Kia Syros: 5 ದಿನ ಕಾಯಿರಿ: ಭಾರತದಲ್ಲಿ ಬಿಡುಗಡೆ ಆಗುತ್ತಿದೆ ಬಹುನಿರೀಕ್ಷಿತ ಈ ಹೊಸ SUV ಕಾರು
ಕಿಯಾ ಇಂಡಿಯಾ ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಈ ತಿಂಗಳು ಡಿಸೆಂಬರ್ 19 ರಂದು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ತಯಾರಿ ನಡೆಸುತ್ತಿದೆ. ಕಿಯಾದ ಈ ಹೊಸ ಎಸ್‌ಯುವಿ ಆಧುನಿಕ ವಿನ್ಯಾಸ, ಫೀಚರ್ಸ್ ಹೊಂದಿದೆ. ಪನೋರಮಿಕ್ ಸನ್‌ರೂಫ್ ಅನ್ನು ಪಡೆಯಲಿದೆ. ಪವರ್ ಮತ್ತು ಮೈಲೇಜ್ ವಿಚಾರದಲ್ಲಿಯೂ ಸಹ, ಈ ವಿಭಾಗದಲ್ಲಿನ ಇತರ ಎಸ್ ಯುವಿ ಗಳಿಗಿಂತ ಉತ್ತಮವಾಗಿದೆ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ಎಸ್‌ಯುವಿಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ. ಈ ಮಾರುಕಟ್ಟೆ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ಪ್ರಸ್ತುತ ಪ್ರತಿಯೊಂದು ಕಾರು ಕಂಪನಿಯು ತನ್ನ ಎಸ್ ಯುವಿ ಅನ್ನು ವಿವಿಧ ಬೆಲೆ ಶ್ರೇಣಿಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇದೀಗ ಕಿಯಾ ಇಂಡಿಯಾ ಕೂಡ ತನ್ನ ಹೊಸ ಎಸ್ ಯುವಿ ಅನ್ನು ಪರಿಚಯಿಸಲು ತಯಾರಿ ನಡೆಸಿದೆ. ಇನ್ನೇನು ಕೇವಲ ಐದು ದಿನಗಳಲ್ಲಿ ಭಾರತದಲ್ಲಿ ಕಿಯಾದ ಹೊಸ ಕಾರು ಅನಾವರಣಗೊಳ್ಳಲಿದೆ.
ಕಿಯಾ ಇಂಡಿಯಾದ ಹೊಸ ಕಿಯಾ ಸಿರೋಸ್ ಡಿಸೆಂಬರ್ 19 ರಂದು ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ. ಈ ಕಾರಿನ ಹಲವು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿವೆ.
ಕಿಯಾ ಸಿರೋಸ್‌ನ ವೈಶಿಷ್ಟ್ಯಗಳು ಏನು?:
ಕಿಯಾ ಸ್ಕಿರೋಸ್‌ನ ಮೊದಲ ಪ್ರದರ್ಶನವು ಡಿಸೆಂಬರ್ 19 ರ ಮಧ್ಯಾಹ್ನ ನಡೆಯಲಿದೆ. ಆದಾಗ್ಯೂ, ಇದಕ್ಕೂ ಮುನ್ನವೇ ಈ ಬಹುನಿರೀಕ್ಷಿತ ಕಾರಿನ ಹೊರಭಾಗ ಹಾಗೂ ಕೆಲ ಒಲಭಾಗದ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ.
ಕಿಯಾ ಸಿರೋಸ್ ಪನೋರಮಿಕ್ ಸನ್‌ರೂಫ್ ಅನ್ನು ಪಡೆಯಲಿದೆ. ಇತ್ತೀಚಿನ ದಿನಗಳಲ್ಲಿ, ಇದು ಬಹುತೇಕ ಎಲ್ಲಾ ಕಾರುಗಳಲ್ಲಿನ ಪ್ರಮುಖ ಲಕ್ಷಣವಾಗಿದೆ. ಇದರ ಜೊತೆಗೆ ಪುಶ್-ಸ್ಟಾರ್ಟ್ ಬಟನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಯುಎಸ್‌ಬಿ ಪೋರ್ಟ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಸಹ ಕಿಯಾ ಸಿರೋಸ್‌ನಲ್ಲಿ ಕಾಣಬಹುದು.
ಈ ಕಾರು 10.2-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಈ ಕಾರಿನ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಸಾಕಷ್ಟು ವಿಶೇಷವಾಗಿದೆ. ಸ್ಟೀರಿಂಗ್‌ನಲ್ಲಿ ಟೆರೈನ್ ಮೋಡ್ ಸೆಲೆಕ್ಟರ್‌ನಂತಹ ಆಯ್ಕೆಗಳು ಇರುವ ಸಾಧ್ಯತೆಯೂ ಇದೆ.
ಕಿಯಾ ಸಿರೋಸ್ ಸುರಕ್ಷತಾ ಸೂಟ್‌ಗಳನ್ನು ಹೊಂದಿದೆ. ಮುಖ್ಯವಾಗಿ ಈ ಕಾರನ್ನು ADAS ವೈಶಿಷ್ಟ್ಯಗಳೊಂದಿಗೆ ಅಳವಡಿಸಬಹುದೆಂದು ನಿರೀಕ್ಷಿಸಲಾಗಿದೆ. ಕಿಯಾ ಸಿರೋಸ್ ತನ್ನ ವಿಭಾಗದಲ್ಲಿ ಹೆಚ್ಚು ತಂತ್ರಜ್ಞಾನವನ್ನು ಹೊಂದಿರುವ ವಾಹನವಾಗಿದೆ ಎಂದು ಹೇಳಲಾಗುತ್ತಿದೆ. 360 ಡಿಗ್ರಿ ಕ್ಯಾಮೆರಾ ಸೆಟಪ್ ಅನ್ನು ಇದರಲ್ಲಿ ಕಾಣಬಹುದು.
ಇದನ್ನೂ ಓದಿ: ಟಾಟಾ ನೆಕ್ಸಾನ್ ಕಾರು ಬೇಕಿದ್ದರೆ ಈ ತಿಂಗಳೇ ಖರೀದಿಸಿ: ಜನವರಿಯಿಂದ ಪ್ರೈಸ್ ಹೈಕ್
ಇನ್ನು ಈ ಕಾರಿನ ಹೊರಭಾಗದ ಬಗ್ಗೆ ಮಾತನಾಡುತ್ತಾ, ಇದು ಎಲ್-ಆಕಾರದ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. ಇದು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್ ಗಳಿಂದ ಕೂಡಿದೆ. 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇದರ EV ಆವೃತ್ತಿಯು ಸಹ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆಯಂತೆ.
ಪವರ್ ಮತ್ತು ಮೈಲೇಜ್ ವಿಚಾರದಲ್ಲಿಯೂ ಸಹ, ಈ ವಿಭಾಗದಲ್ಲಿನ ಇತರ ಎಸ್ ಯುವಿ ಗಳಿಗಿಂತ ಉತ್ತಮವಾಗಿದೆ ಎನ್ನಲಾಗಿದೆ. ಕಿಯಾ ಸಿರೋಸ್ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ ಮತ್ತು ಇತರ ಕಂಪನಿಗಳ ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ. ಈ ಕಾರಿನ ಆರಂಭಿಕ ಬೆಲೆ 8 ಲಕ್ಷಕ್ಕಿಂತ ಹೆಚ್ಚು ಎಂಬ ಮಾತಿದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ