Year Ender 2024: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್​ಯುವಿ ಕಾರು ಯಾವುದು ಗೊತ್ತೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2024 | 4:05 PM

ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಿಂದ 1,86,958 ಯೂನಿಟ್ ಟಾಟಾ ಪಂಚ್ ಮಾದರಿಯ ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಕಳೆದ ವರ್ಷಕ್ಕಿಂತ ಈ ವರ್ಷ ಟಾಟಾ ಪಂಚ್‌ನ ಹೆಚ್ಚಿನ ಘಟಕಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಕಂಪನಿಯು ತನ್ನ ಮೈಕ್ರೋ ಎಸ್​ಯುವಿಯ 1,50,182 ಘಟಕಗಳನ್ನು ಮಾರಾಟ ಮಾಡಿತ್ತು.

Year Ender 2024: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್​ಯುವಿ ಕಾರು ಯಾವುದು ಗೊತ್ತೇ?
ಸಾಂದರ್ಭಿಕ ಚಿತ್ರ
Follow us on

ಕೊರೋನಾ ಅವಧಿಯ ನಂತರ ಈ ವರ್ಷ ಆಟೋಮೊಬೈಲ್ ಮಾರಾಟವು ಭಾರಿ ಬೆಳವಣಿಗೆ ಕಂಡಿದೆ. ದ್ವಿಚಕ್ರ, ನಾಲ್ಕು ಚಕ್ರ, ವಾಣಿಜ್ಯ ವಾಹನ ಹೀಗೆ ಎಲ್ಲ ರೀತಿಯ ವಾಹನಗಳು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ ವಾಹನಗಳ ಮಾರಾಟ ಭರ್ಜರಿ ಆಗಿ ನಡೆಯುತ್ತಿದೆ. ಈ ಮೂಲಕ ಎಸ್ ಯುವಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸೇಲ್ ಆಗುತ್ತಿವೆ. ಇದರಲ್ಲಿ ಟಾಟಾ ಮೋಟಾರ್ಸ್​ನ ಟಾಟಾ ಪಂಚ್ ಇತರೆ ಎಲ್ಲ ಕಂಪನಿಯ ಕಾರುಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.

ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಿಂದ 1,86,958 ಯೂನಿಟ್ ಟಾಟಾ ಪಂಚ್ ಮಾದರಿಯ ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಕಳೆದ ವರ್ಷಕ್ಕಿಂತ ಈ ವರ್ಷ ಟಾಟಾ ಪಂಚ್‌ನ ಹೆಚ್ಚಿನ ಘಟಕಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಕಂಪನಿಯು ತನ್ನ ಮೈಕ್ರೋ ಎಸ್​ಯುವಿಯ 1,50,182 ಘಟಕಗಳನ್ನು ಮಾರಾಟ ಮಾಡಿತ್ತು.

ಟಾಟಾ ಪಂಚ್:

ಟಾಟಾ ಪಂಚ್ ಕಾರನ್ನು ವಾಲ್ಯೂ ಫಾರ್ ಮನಿ ಎಂದು ತಜ್ಞರು ಹೇಳುತ್ತಾರೆ. ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ 1,86,958 ಯುನಿಟ್ ಟಾಟಾ ಪಂಚ್ ಮಾಡೆಲ್ ಕಾರುಗಳನ್ನು ಮಾರಾಟ ಮಾಡಿದೆ. ಇದು ಪೆಟ್ರೋಲ್, ಸಿಎನ್​ಜಿ ಮತ್ತು ಎಲೆಕ್ಟ್ರಿಕ್ ವೆಹಿಕಲ್ (EV) ಆವೃತ್ತಿಗಳಲ್ಲಿ ಲಭ್ಯವಿದೆ. ಸುರಕ್ಷತೆಗೆ ಹೆಸರುವಾಸಿಯಾಗಿರುವ ಟಾಟಾದ ಈ ಕಾರು 5 ಸ್ಟಾರ್ ರೇಟಿಂಗ್ ಅನ್ನು ಸಹ ಹೊಂದಿದೆ.

ಟಾಟಾ ಪಂಚ್‌ 88PS ಗರಿಷ್ಠ ಶಕ್ತಿ ಮತ್ತು 115 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ರೆವೊಟ್ರಾನ್ ಪೆಟ್ರೋಲ್ ಎಂಜಿನ್ 1.2 ಲೀಟರ್ ಸ್ಥಳಾಂತರವನ್ನು ಹೊಂದಿದೆ. ಇದು 5-ಸ್ಪೀಡ್ MT ಮತ್ತು 5-ಸ್ಪೀಡ್ AMT ಆಯ್ಕೆಗಳೊಂದಿಗೆ ಬರುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 6.13 ಲಕ್ಷದಿಂದ ಆರಂಭವಾಗಿ 10.15 ಲಕ್ಷ ರೂ. ವರೆಗೆ ಇದೆ. ಎಲೆಕ್ಟ್ರಿಕ್ ವಾಹನವು ರೂ. 9.99 ಲಕ್ಷದಿಂದ ಪ್ರಾರಂಭವಾಗಿ ರೂ. 12.29 ಲಕ್ಷದವರೆಗೆ ಮಾರಾಟವಾಗುತ್ತದೆ.

ಹುಂಡೈ ಕ್ರೆಟಾ:

ಈ ಕಾರು ನವೆಂಬರ್‌ವರೆಗೆ 1,74,311 ಯುನಿಟ್‌ಗಳನ್ನು ಮಾರಾಟ ಮಾಡಿದೆ. 52 ರೂಪಾಂತರಗಳು ಮತ್ತು 6 ಬಣ್ಣಗಳಲ್ಲಿ ಲಭ್ಯವಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ, ಐಷಾರಾಮಿ ಇಂಟೀರ್ಯರ್, ಸೌಕರ್ಯಗಳು ಮತ್ತು ಮೈಲೇಜ್ ವಿಷಯದಲ್ಲಿ ಅತ್ಯುತ್ತಮವಾಗಿದೆ. ಇದರ ಪೆಟ್ರೋಲ್ ಮಾದರಿಗಳು 10,99,900 ಯಿಂದ 20,14,900 ಎಕ್ಸ್ ಶೋರೂಂ ಬೆಲೆಯಲ್ಲಿದೆ. ಅದೇ ರೀತಿ ಡೀಸೆಲ್ ಮಾದರಿಗಳು 12,55,700 ರೂ. ಗಳಿಂದ 20,29,800 ರೂ. ಗಳವರೆಗಿನ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಮಾರುತಿ ಸುಜುಕಿ ಬ್ರೇಝಾ:

ಈ ಕಾರು ನವೆಂಬರ್‌ವರೆಗೆ 1,70,824 ಯುನಿಟ್‌ಗಳನ್ನು ಮಾರಾಟ ಮಾಡಿದೆ. 15 ರೂಪಾಂತರಗಳಲ್ಲಿ ಐದು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಯ ಎಕ್ಸ್ ಶೋ ರೂಂ ಬೆಲೆ 8,33,969 ರಿಂದ 14,14,000 ರೂ. ಗಳವರೆಗೆ ಆಗಿದೆ. ಅಂತೆಯೇ, ಸಿಎನ್‌ಜಿ ಮಾದರಿಗಳ ಎಕ್ಸ್ ಶೋ ರೂಂ ಬೆಲೆ 9,28,999 ರೂ. ಗಳಿಂದ ಪ್ರಾರಂಭವಾಗಿ 12,25,499 ರೂ. ವರೆಗೆ ಇದೆ.

ಇದನ್ನೂ ಓದಿ: 5 ದಿನ ಕಾಯಿರಿ: ಭಾರತದಲ್ಲಿ ಬಿಡುಗಡೆ ಆಗುತ್ತಿದೆ ಬಹುನಿರೀಕ್ಷಿತ ಈ ಹೊಸ SUV ಕಾರು

ಮಹೀಂದ್ರ ಸ್ಕಾರ್ಪಿಯೋ:

ಈ ಕಾರು ನವೆಂಬರ್‌ವರೆಗೆ 1,54,169 ಯುನಿಟ್‌ಗಳನ್ನು ಮಾರಾಟ ಮಾಡಿದೆ. 34 ರೂಪಾಂತರಗಳಲ್ಲಿ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಯ ಎಕ್ಸ್ ಶೋ ರೂಂ ಬೆಲೆ 13,85,200 ರಿಂದ 22,14,700 ರೂ. ಆಗಿದೆ. ಅದೇ ರೀತಿ ಡೀಸೆಲ್ ಮಾದರಿಗಳ ಬೆಲೆ ರೂ. 14,24,700 ರಿಂದ ಆರಂಭವಾಗಿ ರೂ. 24,54,100 ಕ್ಕೊರಗೆ ಇದೆ.

ಟಾಟಾ ನೆಕ್ಸಾನ್:

ಈ ಕಾರು ನವೆಂಬರ್‌ವರೆಗೆ 1,48,075 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರ ಬೆಲೆ 8 ಲಕ್ಷದಿಂದ 15.50 ಲಕ್ಷ ರೂ. ವರೆಗೆ ಇದೆ. ಇದಲ್ಲದೇ, ಮಾರುತಿ ಸುಜುಕಿ ಫ್ರಾಂಕ್ಸ್ ಮಾದರಿಯ 1,45,484 ಯುನಿಟ್‌ಗಳು, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಯ 1,15,654 ಯುನಿಟ್‌ಗಳು, ಹ್ಯುಂಡೈ ವೆನ್ಯೂ ಮಾದರಿಯ 1,07,554 ಯುನಿಟ್‌ಗಳು ಮತ್ತು ಕಿಯಾ ಸೋನೆಟ್ ಮಾಡೆಲ್‌ನ 1,03,353 ಯುನಿಟ್‌ಗಳು ಮಾರಾಟವಾಗಿವೆ.

ಆಟೋಮೊಬೈಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ