು ಉತ್ತಮ ಸ್ಥಿತಿಯಲ್ಲಿರುವ ಹಳೆಯ ಕಾರನ್ನು ಹುಡುಕುತ್ತಿದ್ದರೆ, ಕಾರನ್ನು ಖರೀದಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ.
ಹಳೆಯ ಕಾರನ್ನು ಖರೀದಿಸುವ ಮೊದಲು, ಅದರ ಸ್ಥಿತಿಯನ್ನು ಪರಿಶೀಲಿಸಬೇಕು. ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ನಿಮಗೆ ಉತ್ತಮ ಜ್ಞಾನವಿದ್ದರೆ, ನೀವು ಹಳೆಯ ಕಾರನ್ನು ಸಂಪೂರ್ಣವಾಗಿ ಪರಿಶೀಲಿಸಬಹುದು. ಇಲ್ಲದಿದ್ದರೆ ನೀವು ಉತ್ತಮ ಮತ್ತು ವಿಶ್ವಾಸಾರ್ಹ ಮೆಕ್ಯಾನಿಕ್ ಸಹಾಯವನ್ನು ತೆಗೆದುಕೊಳ್ಳಬಹುದು. ಹೊರಗಿನಿಂದ ನೋಡಿದಾಗ ಹಳೆಯ ಕಾರಿನ ಸ್ಥಿತಿ ಚೆನ್ನಾಗಿ ಕಾಣಿಸಬಹುದು. ಆದರೆ ಉತ್ತಮ ಮೆಕ್ಯಾನಿಕ್ ಕಾರಿನ ಸಣ್ಣ ಮತ್ತು ಪ್ರಮುಖ ದೋಷಗಳನ್ನು ಬಹಿರಂಗಪಡಿಸಬಹುದು.
ಕಾರಿನ ಎಂಜಿನ್ ಮತ್ತು ಗೇರ್ ಬಾಕ್ಸ್ನ ಸ್ಥಿತಿಯು ಬಹಳ ಮುಖ್ಯವಾಗಿದೆ. ಈ ವಿಷಯಗಳನ್ನು ನೋಡುವುದು ಮುಖ್ಯ: ಎಂಜಿನ್ ಶಬ್ದ, ತೈಲ ಸೋರಿಕೆಗಳು ಮತ್ತು ಗೇರ್ ಶಿಫ್ಟಿಂಗ್ ಸ್ಮೂತ್ ಇದೆಯೇ ಎಂಬುದನ್ನು ನೋಡಬೇಕು. ಈ ತಪಾಸಣೆಯನ್ನು ವಿಶ್ವಾಸಾರ್ಹ ಮೆಕ್ಯಾನಿಕ್ ಸಹಾಯದಿಂದ ಮಾಡಬಹುದು.
ಕಾರಿನ ಬಾಡಿ ಮತ್ತು ಬಣ್ಣಕ್ಕೆ ಗಮನ ಕೊಡಿ. ಯಾವುದೇ ಅಸಾಮಾನ್ಯ ಡೆಂಟ್‌ಗಳು, ಗೀರುಗಳು ಅಥವಾ ಬಣ್ಣ ವ್ಯತ್ಯಾಸಗಳು ಕಂಡುಬಂದರೆ, ಕಾರನ್ನು ರಿಪೇರಿ ಮಾಡಿರುವ ಸಾಧ್ಯತೆಯಿದೆ. ಬಣ್ಣದ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಿ, ಅದು ಪೈಂಟ್ ಮಾಡಿದ್ದ ಕಾರಾಗಿದ್ದರೆ ಹಿಂದೆ ಅಪಘಾತ ಆಗಿರುವ ಸಾಧ್ಯತೆ ಇರುತ್ತದೆ. ಹಾಗೆಯೆ ಕಾರಿನಲ್ಲಿರುವ ಪಾರ್ಟ್ಸ್ ವರಿಜಿನಲ್ ಹೌದಾ ಎಂದು ನೋಡಬೇಕು.
ಅನೇಕ ಜನರು ಇಂದು ತಮ್ಮ ಕಾರಿನಲ್ಲಿ CNG ಅನ್ನು ಇಂಧನವಾಗಿ ನವೀಕರಿಸುತ್ತಾರೆ. ಆದರೆ ಇದು ಕಾರಿನ ಆರ್‌ಸಿಯಲ್ಲಿ ದಾಖಲಾಗಿರುವುದಿಲ್ಲ. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ, ಅದು ಚಲಿಸುವ ಇಂಧನವನ್ನು ಆರ್‌ಸಿಯಲ್ಲಿ ನಮೂದಿಸಬೇಕು ಎಂಬುದನ್ನು ನೆನಪಿನಲ್ಲಿಡಿ ಇದರಿಂದ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಿರುವುದಿಲ್ಲ.
ವಾಹನದ ಸೈಲೆನ್ಸರ್‌ನಿಂದ ಹೊರಬರುವ ಹೊಗೆಯ ಬಗ್ಗೆ ಗಮನ ಹರಿಸಲು ಮರೆಯದಿರಿ. ಸೈಲೆನ್ಸರ್‌ನಿಂದ ಕಪ್ಪು ಅಥವಾ ನೀಲಿ ಹೊಗೆ ಬರುತ್ತಿದ್ದರೆ ಎಂಜಿನ್‌ನಲ್ಲಿ ಸ್ವಲ್ಪ ದೋಷವಿರಬಹುದು. ಎಂಜಿನ್‌ನಲ್ಲಿನ ತೈಲ ಸೋರಿಕೆಯ ಸಮಸ್ಯೆಯಿಂದಾಗಿ ಹೊಗೆಯ ಬಣ್ಣವು ಕಪ್ಪು ಅಥವಾ ನೀಲಿ ಬಣ್ಣದ್ದಾಗಿರಬಹುದು. ಟೆಸ್ಟ್ ಡ್ರೈವ್ ಸಮಯದಲ್ಲಿ ನೀವು ಜ್ಞಾನವಿರುವ ಮೆಕ್ಯಾನಿಕ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡರೆ ಉತ್ತಮ.
Used car buying tips
pic.twitter.com/LVUjt2bwCJ— Science girl (@gunsnrosesgirl3) November 19, 2024
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಕಾರಿನ ಹೆಡ್ ಲೈಟ್, ಟೈಲ್ ಲೈಟ್, ಇಂಡಿಕೇಟರ್ ಮತ್ತು ಎಸಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕೆಲವೊಮ್ಮೆ ಈ ವಿಷಯಗಳು ದೊಡ್ಡ ವೆಚ್ಚಕ್ಕೆ ಕಾರಣವಾಗಬಹುದು. ಹಾಗೆಯೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮೊದಲು, ಚಾಸಿಸ್ ಸಂಖ್ಯೆಯನ್ನು ಪರಿಶೀಲಿಸಿ. ಪೇಪರ್ ಮೇಲೆ ಬರೆದಿರುವ ಚಾಸಿಸ್ ನಂಬರ್ ಹಾಗೂ ಕಾರಿನ ಮೇಲೆ ಬರೆದಿರುವ ಚಾಸಿಸ್ ನಂಬರ್ ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಿ. ಇವೆರಡೂ ಬೇರೆ ಬೇರೆ ನಂಬರ್‌ಗಳನ್ನು ಹೊಂದಿದ್ದರೆ ಕಾರನ್ನು ಖರೀದಿಸಬೇಡಿ.
ಇದನ್ನೂ ಓದಿ: ಕಾರಿನ ಮೇಲೆ ಬರೆದ RWD, FWD ಮತ್ತು 4WD ಯ ಅರ್ಥವೇನು ಗೊತ್ತೇ?: ಇದನ್ನು ತಿಳಿದುಕೊಳ್ಳಿ
ಮೇಲಿಂದ ಮೇಲೆ ನೋಡಿಕೊಂಡು ಕಾರನ್ನು ಖರೀದಿಸಬೇಡಿ. ಒಮ್ಮೆ ಕಾರಿನ ಟೆಸ್ಟ್ ಡ್ರೈವ್ ಮಾಡಿ. ಸುಮಾರು 20 ನಿಮಿಷಗಳ ಕಾಲ ವಿವಿಧ ವೇಗದಲ್ಲಿ ಕಾರನ್ನು ಚಾಲನೆ ಮಾಡಿ. ಅದರ ಸಹಾಯದಿಂದ, ನೀವು ಕಾರಿನ ಸ್ಥಿತಿ ಮತ್ತು ಆಕಾರವನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗುತ್ತದೆ ಮತ್ತು ಕಾರಿನಲ್ಲಿ ಯಾವುದೇ ದೋಷವಿದ್ದರೆ, ಅದು ಕೂಡ ತಿಳಿಯುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ