Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವಾನಿ ರೇವಣ್ಣರ ಒಂದೂವರೆ ಕೋಟಿ ಕಾರಿನಲ್ಲಿ ಏನೆಲ್ಲಾ ಲಗ್ಷುರಿ ಫೀಚರ್ಸ್ ಗಳಿವೆ ನೋಡಿ..

ಭಾರತದಲ್ಲಿ ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ಸೆಲೆಬ್ರಿಟಿಗಳ ನೆಚ್ಚಿನ ಐಷಾರಾಮಿ ಕಾರುಗಳಲ್ಲಿ ಟೊಯೊಟಾ ವೆಲ್‌ಫೈರ್ ಕೂಡಾ ಒಂದಾಗಿದ್ದು, ಇತ್ತೀಚೆಗೆ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ವೆಲ್‌ಫೈರ್ ಕಾರು ಅಪಘಾತಕ್ಕೀಡಾಗಿ ಭಾರೀ ಸದ್ದು ಮಾಡುತ್ತಿದೆ.

ಭವಾನಿ ರೇವಣ್ಣರ ಒಂದೂವರೆ ಕೋಟಿ ಕಾರಿನಲ್ಲಿ ಏನೆಲ್ಲಾ ಲಗ್ಷುರಿ ಫೀಚರ್ಸ್ ಗಳಿವೆ ನೋಡಿ..
ಟೊಯೊಟಾ ವೆಲ್‌ಫೈರ್
Follow us
Praveen Sannamani
|

Updated on: Dec 05, 2023 | 4:07 PM

ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ಸೆಲೆಬ್ರಿಟಿಗಳ ನೆಚ್ಚಿನ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಟೊಯೊಟಾ ವೆಲ್‌ಫೈರ್ (Toyota Vellfire) ಎಂಪಿವಿ ಕಾರು ಮಾದರಿಯು ಇತ್ತೀಚೆಗೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಇದು ತನ್ನದೇ ಆದ ಹೊಸ ವೈಶಿಷ್ಟ್ಯತೆಗಳೊಂದಿಗೆ ಆರಾಮದಾಯಕವಾದ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕಾಗಿಯೇ ಕರ್ನಾಟಕದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿರುವ ವೆಲ್‌ಫೈರ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ವೆಲ್‌ಫೈರ್ ಕಾರು ಅಪಘಾತಕ್ಕೀಡಾದ ನಂತರ ಹೊಸ ಕಾರಿನ ಕುರಿತಾಗಿ ಭಾರೀ ಚರ್ಚೆಗಳು ಆರಂಭವಾಗಿವೆ.

Toyota Vellfire (7)

ಭಾರತದಲ್ಲಿ ಟೊಯೊಟಾ ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಹೊಸ ವೆಲ್‌ಫೈರ್ ಪರಿಚಯಿಸಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಸದ್ಯ ಭಾರತದಲ್ಲಿ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಮಾರಾಟವಾಗುತ್ತಿದ್ದು, ಇದರಲ್ಲಿ ಹೈ ವೆರಿಯೆಂಟ್ ಬೆಂಗಳೂರು ಆನ್ ರೋಡ್ ಪ್ರಕಾರ ರೂ. 1.49 ಕೋಟಿ ಬೆಲೆ ಹೊಂದಿದ್ದರೆ ವಿಐಪಿ ಎಕ್ಸಿಕ್ಯೂಟಿವ್ ಲಾಂಜ್ ವೆರಿಯೆಂಟ್ ರೂ. 1.61 ಕೋಟಿ ಬೆಲೆ ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ವೆಲ್‌ಫೈರ್ ಕಾರು ಹೈ ಎಂಡ್ ವಿಐಪಿ ಎಕ್ಸಿಕ್ಯೂಟಿವ್ ಲಾಂಜ್ ಆವೃತ್ತಿಯಾಗಿದ್ದು, ಇದು ಹಲವಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಅರಾಮದಾಯಕ ಪ್ರಯಾಣ ಒದಗಿಸುತ್ತದೆ. ವೆಲ್‌ಫೈರ್ ಎಂಪಿವಿ ಕಾರು ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಅಭಿವೃದ್ದಿಗೊಂಡಿದ್ದು, ಇದು 4,935 ಎಂಎಂ ಉದ್ದ, 1,850 ಎಂಎಂ ಅಗಲ, 1,895 ಎಂಎಂ ಎತ್ತರ ಹಾಗೂ 3,000 ಎಂಎಂ ವೀಲ್ಹ್ ಬೆಸ್‌ನೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯ ಹೊಂದಿದೆ.

ಹೊಸ ಕಾರಿನ ಒಳಭಾಗವು ಕೂಡಾ ಸಾಕಷ್ಟು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಸಿದ್ದಗೊಂಡಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಇದರಲ್ಲಿ 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಚ್‌ಡಿಎಂಐನೊಂದಿಗೆ ವೈ-ಪೈ ಸೌಲಭ್ಯವನ್ನು ಹೊಂದಿರುವ 13-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ರೂಫ್ ಲೈಟ್ ಸಿಸ್ಟಂ ಮತ್ತು 17-ಸ್ಪೀಕರ್ಸ್ ಹೊಂದಿರುವ ಜೆಬಿಎಲ್ ಆಡಿಯೋ ಸಿಸ್ಟಂ ನೀಡಲಾಗಿದೆ.

Toyota Vellfire (7)

5 ವೆಲ್‌ಫೈರ್ ಕಾರಿನಲ್ಲಿ ಪ್ರಮುಖವಾಗಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಪುಷ್‌ಬ್ಯಾಕ್ ಸೌಲಭ್ಯದೊಂದಿಗೆ ಆರ್ಮ್‌ರೆಸ್ಟ್ ಮತ್ತು ಲೆಗ್ ರೆಸ್ಟ್ ಒದಗಿಸುತ್ತದೆ. ಜೊತೆಗೆ ಕ್ಯಾಪ್ಟನ್ ಸೀಟುಗಳ ಮತ್ತೊಂದು ವೈಶಿಷ್ಟ್ಯತೆ ಅಂದರೆ ಚಳಿಗಾಲದಲ್ಲಿ ಬಿಸಿ ಹವೆ ಮತ್ತು ಬಿಸಿ ವಾತಾವರಣವಿದ್ದಲ್ಲಿ ತಂಪು ಹೊರಸೂಸುವ ಮೂಲಕ ಧೀರ್ಘಕಾಲಿಕ ಪ್ರಯಾಣವನ್ನು ಸುಲಭಗೊಳಿಸುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ವೆಹಿಕಲ್ ಡೈನಾಮಿಕ್ ಇಂಟೆಗ್ರೆಟೆಡ್ ಮ್ಯಾನೆಜ್‌ಮೆಂಟ್ ತಂತ್ರಜ್ಞಾನವನ್ನು(ವಿಡಿಐಎಂ) ಬಳಕೆ ಮಾಡಲಾಗಿದ್ದು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, 7 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಪ್ರೀ-ಕೊಲಿಷನ್ ಸೇಫ್ಟಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೇರಿದಂತೆ ಹಲವು ಭದ್ರತಾ ವೈಶಿಷ್ಟ್ಯತೆಗಳಿವೆ.

Toyota Vellfire (9)

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಇನ್ನು ವೆಲ್‌ಫೈರ್ ಕಾರಿನಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್ ಸಿಸ್ಟಂ ಹೊಂದಿದೆ. ಇದು 142 ಕೆವಿ ಪವರ್ ಮತ್ತು 240 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಭಾಗ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಶಕ್ತಿ ಒದಗಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 19.28 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.