ಸ್ಕೋಡಾ ಜನಪ್ರಿಯ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್

|

Updated on: Dec 07, 2023 | 9:52 PM

ವರ್ಷಾಂತ್ಯದ ವೇಳೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಹೊಸ ಆಫರ್ ಗಳೊಂದಿಗೆ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದು, ಸ್ಕೋಡಾ ಇಂಡಿಯಾ ಕಂಪನಿಯು ಸಹ ತನ್ನ ಹೊಸ ಕಾರುಗಳ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದೆ.

ಸ್ಕೋಡಾ ಜನಪ್ರಿಯ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಡಿಸ್ಕೌಂಟ್
ಸ್ಕೋಡಾ ಕಾರುಗಳು
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ಇಂಡಿಯಾ (Skoda India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಗ್ರಾಹಕರು ಕೊಡಿಯಾಕ್, ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್ ಗಳಲ್ಲಿ ಸ್ಕೋಡಾ ಕಂಪನಿಯು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಆಕರ್ಷಕ ಬೆಲೆಯಲ್ಲಿ ಸರ್ವಿಸ್ ಪ್ಯಾಕೇಜ್ ಗಳನ್ನು ನೀಡುತ್ತಿದ್ದು, ಹೊಸ ಆಫರ್ ಗಳು ಈ ವರ್ಷಾಂತ್ಯದವರೆಗೆ ಲಭ್ಯವಿರಲಿವೆ.

ಹೊಸ ವರ್ಷ ಆಗಮನಕ್ಕೂ ಮುನ್ನ 2023ರ ಆವೃತ್ತಿಗಳ ಸ್ಟಾಕ್ ಮುಕ್ತಾಯಗೊಳಿಸಲು ಮುಂದಾಗುತ್ತಿರುವ ವಿವಿಧ ಕಾರು ಕಂಪನಿಗಳು ಡಿಸ್ಕೌಂಟ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಸ್ಕೋಡಾ ಇಂಡಿಯಾ ಕಂಪನಿಯು ಸಹ ಕೊಡಿಯಾಕ್, ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಹೊಸ ಆಫರ್ ನಲ್ಲಿ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಖರೀದಿಯ ಮೇಲೆ ರೂ. 1.25 ಲಕ್ಷ ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ಗ್ರಾಹಕರಿಗೆ 4 ವರ್ಷ ಅಥವಾ 60 ಸಾವಿರ ಕಿ.ಮೀ ತನಕ ಉಚಿತ ಸರ್ವಿಸ್ ಪ್ಯಾಕೇಜ್ ಸಿಗಲಿದೆ. ಕುಶಾಕ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 10.89 ಲಕ್ಷದಿಂದ ರೂ. 19.99 ಲಕ್ಷ ಬೆಲೆ ಹೊಂದಿದೆ.

ಸ್ಕೋಡಾ ಹೊಸ ಆಫರ್ ನಲ್ಲಿ ಸ್ಲಾವಿಯಾ ಸೆಡಾನ್ ಮಾದರಿಯು ಸಹ ಅತ್ಯುತ್ತಮ ಆಫರ್ ಪಡೆದುಕೊಂಡಿದ್ದು, ಈ ಕಾರಿನ ಮೇಲೆ ಒಟ್ಟು ರೂ. 1.50 ಲಕ್ಷ ಮೌಲ್ಯದ ಆಫರ್ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ 4 ವರ್ಷ ಅಥವಾ 60 ಸಾವಿರ ಕಿ.ಮೀ ತನಕ ಉಚಿತ ಸರ್ವಿಸ್ ಪ್ಯಾಕೇಜ್ ಪಡೆದುಕೊಳ್ಳಲಿದ್ದು, ಇದು ಕೂಡಾ ಕುಶಾಕ್ ಮಾದರಿಯಲ್ಲಿಯೇ 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದರೊಂದಿಗೆ ಇದು ಎಕ್ಸ್ ಶೋರೂಂ ಪ್ರಕಾರ ರೂ. 10.89 ಲಕ್ಷದಿಂದ ರೂ. 19.12 ಲಕ್ಷ ಬೆಲೆ ಹೊಂದಿದ್ದು, ಇದು ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳ ಪ್ರಬಲ ಪೈಪೋಟಿಯಾಗಿದೆ.

ಇದನ್ನೂ ಓದಿ: ಭವಾನಿ ರೇವಣ್ಣರ ಒಂದೂವರೆ ಕೋಟಿ ಕಾರಿನಲ್ಲಿ ಏನೆಲ್ಲಾ ಲಗ್ಷುರಿ ಫೀಚರ್ಸ್ ಗಳಿವೆ ನೋಡಿ..

ಹಾಗೆಯೇ ಸೋಡ್ಕಾ ಕಂಪನಿಯು ಕೊಡಿಯಾಕ್ ಎಸ್ ಯುವಿ ಕಾರು ಖರೀದಿಯ ಮೇಲೆ ರೂ. 1.96 ಲಕ್ಷ ಮೌಲ್ಯದ ಆಫರ್ ನೀಡುತ್ತಿದ್ದು, ಆಫರ್ ನಂತರ ಕೊಡಿಯಾಕ್ ಬೆಲೆಯನ್ನು ರೂ. 41.95 ಲಕ್ಷದಿಂದ ರೂ. 39.99 ಲಕ್ಷ ಬೆಲೆ ಇಳಿಕೆಯಾಗಿದೆ. ಹೊಸ ಆಫರ್ ನಲ್ಲಿ ಕೊಡಿಯಾಕ್ ಕಾರು ಖರೀದಿದಾರರಿಗೆ ರೂ. 40 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್, ರೂ. 30 ಸಾವಿರ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು 4 ವರ್ಷ ಅಥವಾ 60 ಸಾವಿರ ಕಿ.ಮೀ ತನಕ ಉಚಿತ ಸರ್ವಿಸ್ ಪ್ಯಾಕೇಜ್ ಸಿಗಲಿದೆ. ಸದ್ಯ ಮಾರುಕಟ್ಟೆಯಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ಹೊಸ ಕೊಡಿಯಾಕ್ ಕಾರು ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 190 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಹೊಂದಿದೆ.

Published On - 8:45 pm, Thu, 7 December 23