ಕಾರಿನ ಮೇಲೆ ಬರೆದ RWD, FWD ಮತ್ತು 4WD ಯ ಅರ್ಥವೇನು ಗೊತ್ತೇ?: ಇದನ್ನು ತಿಳಿದುಕೊಳ್ಳಿ
ಎಲ್ಲ ಕಾರಿನ ಕಂಪನಿಗಳು FWD, RWD ಮತ್ತು 4WD ನಂತಹ ಪದಗಳನ್ನು ಬರೆಯುತ್ತವೆ. ಅದರಲ್ಲಿ ಏನಾದರೂ ಅರ್ಥವಿದೆಯೇ? ಈ ಪದಗಳ ಪೂರ್ಣ ರೂಪ ಏನು? ಮತ್ತು ಅವುಗಳ ಕಾರ್ಯವೇನು? ಎಂದು ಇಂದು ನಾವು ನಿಮಗೆ ವಿವರಿಸುತ್ತೇವೆ.
ನೀವು ಹೊಸ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕಾರಿನಲ್ಲಿ ಲಭ್ಯವಿರುವ ತಂತ್ರಜ್ಞಾನ ಮತ್ತು ವಿವಿಧ ಡ್ರೈವಿಂಗ್ ಮೋಡ್‌ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸರಿಯಾದ ಮಾಹಿತಿಯಿಲ್ಲದೆ ನೀವು ಹೊಸ ಕಾರು ಖರೀದಿಸಿದರೆ, ಬಳಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ. ನೀವು ಕಾರಿನ ಮೇಲೆ FWD, RWD ಮತ್ತು 4WD ನಂತಹ ಪದಗಳನ್ನು ಬರೆದಿರುವುದು ನೋಡಿರಬಹುದು.
ಅಷ್ಟಕ್ಕೂ ಇದನ್ನು ಏಕೆ ಬರೆಯಲಾಗಿದೆ ಎಂದು ನಿಮಗೆ ತಿಳಿದಿದೆಯೇ?.
ಎಲ್ಲ ಕಾರಿನ ಕಂಪನಿಗಳು FWD, RWD ಮತ್ತು 4WD ನಂತಹ ಪದಗಳನ್ನು ಬರೆಯುತ್ತವೆ. ಅದರಲ್ಲಿ ಏನಾದರೂ ಅರ್ಥವಿದೆಯೇ? ಈ ಪದಗಳ ಪೂರ್ಣ ರೂಪ ಏನು? ಮತ್ತು ಅವುಗಳ ಕಾರ್ಯವೇನು? ಎಂದು ಇಂದು ನಾವು ನಿಮಗೆ ವಿವರಿಸುತ್ತೇವೆ.
FWD ಎಂದರೇನು?
ಈ ಮೂರು ಅಕ್ಷರಗಳ ಪೂರ್ಣ ರೂಪವೆಂದರೆ ಫ್ರಂಟ್ ವೀಲ್ ಡ್ರೈವ್. ಈ ಸೆಟಪ್ ಅನ್ನು ಬಳಸಿದ ಕಾರಿನಲ್ಲಿ, ಎಂಜಿನ್ ನೇರವಾಗಿ ಮುಂಭಾಗದ ಟೈಯರ್ಗೆ ಶಕ್ತಿಯನ್ನು ಕಳುಹಿಸುತ್ತದೆ. ಈ ಸೆಟಪ್ ಸಾಮಾನ್ಯವಾಗಿ ಫ್ಯಾಮಿಲಿ ಕಾರು ಮತ್ತು ಕಾಂಪ್ಯಾಕ್ಟ್ ಕಾರುಗಳಲ್ಲಿ ಕಂಡುಬರುತ್ತದೆ. ಇತರ ಡ್ರೈವಿಂಗ್ ಮೋಡ್‌ಗಳಿಗೆ ಹೋಲಿಸಿದರೆ, ಈ ಸೆಟಪ್‌ನೊಂದಿಗೆ ವಾಹನವು ಹೆಚ್ಚು ಮೈಲೇಜ್ ನೀಡುತ್ತದೆ. ಇದಲ್ಲದೆ, ಫ್ರಂಟ್ ವೀಲ್ ಡ್ರೈವ್ ಕಾರು ಚಾಲಕನಿಗೆ ಜಾರು ರಸ್ತೆಯಲ್ಲಿ ಅತ್ಯುತ್ತಮ ಹಿಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಮಾರುತಿ ಸುಜುಕಿ ವ್ಯಾಗನ್ಆರ್, ಟಾಟಾ ನೆಕ್ಸನ್ ಮತ್ತು ಹ್ಯುಂಡೈ ಐ20 ಇತ್ಯಾದಿ.
RWD ಎಂದರೇನು?
ಈ ಮೂರು ಅಕ್ಷರಗಳ ಪೂರ್ಣ ರೂಪ ಏನೆಂದರೆ ರೇರ್ ವೀಲ್ ಡ್ರೈವ್ ಈ ರೀತಿಯ ಸೆಟಪ್ ಹೊಂದಿರುವ ವಾಹನದಲ್ಲಿ, ಎಂಜಿನ್ ನೇರವಾಗಿ ವಾಹನದ ಹಿಂಭಾಗದ ಟೈರ್‌ಗೆ ಶಕ್ತಿಯನ್ನು ಕಳುಹಿಸುತ್ತದೆ. ಈ ಸೆಟಪ್ ಹೆಚ್ಚಾಗಿ ಟ್ರಕ್‌ಗಳು, ಸ್ಪೋರ್ಟ್ಸ್ ಕಾರ್‌ಗಳು ಮತ್ತು ಸೆಡಾನ್‌ಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಮುಂಭಾಗದ ಚಕ್ರಗಳು ಮುಕ್ತವಾಗಿರುತ್ತವೆ. ಟೊಯೊಟಾ ಇನ್ನೋವಾ ಹೈಕ್ರಾಸ್, ಮಹೀಂದ್ರ ಬೊಲೆರೊ ಮತ್ತು ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಕಾರುಗಳು ಈ ವೈಶಿಷ್ಟ್ಯವನ್ನು ಒಳಹೊಂಡಿದೆ.
ಇದನ್ನೂ ಓದಿ: ಇದು ಜಗತ್ತಿನ ಅತ್ಯಂತ ದುಬಾರಿ ಕಾರು: ಸೊನ್ನೆಗಳನ್ನು ಎಣಿಸಿಯೇ ಸುಸ್ತಾಗುವಷ್ಟಿದೆ ಇದರ ಬೆಲೆ
4WD ಎಂದರೇನು?
ಇದರ ಮೂರು ಅಕ್ಷರಗಳ ಪೂರ್ಣ ಅರ್ಥ ಫೋರ್ ವೀಲ್ ಡ್ರೈವ್. ನಾಲ್ಕು-ಚಕ್ರ ಚಾಲನೆಯೊಂದಿಗೆ ಬರುವ ಕಾರಿನಲ್ಲಿ, ಎಂಜಿನ್ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ. 4WD ಅನ್ನು 4*4 ಎಂದು ಕೂಡ ಕರೆಯಲಾಗುತ್ತದೆ. ಆಫ್-ರೋಡಿಂಗ್‌ನಂತಹ ಸವಾಲುಗಳಿಗೆ ಸಿದ್ಧವಾಗಿರುವ ವಾಹನಗಳಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ವೈಶಿಷ್ಟ್ಯವು ಹೆಚ್ಚಾಗಿ SUV ಗಳಲ್ಲಿ ಕಂಡುಬರುತ್ತದೆ, ಈ ವೈಶಿಷ್ಟ್ಯದ ಸಹಾಯದಿಂದ ವಾಹನವು ಮಣ್ಣು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಆರಾಮವಾಗಿ ಚಲಿಸಬಹುದು. ಉದಾಹರಣೆಗೆ ಮಹೀಂದ್ರಾ ಥಾರ್, ಮಾರುತಿ ಜಿಮ್ಮಿ ಕಾರಿನಲ್ಲಿ ಈ ವೈಶಿಷ್ಟ್ಯ ನೀಡಲಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 18 November 24