AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car Price Hike: ಟಾಟಾ ನೆಕ್ಸಾನ್ ಕಾರು ಬೇಕಿದ್ದರೆ ಈ ತಿಂಗಳೇ ಖರೀದಿಸಿ: ಜನವರಿಯಿಂದ ಪ್ರೈಸ್ ಹೈಕ್

ಟಾಟಾ ಮೋಟಾರ್ಸ್ ಜನವರಿ 2025 ರಿಂದ ಎಲ್ಲಾ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ಕಾರುಗಳೂ ಸೇರಿವೆ. ವಿವಿಧ ಮಾದರಿಗಳು ಮತ್ತು ರೂಪಾಂತರಗಳ ಆಧಾರದ ಮೇಲೆ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದಿದೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಟಾಟಾ ಮೋಟಾರ್ಸ್ ಈ ಹೆಚ್ಚಳವನ್ನು ಮಾಡುತ್ತಿದೆ.

Car Price Hike: ಟಾಟಾ ನೆಕ್ಸಾನ್ ಕಾರು ಬೇಕಿದ್ದರೆ ಈ ತಿಂಗಳೇ ಖರೀದಿಸಿ: ಜನವರಿಯಿಂದ ಪ್ರೈಸ್ ಹೈಕ್
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Dec 10, 2024 | 3:14 PM

Share

Tata Nexon Price Hike in India: ನೀವು ಹೊಸ ವರ್ಷದಲ್ಲಿ ಕಾರನ್ನು ಖರೀದಿಸಬೇಕು ಎಂಬ ಪ್ಲ್ಯಾನ್​ನಲ್ಲಿದ್ದರೆ ದೊಡ್ಡ ಆಘಾತ ಉಂಟಾಗಲಿದೆ. ಯಾಕೆಂದರೆ ನ್ಯೂ ಈಯರ್​ಗೆ ಕಾರಿನ ದರ ದುಬಾರಿಯಾಗಲಿದೆ. ಅನೇಕ ಆಟೋ ಕಂಪನಿಗಳು ಜನವರಿ 2025 ರಿಂದ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದೀಗ ಈ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಹೆಸರೂ ಸೇರಿಕೊಂಡಿದೆ. ಹೊಸ ವರ್ಷದಂದು ನೀವು ಟಾಟಾ ನೆಕ್ಸಾನ್ ಅಥವಾ ಇನ್ನಾವುದೇ ಟಾಟಾ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈಗಿರುವುದಕ್ಕಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಟಾಟಾ ಮೋಟಾರ್ಸ್ ಜನವರಿ 2025 ರಿಂದ ಎಲ್ಲಾ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ಕಾರುಗಳೂ ಸೇರಿವೆ. ವಿವಿಧ ಮಾದರಿಗಳು ಮತ್ತು ರೂಪಾಂತರಗಳ ಆಧಾರದ ಮೇಲೆ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದಿದೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಟಾಟಾ ಮೋಟಾರ್ಸ್ ಈ ಹೆಚ್ಚಳವನ್ನು ಮಾಡುತ್ತಿದೆ. ಹೊಸ ವರ್ಷದಲ್ಲಿ ಟಾಟಾ ಹೊರತಾಗಿ ಹಲವು ಕಾರು ಕಂಪನಿಗಳ ಕಾರುಗಳು ದುಬಾರಿಯಾಗಲಿವೆ. ಟಾಟಾ ಹೊರತುಪಡಿಸಿ ಇತರ ಯಾವ ಆಟೋ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮಾರುತಿ ಸುಜುಕಿ

ಮಾರುತಿ ಸುಜುಕಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸುಮಾರು 40 ಪ್ರತಿಶತ ಪಾಲನ್ನು ಹೊಂದಿದೆ. ಈ ಕಂಪನಿಯು ಹೊಸ ವರ್ಷದಂದು ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ನಿಯಂತ್ರಕ ಫೈಲಿಂಗ್ ಮೂಲಕ, ಮಾರುತಿ ತನ್ನ ಕಾರುಗಳ ಬೆಲೆಗಳು ಹೊಸ ವರ್ಷದಲ್ಲಿ ಶೇಕಡಾ 4 ರಷ್ಟು ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

ಹುಂಡೈ

ಹ್ಯುಂಡೈ ಮೋಟಾರ್ ಡಿಸೆಂಬರ್ 5 ರಂದು ಕಾರು ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿತ್ತು. ಕಂಪನಿಯು ತನ್ನ ಕಾರುಗಳು 25,000 ರೂ. ಗಳಷ್ಟು ದುಬಾರಿಯಾಗಲಿದೆ ಎಂದು ಹೇಳಿದೆ. ದಕ್ಷಿಣ ಕೊರಿಯಾದ ಕಾರು ಕಂಪನಿಯು ನಿಗದಿತ ಮೊತ್ತ ಅಥವಾ ಶೇಕಡಾವಾರು ಬಗ್ಗೆ ಸ್ಪಷ್ಟಪಡಿಸಿಲ್ಲ. ಆದರೆ, ಜನವರಿ 2025 ರ ಹುಂಡೈ ಕಾರುಗಳಿಗೆ ನೀವು ಹೆಚ್ಚು ಪಾವತಿಸಬೇಕಾಗುತ್ತದೆ.

ಮಹೀಂದ್ರ

ಭಾರತದ ಎಸ್‌ಯುವಿ ಸ್ಪೆಷಲಿಸ್ಟ್ ಕಂಪನಿ ಮಹೀಂದ್ರಾದಿಂದ ಎಸ್‌ಯುವಿಗಳನ್ನು ಖರೀದಿಸುವುದು ದುಬಾರಿಯಾಗಲಿದೆ. ಡಿಸೆಂಬರ್ 7 ರಂದು, ಹೊಸ ವರ್ಷದಂದು SUV ಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಹೀಂದ್ರಾ ಘೋಷಿಸಿದೆ. ಜನವರಿ 2025 ರಲ್ಲಿ, ಥಾರ್, XUV700, ಸ್ಕಾರ್ಪಿಯೋ, XUV3XO, XUV400 ನಂತಹ ಎಸ್​ಯುವಿಗಳ ಬೆಲೆಗಳು ಮೂರು ಪ್ರತಿಶತದಷ್ಟು ಹೆಚ್ಚಾಗುತ್ತವೆ.

JSW ಎಮ್​ಜಿ ಮೋಟಾರ್

ನೀವು ಹೊಸ ವರ್ಷದಲ್ಲಿ JSW ಎಮ್​ಜಿ ಮೋಟಾರ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಬಜೆಟ್ ಅನ್ನು ಹೆಚ್ಚಿಸಬೇಕಾಗುತ್ತದೆ. ಈ ಕಂಪನಿಯ ಕಾರು ಜನವರಿ 2025 ರಿಂದ ದುಬಾರಿ ಆಗಲಿದೆ. ಎಂಜಿ ಮೋಟಾರ್ ತಮ್ಮ ಕಾರುಗಳ ಬೆಲೆಯನ್ನು ಶೇಕಡಾ ಮೂರರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಟಾಟಾ ಪಂಚ್: ಅತಿ ಹೆಚ್ಚು ಸೇಲ್ ಆದ ಟಾಪ್ 10 ಕಾರುಗಳು ಇಲ್ಲಿದೆ

ಐಷಾರಾಮಿ ಕಾರು ಖರೀದಿಯೂ ದುಬಾರಿಯಾಗಲಿದೆ

ಹೊಸ ವರ್ಷದಂದು ಐಷಾರಾಮಿ ಕಾರುಗಳ ಬೆಲೆಯೂ ಹೆಚ್ಚಾಗಲಿದೆ. ಮೂರು ಪ್ರಮುಖ ಐಷಾರಾಮಿ ಕಾರು ಬ್ರಾಂಡ್‌ಗಳಾದ ಮರ್ಸಿಡೀಸ್- ಬೆನ್ಜ್, ಬಿಎಮ್​ಡಬ್ಲ್ಯೂ ಮತ್ತು ಆಡೀ ಬ್ರಾಂಡ್​ಗಳು ಜನವರಿ 2025 ರಿಂದ ಬೆಲೆಗಳಲ್ಲಿ ಹೆಚ್ಚಳವನ್ನು ಘೋಷಿಸಿವೆ. ಹೊಸ ವರ್ಷದಂದು ಈ ಮೂರು ಕಂಪನಿಗಳ ಕಾರುಗಳ ಬೆಲೆಯಲ್ಲಿ ಶೇಕಡಾ ಮೂರರಷ್ಟು ಏರಿಕೆಯಾಗಲಿದೆ.

ಆಟೋಮೊಬೈಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Tue, 10 December 24

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ