Yamaha: ಸ್ಪೋರ್ಟಿ ವಿನ್ಯಾಸದ ಯಮಹಾ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ

|

Updated on: Sep 29, 2023 | 8:30 PM

ಯಮಹಾ ಕಂಪನಿ ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಹೊಸದಾಗಿ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ ಮಾಡಿದೆ.

Yamaha: ಸ್ಪೋರ್ಟಿ ವಿನ್ಯಾಸದ ಯಮಹಾ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ
ಯಮಹಾ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ
Follow us on

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ(Yamaha) ಕಂಪನಿ ತನ್ನ ಜನಪ್ರಿಯ ವೈಜೆಡ್ಎಫ್-ಆರ್15ಎಂ, ಎಂಟಿ-15 ವಿ2.0 ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಗಳಲ್ಲಿ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಗಳು ಎಕ್ಸ್ ಶೋರೂಂ ಪ್ರಕಾರ ರೂ. 92,330 ರಿಂದ 1,97,200 ಬೆಲೆ ಹೊಂದಿವೆ.

ಆಕರ್ಷಕ ವಿನ್ಯಾಸದ ವೈಜೆಡ್ಎಫ್-ಆರ್15ಎಂ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 1,97,200 ಬೆಲೆ ಹೊಂದಿದ್ದರೆ, ಎಂಟಿ-15 ವಿ2.0 ಆವೃತ್ತಿಯು ರೂ. 172,700 ಬೆಲೆ ಹೊಂದಿದೆ. ಹಾಗೆಯೇ ರೇ ಜೆಡ್ಆರ್ 125 ಎಫ್ಐ ಆವೃತ್ತಿಯು ರೂ. 92,330 ಬೆಲೆ ಪಡೆದುಕೊಂಡಿದ್ದು, ಇವು ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಇದನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಆವೃತ್ತಿಗಳನ್ನು ಮಾರಾಟ ಮಾಡುತ್ತಿರುವ ಯಮಹಾ ಕಂಪನಿಯು ರೇಸಿಂಗ್ ಪ್ರಿಯರಿಗಾಗಿ ದಿ ಕಾಲ್ ಆಫ್ ದಿ ಬ್ಲೂ ಅಭಿಯಾನದಡಿಯಲ್ಲಿ ಮಾನ್‌ಸ್ಟರ್ ಎನರ್ಜಿ ಮೋಟೋಜಿಪಿ ಆವೃತ್ತಿಗಳ ಅತ್ಯಾಕರ್ಷಕ ಶ್ರೇಣಿಯನ್ನು ಪರಿಚಯಿಸಿದೆ. ಹೊಸ ಆವೃತ್ತಿಗಳು ದೇಶಾದ್ಯಂತ ಹರಡಿಕೊಂಡಿರುವ ಯಮಹಾ ಕಂಪನಿಯ ಎಲ್ಲಾ ಪ್ರೀಮಿಯಂ ಬ್ಲೂ ಸ್ಕ್ವೇರ್ ಶೋರೂಂಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆವೃತ್ತಿಗಳು ಆಕರ್ಷಕ ಸ್ಪೋರ್ಟಿ ಗ್ರಾಫಿಕ್ಸ್ ಪಡೆದುಕೊಳ್ಳಲಿವೆ.

ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಗಳಲ್ಲಿ ಯಮಹಾ ಕಂಪನಿಯು ಫ್ಯೂಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಮೇಲೆ ಆಕರ್ಷಕವಾದ ಗ್ರಾಫಿಕ್ ನೀಡಲಾಗಿದ್ದು, ಇವು ರೇಸಿಂಗ್ ಹಿನ್ನಲೆಯನ್ನು ಪ್ರದರ್ಶಿಸುತ್ತವೆ. ಆದರೆ ಹೊಸ ಆವೃತ್ತಿಗಳಲ್ಲಿನ ಎಂಜಿನ್ ಆಯ್ಕೆ ಸಾಮಾನ್ಯ ಮಾದರಿಗಳಲ್ಲಿರುವಂತೆ ಮುಂದುವರೆಯಲಿದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೇಡಿಕೆ ದಾಖಲಿಸಲು ಇವು ಸಹಕಾರಿಯಾಗಲಿವೆ.

ಇದನ್ನೂ ಓದಿ:  ಹೊಸ ಫೀಚರ್ಸ್ ಗಳೊಂದಿಗೆ ಹೋಂಡಾ ಆಕ್ವಿವಾ ಲಿಮಿಟೆಡ್ ಎಡಿಷನ್ ಬಿಡುಗಡೆ

ಯಮಹಾ ಕಂಪನಿಯು ಸದ್ಯಕ್ಕೆ ವೈಜೆಡ್ಎಫ್-ಆರ್15ಎಂ, ಎಂಟಿ-15 ವಿ2.0 ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಗಳಲ್ಲಿ ಮಾತ್ರ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಎರೋಎಕ್ಸ್ 155 ಸ್ಕೂಟರ್ ಮಾದರಿಯಲ್ಲೂ ಹೊಸ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಇನ್ನು ವೈಜೆಡ್ಎಫ್-ಆರ್15ಎಂ ಬೈಕ್ ಮಾದರಿಯು 155ಸಿಸಿ ಮತ್ತು ಎಂಟಿ-15 ವಿ2.0 155ಸಿಸಿ ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಯಲ್ಲಿ 125 ಸಿಸಿ ಎಂಜಿನ್ ಆಯ್ಕೆ ನೀಡಲಾಗಿದ್ದು, ಇವು ಬ್ಲ್ಯೂ ಕೋರ್ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿರಲಿವೆ.

Published On - 8:27 pm, Fri, 29 September 23